ದೈಹಿಕ ಸಂಬಂಧ ಬೆಳೆಸಿದ ಫೋಟೋಗ್ರಾಫರ್ ಬಂಧನ

Picture of RB NEWS

RB NEWS

Bureau Report

ಮೂಡುಬಿದಿರೆ: ವಿವಾಹವಾಗುವ ಭರವಸೆ ನೀಡಿ ದಲಿತ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಬಂಧಿಸಿದ್ದಾರೆ.

ಉಪ್ಪಿನಂಗಡಿ ಬೆದ್ರೋಡಿ ನಿವಾಸಿಯಾಗಿದ್ದು, ಮೂಡುಬಿದಿರೆಯಲ್ಲಿ ಫೋಟೋ ಗ್ರಾಫರ್ ಆಗಿ ದುಡಿಯುತ್ತಾ, ಕಲ್ಲಬೆಟ್ಟುನಲ್ಲಿ ವಾಸವಾಗಿದ್ದ‌ ಸಂಕೇತ್ ಗಾಣಿಗ (31) ಪ್ರಕರಣದ ಆರೋಪಿ.

ಉಡುಪಿ ಬ್ರಹ್ಮಾವರ 27 ವಷ ಹರೆಯದ ಯುವತಿಯೊಬ್ಬಳೊಂದಿಗೆ ಇನ್ಸಾ ಗ್ರಾಂ ಮೂಲಕ ಪರಿಚಯ ಬೆಳೆಸಿದ ಸಂಕೇತ್ ಗಾಣಿಗ ಆಕೆಯನ್ನು ಕಲ್ಲಬೆಟ್ಟುಬಿಗೆ ಕರೆಯಿಸಿ, ಮದುವೆಯ ಅಮಿಷವೊಡ್ಡಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಾನೆ.

ವಿವಾಹವಾಗುವಂತೆ ಯುವತಿ ಒತ್ತಡ ಏರುತ್ತಿದ್ದಂತೆ ನೀನು ದಲಿತಳು. ಮದುವೆಗೆ ಜಾತಿ ಅಡ್ಡವಾಗುತ್ತಿದೆ ಎಂದು ಹೇಳಿ
ತಿರಸ್ಕರಿಸಿದ್ದಾನೆ.

ಸಂತ್ರಸ್ತ ಯುವತಿ ಮೂಡುಬಿದಿರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಅದರನ್ವಯ ಪ್ರಕರಣ ದಾಖಲಾಗಿದೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top