ಕಾರ್ಕಳ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ

Picture of RB NEWS

RB NEWS

Bureau Report

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ವಿಭಾಗ )ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಕಾರ್ಕಳ ತಾಲೂಕು ಮಟ್ಟದ ಖೋ ಖೋ ಪಂದ್ಯಾಟವು ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ಅಮ್ಮ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಅವಿನಾಶ್ ಶೆಟ್ಟಿ ನೆರವೇರಿಸಿದರು.

ಪ್ರಾಂಶುಪಾಲೆ ಅನ್ನಪೂರ್ಣ ಕಾಮತ್ ಮಾತನಾಡಿ, ಕ್ರೀಡಾ ಮನೋಭಾವದಿಂದ ಆಟವಾಡುವಂತೆ ಕ್ರೀಡಾಳುಗಳಿಗೆ ತಿಳಿಸಿದರು.

ಸಮಾರಂಭದಲ್ಲಿ ಸಿಬಿಸಿ ಉಪಾಧ್ಯಕ್ಷ ಇಡ್ಯಾ ಜನಾರ್ಧನ್, ಸ. ಪ. ಪೂ.ಕಾಲೇಜು ಬೈಲೂರು ಇಲ್ಲಿಯ ಪ್ರಾoಶುಪಾಲರು ಹಾಗೂ ಕಾರ್ಕಳ ತಾಲೂಕು ಮಟ್ಟದ ಪಂದ್ಯಾಟ ನಿರ್ವಾಹಕರು ಆಗಿರುವ ಸೀತಾರಾಮ್ ಭಟ್, ಪಂದ್ಯಾಟ ನಿರ್ವಾಹ ಶರತ್ ರಾವ್, ಸಿಬಿಸಿ ಕೋಶಾಧಿಕಾರಿ ನಿತ್ಯಾನಂದ ಪೈ ಸಿಬಿಸಿ ಸದಸ್ಯರಾದ ವಿಜಯ ಶೆಟ್ಟಿ, ಶ್ರೀನಿವಾಸ ಕಾರ್ಲ ಉಪಸ್ಥಿತರಿದ್ದರು.

ಭೌತಶಾಸ್ತ್ರ ಉಪನ್ಯಾಸಕ ಸದಾನಂದ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಕ್ರೀಡಾ ಸಂಚಾಲಕರು ಹಾಗೂ ಗ್ರಂಥಪಾಲಕಿ ಶೈಲಜಾ ವಂದಿಸಿದರು.

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು ಬಾಲಕರ ವಿಭಾಗದಲ್ಲಿ ಸ. ಪ. ಪೂ. ಕಾಲೇಜು ಬೈಲೂರು ಹಾಗೂ ಬಾಲಕಿಯರ ವಿಭಾಗದಲ್ಲಿ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು ಕಾರ್ಕಳ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಸಂಸ್ಥೆಯ ಪ್ರಾಂಶುಪಾಲೆ ಅನ್ನಪೂರ್ಣ ಕಾಮತ್ ಧನ್ಯವಾದ ಸಲ್ಲಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಫ್ಯಾನಿ ಜೋಯ್ಸ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top