ವಾರಭವಿಷ್ಯ
- ದಿನಾಂಕ 14.09.2025 ರಿಂದ 20.09.2025ರ ವರೆಗೆ
ವಿಶೇಷ ದಿನಗಳು:
14.09.2025….ಸಿಂಹ ರಾಶಿಗೆ ಶುಕ್ರನ ಪ್ರವೇಶ
15.09, 2025 ಕನ್ಯಾ ರಾಶಿಗೆ ಬುಧನ ಪ್ರವೇಶ
16.09.2025 ಕನ್ಯಾ ಸಂಕ್ರಮಣ
ಮೇಷ : ಚಂದ್ರ ಮತ್ತು ಶುಕ್ರರ ಕಾರಣದಿಂದ ಬಂಧು ಹಾಗೂ ಆಪ್ತರ ಜೊತೆಗೆ ಸ್ವಲ್ಪ ಮಟ್ಟಿನ ವೈ ಮನಸ್ಸು ಮೂಡುವ ಸಾಧ್ಯತೆ ಇರುತ್ತದೆ, ಅತೀ ಹೆಚ್ಚಿನ ನಂಬಿಕೆಯಿಂದ ಯಾರೊಂದಿಗೂ ಬೇರೆಯದಿರಿ, ನಿಮ್ಮ ಮನಸ್ಸಿನ ಎಲ್ಲಾ ಭಾವನೆಗಳನ್ನೂ ಹಿತ ಶತ್ರುಗಳ ಜೊತೆಗೆ ಹಂಚಿಕೊಳ್ಳದಿರಿ,ಸಾಂಸಾರಿಕವಾಗಿ ಪತ್ನಿಯೊಂದಿಗೆ ಮತ್ತು ಮಕ್ಕಳೊಂದಿಗೆ ಹೊಂದಾಣಿಕೆಯೊಂದಿಗೆ ಇರಬೇಕಾಗಿದೆ. ಸಾಡೇ ಸಾತ್ ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಪಾರಾಯಣ ಮಾಡಿರಿ.
ವೃಷಭ : ನೀವು ನಡೆಸುತ್ತಿರುವ ಯಾವುದೇ ವ್ಯವಹಾರದಲ್ಲಿ ಒಳಿತು-ಕೆಡುಕು ಯಾವುದೆಂದು ಅರಿತುಕೊಂಡು ಮುಂದುವರಿಯುವುದು ಅಗತ್ಯವಿದೆ ನಿಮ್ಮ ಪರಿಶ್ರಮದ ದುಡಿಮೆಗೆ ಹಾಗೂ ವಿಶ್ವಾಸಕ್ಕೆ ಉತ್ತಮ ಬೆಲೆ ಸಿಗಲಿದೆ, ಎಲ್ಲರೊಂದಿಗೂ ಮುಕ್ತ ಮನಸ್ಸಿನಿಂದ ನೀವು ಬೆರೆಯುವುದು ಅಗತ್ಯವಿದೆ. ಸಹೋದ್ಯೋಗಿ ಮಿತ್ರರ ಜೊತೆಗೆ ಎಚ್ಚರಿಕೆಯಿಂದ ಇರುವುದು ಅಗತ್ಯವಿದೆ. ದೈವಾನುಗ್ರಹ ಇರುವುದರಿಂದ ಬರುವ ಆದಾಯದಲ್ಲಿ ಯಾವುದೇ ಕೊರತೆ ಇರುವುದಿಲ್ಲ.
ಮಿಥುನ : ಇಂದಿನಿಂದ ಗ್ರಹರ ಸ್ಥಾನ ಪಲ್ಲಟದಿಂದ ಕೆಲವೊಂದು ಉತ್ತಮ ಪರಿವರ್ತನೆಯನ್ನು ಕಾಣಲಿದ್ದೀರಿ, ಮನೆ ಖರೀಧಿ, ವಾಹನ ಖರೀಧಿ, ಭೂಮಿ ಖರೀಧಿ ಮಾಡುವ ಯೋಗ ಕೂಡಿ ಬಂದಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ. ಆರ್ಥಿಕ ಬಿಕ್ಕಟ್ಟು ದೂರವಾಗಲಿದೆ. ಮೇಲಧಿಕಾರಿಗಳ ಪ್ರಶಂಸೆ ನಿಮಗೆ ಸಿಗಲಿದೆ. ಅಕ್ಟೋಬರ್ 18 ರ ನಂತರ ಉದ್ಯೋಗದಲ್ಲಿ ಭಡ್ತಿ ಸಿಗಲಿದೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಏಳಿಗೆಯನ್ನು ಕಾಣುವಿರಿ.
ಕರ್ಕಾಟಕ : ಮನೆಯಲ್ಲಿ ಹಿರಿಯರ ಜೊತೆಗೆ ಶೀತಲ ಯುದ್ಧ ನಡೆಯುತ್ತಿರುತ್ತದೆ, ಹಿರಿಯರ ಮೌನ ನಿಮಗೆ ಇರುಸುಮುರಿಸು ಉಂಟುಮಾಡಲಿದೆ. ಮನಬಿಚ್ಚಿ ಮೌನ ಮುರಿದು ಮಾತನಾಡಿದರೆ ಎಲ್ಲವೂ ಪರಿಹಾರವಾಗಲಿದೆ. ರಾಹು ಶನಿ ಮಾನಸಿಕ ಒತ್ತಡಕ್ಕೆ ಕಾರಣವಾಗಲಿದ್ದಾರೆ. ಎಲ್ಲಾ ಸಮಸ್ಯೆಗಳ ಹಿಂದೆ ಪರಿಹಾರವೂ ಇರುತ್ತದೆ. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಹಲವಾರು ಸಮಸ್ಯೆಗಳು ಬರಲಿವೆ. ತಾಳ್ಮೆ ಸಂಯಮ ಅಗತ್ಯವಿರುತ್ತದೆ ಅಪ್ತರೊಬ್ಬರ ಬೆಂಬಲದಿಂದ ಸಮಸ್ಯೆಯೂ ನಿವಾರಣೆಯಾಗಲಿದೆ ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.
ಸಿಂಹ : ಮುಂದಕ್ಕೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡದಿರಿ, ಶನಿ ಅಷ್ಟಮದಲ್ಲಿ ಸಪ್ತಮಾಧಿಪತಿಯಾಗಿ ಇರುವುದು ದಾಂಪತ್ಯಕ್ಕೆ ಮಾರಕವಾಗಿದೆ. ಉತ್ತಮ ಗುರುಬಲ ಅಕ್ಟೋಬರ್ 18 ರ ವರೆಗೆ ಇರುತ್ತದೆ ಗರ್ಭಿಣಿಯರು ಬಹಳ ಎಚ್ಚರದಿಂದಿರಬೇಕು, ವೈದ್ಯರ ಸಲಹೆ ಪಡೆಯುವುದು ಅಗತ್ಯವಿದೆ, ಪಿತ್ತ ಉಷ್ಣ ಪೀಡೆ ಉಂಟಾಗಲಿದೆ. ಅಧಿಕಾರಿ ವರ್ಗದವರಿಗೆ ಮುಂಭಡ್ತಿಯ ಯೋಗ ಕೂಡಿ ಬರಲಿದೆ, ರಾಜಕೀಯ ವರ್ಗದಲ್ಲಿ ಸ್ಥಾನ-ಮಾನ ಗೌರವ ಬೆಳೆಯಲಿದೆ. ಹೊಸ ಯೋಜನೆಗಳಿಗೆ ಧನ ವಿನಿಯೋಗ ಆಗಲಿದೆ.
ಕನ್ಯಾ : ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಹಲವಾರು ವಿರೋಧಗಳು ಗಂಭೀರ ಸ್ವಭಾವವಾಗಿ ಮೂಡಿ ಬಂದು ಅಚ್ಚರಿಯನ್ನು ತರಲಿದೆ. ಎಲ್ಲವೂ ಶನಿ ದೇವನ ಮಹಿಮೆಯಾಗಿದೆ. ಅನಾವಶ್ಯಕವಾಗಿ
ಖರ್ಚು ವೆಚ್ಚಗಳು ಬರಲಿವೆ, ನಿಷ್ಠುರವಾದ ಮಾತುಗಳಿಂದ ಮನಸ್ಸು ರೋಸಿ ಹೋಗಲಿದೆ. ಸಾಲದ ಭಾರ ತಲೆನೋವನ್ನು ತರಲಿದೆ. ವಿದ್ಯಾರ್ಥಿಗಳು ಏಕ ಮನಸ್ಸಿನಿಂದ ಓದಿನ ಕಡೆಗೆ ಗಮನಕೊಡಬೇಕಾಗಿದೆ. ದೇವಿಯ ಪಾರಾಯಣ ಮಾಡಿರಿ.
ತುಲಾ : ಜನ್ಮ ರಾಶಿಯಲ್ಲಿ ಕುಜ ಪಂಚಮದಲ್ಲಿ ರಾಹು ಮತ್ತು ಮಾಂದಿ ಅಷ್ಟಮದಲ್ಲಿ ಚಂದ್ರ ಇರುವುದರಿಂದ ಪಿತ್ತ ವಾಯು ಉಷ್ಣ ಪ್ರಕೋಪ ತೋರಿಬರಲಿದೆ. ಮಕ್ಕಳೊಂದಿಗೆ ವಿರಸ ಮೂಡಿಬರಲಿದೆ. ಗುರುವಿನ ಅನುಗ್ರಹದಿಂದ ವೃತ್ತಿರಂಗದಲ್ಲಿ ನಿಮ್ಮ ಕಾರ್ಯ ವೈಖರಿಗೆ ಎಲ್ಲರ ಮೆಚ್ಚುಗೆ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳು ಯಶಸ್ವಿಯಾಗುವರು, ಹೊಸ ಉದ್ಯೋಗದ ಚಿಂತನೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ,
ವೃಶ್ಚಿಕ : ಸುಖ ಸ್ಥಾನದಲ್ಲಿ ರಾಹು ಮತ್ತು ಮಾಂದಿ ಪಂಚಮದಲ್ಲಿ ಶನಿ ಅಷ್ಟಮದಲ್ಲಿ ಗುರು ವ್ಯಯದಲ್ಲಿ ಕುಜನಿರುವುದರಿಂದ ನಿಮ್ಮ ಹಲವಾರು ಯೋಜನೆಗಳು ನಿರಾಶೆಯನ್ನು ತರಲಿದೆ. ಚಂದ್ರ ದಾಂಪತ್ಯದಲ್ಲಿ ಕಿರಿಕಿರಿಯನ್ನು ತರುವವನಾಗಿದ್ದಾನೆ. ಮೂರು ರೀತಿಯ ಉದ್ಯೋಗಗಳು ಒಂದೇ ಕಾಲದಲ್ಲಿ ನಿಮ್ಮೆದುರು ಬರಲಿದೆ. ಆಯ್ಕೆ ಮಾಡುವುದೇ ಕಷ್ಟವಾಗಲಿದೆ. ಹಿರಿಯರ ಸಹಕಾರ ಸಿಗಲಿದೆ. ಉಳಿತಾಯ ಎಂದಿಗೂ ಇಳಿತಾಯ ಆಗದಿರಲಿ.
ಧನು : ಶನಿಯ ಸುಖ ಸ್ಥಾನದ ಫಲದಿಂದಾಗಿ ನರ ಎಲುಬು ಸಮಸ್ಯೆ ಉಂಟಾಗಲಿದೆ. ಬಂಧುಗಳಿಗೆ ಸ್ನೇಹಿತರಿಗೆ ಉಪಕಾರ ಮಾಡಲು ಹೋಗಿ ತಾವೇ ಸಮಸ್ಯೆಯೊಳಗೆ ಬೀಳುವ ಸಾಧ್ಯತೆ ಇರುತ್ತದೆ ಅಕ್ಟೋಬರ್ 18 ರ ವರೆಗೆ ಗುರುವಿನ ಅನುಗ್ರಹ ಇರುವುದರಿಂದ ಬರುತ್ತಿರುವ ಧನ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಯಾವುದೇ ಗೊಂದಲವನ್ನು ನೇರವಾಗಿ ಚರ್ಚಿಸಿ ಪರಿಹರಿಸಿಕೊಳ್ಳಿರಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಬರಲಿದೆ. ನೃತ್ಯ, ಸಂಗೀತ, ಕಲಾಗಾರರಿಗೆ ಉತ್ತಮವಾದ ಅವಕಾಶ ಒದಗಿ ಬರಲಿದೆ.
ಮಕರ : ವ್ಯಾಪಾರ, ವ್ಯವಹಾರಗಳಲ್ಲಿ ಮೂಲ ಧನಕ್ಕೆ ಹಾನಿಯಾಗದಂತೆ ಎಚ್ಚರವಹಿಸುವುದು ಅಗತ್ಯವಿದೆ. ಅಗತ್ಯವೆಲ್ಲದ ಬೆಲೆ ಬಾಳುವ ವಸ್ತುಗಳ ಖರೀಧಿಯಿಂದ ನಷ್ಟವನ್ನು ಅನುಭವಿಸಲಿದ್ದೀರಿ. ಮಾನಸಿಕ ಒತ್ತಡಕ್ಕೆ ಒಳಗಾಗದೆ ಯೋಗ ಪ್ರಾಣಾಯಾಮದಲ್ಲಿ ತೊಡಗುತ್ತಾ ಸಂಯಮವನ್ನು ಕಾಯ್ದು ಕೊಳ್ಳಿರಿ. ಉತ್ತಮ ಆದಾಯವಿದ್ದರೂ ಸಮಾನಾಂತರ ರೀತಿಯಲ್ಲಿ ಖರ್ಚು ಮಾಡಿದಾಗ ಹಣದ ಹೊಂದಾಣಿಕೆಯಾಗಲಿದೆ. ಅಧಿಕಾರಿ ವರ್ಗದವರೊಂದಿಗೆ ಹೊಂದಾಣಿಕೆ ಇರಲಿ.
ಕುಂಭ : ದೀರ್ಘ ಕಾಲೀನ ವ್ಯವಹಾರಗಳಲ್ಲಿ ಲಾಭ ಉಂಟಾಗಲಿದೆ. ಉತ್ತಮವಾದ ರೀತಿಯಲ್ಲಿ ಧನಾಗಮನವಾಗಲಿದೆ ನೆರೆಹೊರೆಯವರಲ್ಲಿ ಮನಸ್ತಾಪ ಬಾರದಂತೆ ಎಚ್ಚರಿಕೆ ವಹಿಸಬೇಕು ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಗಡಿಬಿಡಿ ಮಾಡುವುದು ಬೇಡ, ಎಚ್ಚರಿಕೆಯಿಂದ ನಡೆದಲ್ಲಿ ನ್ಯಾಯಾಂಗ ವಿಚಾರಗಳಲ್ಲಿ ಗೆಲುವು ನಿಮ್ಮದಾಗಲಿದೆ. ಮನೆ ಬದಲಾವಣೆ ಮಾಡುವ ಸೂಚನೆ ಇರುತ್ತದೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯ ಕೊರತೆಯನ್ನು ನಾವು ಕಾಣಬಹುದು.
ಮೀನ : ನೀವು ನಡೆಸುವ ಯಾವುದೇ ವ್ಯವಹಾರದಲ್ಲಿ ಉತ್ತಮ ಧನಾಗಮನವಿರುತ್ತದೆ, ವಿದ್ಯಾರ್ಥಿಗಳು ಯಶಸ್ವಿಯಾಗುವರು, ಅಧಿಕಾರಿ ವರ್ಗದವರ ಪ್ರೋತ್ಸಾಹ ನಿಮಗೆ ಸದಾ ದೊರೆಯಲಿದೆ ತಂದೆ ಮಕ್ಕಳೊಂದಿಗೆ ಅನ್ನೋನ್ಯತೆ ಇರಲಿದೆ. ನೀವು ನಡೆಸುವ ವ್ಯವಹಾರದಲ್ಲಿ ಮನೆಯ ಸದಸ್ಯರ ಪ್ರೋತ್ಸಾಹವನ್ನು ಪಡೆಯಲೆದ್ದೀರಿ. ನಿಮ್ಮ ಅಕ್ರಮ ವ್ಯವಹಾರವೊಂದು ಹೊರ ಬರಲಿದೆ ನಿರುದ್ಯೋಗಿಗಳಿಗೆ ತಾತ್ಕಾಲಿಕ ಹುದ್ದೆಯೊಂದು ದೊರೆಯಲಿದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು
ಮಾಡಿಕೊಡಲಾಗುವುದು ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು ನೀವು ನಡೆಸುವ ಶುಭ ಕೆಲಸಗಳಿಗೆ ಶುಭ ಮುಹೂರ್ತವನ್ನು ತಿಳಿಸಲಾಗುವುದು ವಾಸ್ತು ಸಲಹೆ/ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.







































