ಕಾರ್ಕಳ ಇನ್ ಅನಘ ಗ್ಯಾಂಡ್‌ನಲ್ಲಿ ಸೆ. 6ರಿಂದ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ರಾಲ್ಸ್ ಓಪನ್ ಗಾರ್ಡನ್ ಶುಭಾರಂಭ

Picture of RB NEWS

RB NEWS

Bureau Report

ಕಾರ್ಕಳ : ನಗರದ ಪುಲ್ಕೇರಿ ಬೈಪಾಸ್ ಜಂಕ್ಷನ್ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಕಾರ್ಕಳ ಇನ್ ಅನಘ ಗ್ಯಾಂಡ್‌ನಲ್ಲಿ ಸೆ. 6ರಿಂದ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ರಾಲ್ಸ್ ಓಪನ್ ಗಾರ್ಡನ್ ಶುಭಾರಂಭಗೊಳ್ಳಲಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆಯನ್ನು ಈ ಸಂಸ್ಥೆ ಪಡೆದಿದೆ‌.

ಇದೇ ವಾಣಿಜ್ಯ ಸಂಕೀರ್ಣದಲ್ಲಿ
ಅನಘ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಕಾರ್ಯಚರಿಸುತ್ತಿದ್ದು, ಗ್ರಾಹಕರ ಮೆಚ್ಚುಗೆಗೆ‌ ಪಾತ್ರ ವಾಗಿದೆ. ಅತ್ಯುತ್ತಮವಾದ ಸೇವೆ ಹಾಗೂ ಖಾದ್ಯದೊಂದಿಗೆ ವಿಶಾಲವಾದ ಸ್ಥಳಾವಕಾಶ, ಕ್ಯಾಬಿನ್, ಹವಾನಿಯಂತ್ರಿತ ಕ್ಯಾಬಿನ್, ಫ್ಯಾಮಿಲಿ ಕ್ಯಾಬಿನ್‌ಗಳ ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿದೆ.

ಇದರೊಂದಿಗೆ ಸಭೆ ಸಮಾರಂಭ ಹಾಗೂ ಪಾರ್ಟಿಯ ವ್ಯವಸ್ಥೆಗೆ ಪಾರ್ಟಿ ಹಾಲ್, ಲಿಫ್ಟ್ ಹಾಗೂ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದ್ದು, ಇದೀಗ ಓಪನ್ ಗಾರ್ಡನ್ ಹಾಗೂ ಕೆಳ ಅಂತಸ್ತಿನಲ್ಲಿ ಬಾ‌ರ್ ಕೌಂಟರ್ ವ್ಯವಸ್ಥೆ ಪ್ರಾರಂಭವಾಗಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top