ಸಮಾಜದಲ್ಲಿ ಮಾನವತಾವಾದ ಉಳಿಸುವ ಸತ್ಕಾರ್ಯ ಅಗತ್ಯ

Picture of RB NEWS

RB NEWS

Bureau Report

ಕಾರ್ಕಳ: ಮಾನವ ಹಕ್ಕುಗಳು ಹಾಗೂ ಧಾರ್ಮಿಕ ಸಾಮರಸ್ಯ ಘಟಕ ಮತ್ತು ಐಕ್ಯೂಎಸಿಯ ಸಹಯೋಗದಲ್ಲಿ ಮಾನವ ಹಕ್ಕುಗಳ ಘಟಕದ ಉದ್ಘಾಟನೆಯು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಗ್ರೀಟಾ ಮರಿಯ ಕೋತ್ವಾಲ್ ಅವರು, ಮಾನವ ಹಕ್ಕುಗಳು ಮತ್ತು ಅದರ ಮಹತ್ವದ ಕುರಿತಾಗಿ ಮಾತನಾಡುತ್ತಾ ನಮಗೆ ಸಿಗಬೇಕಾದ ಹಕ್ಕನ್ನು ಪಡೆಯುವ ನಿಟ್ಟಿನಲ್ಲಿ ಮಾನವ ಹಕ್ಕುಗಳು ರೂಪುಗೊಂಡಿವೆ. ಅದರ ಸದುಪಯೋಗವನ್ನು ಮಾಡಬೇಕಾದ ಅಗತ್ಯ ಈ ದಿನಗಳಲ್ಲಿದೆ. ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಿರುವಂತೆ ಬೇರೆಯವರ ಭಾವನೆಗಳಿಗೆ ನೋವಾಗದಂತೆ ಬದುಕುವುದು ಕೂಡಾ ಬಹಳ ಅಗತ್ಯವಾಗಿದೆ ಎಂದರು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ. ಈಶ್ವರ ಭಟ್,ಮಾನವ ಹಕ್ಕು ಘಟಕ ಕಾರ್ಯದರ್ಶಿ ಶ್ರೇಯ ಉಪಸ್ಥಿತರಿದ್ದರು.

ಐಕ್ಯೂಎಸಿ ಸಂಯೋಜಕ ಡಾ.ಲಕ್ಷ್ಮೀನಾರಾಯಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾನವಿಕ ಸಂಘದ ಸಂಯೋಜಕರಾದ ಸುಚಿತ್ರಾ ಸ್ವಾಗತಿಸಿದರು. ಪ್ರಥಮ ಬಿ.ಎ. ವಿದ್ಯಾರ್ಥಿನಿ ಪ್ರಜ್ಞಾ ನಿರೂಪಿಸಿದರು. ದ್ವಿತೀಯ ಬಿ.ಎ. ಯ ರೇಣುಕಾ ಧನ್ಯವಾದ ಸಮರ್ಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top