40ನೇ ವರ್ಷದ ಗಣೇಶೋತ್ಸವದ ಸಮಿತಿಯ ಅಧ್ಯಕ್ಷರಾಗಿ ನವೀನ್ ದೇವಾಡಿಗ ಆಯ್ಕೆ

Picture of RB NEWS

RB NEWS

Bureau Report

ಕಾಬೆಟ್ಟು ಕಾರ್ಕಳ : ಜುಲೈ 20 ರವಿವಾರದಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಕಾಬೆಟ್ಟು ಇದರ 40ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.

ಸಮಿತಿಯ ಅಧ್ಯಕ್ಷ ನವೀನ್ ದೇವಾಡಿಗರವರು 40ನೇ ವರ್ಷದ ಗಣೇಶೋತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ, ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತೆ ಕರೆ ನೀಡುವುದರ ಜೊತೆಗೆ ಕಾರ್ಯಕ್ರಮದ ಕುರಿತು ವಿವರಿಸಿದರು.

ಸಮಿತಿಯ ಉಪಾಧ್ಯಕ್ಷ ನವೀನಚಂದ್ರ ಶೆಟ್ಟಿ, ಗೌರವ ಸಲಹೆಗಾರ ಎಚ್ ಕೃಷ್ಣದಾಸ ಶೆಣೈ , ಕಾರ್ಯದರ್ಶಿ ಎನ್. ಕೃಷ್ಣಪ್ಪ ಶೆಟ್ಟಿ, ಕೋಶಾಧಿಕಾರಿ ಪ್ರೇಮಾನಂದ ಶೆಣೈ ಉಪಸ್ಥಿತರಿದ್ದರು.

ಗೌರವ ಸಲಹೆಗಾರ ವೈಕುಂಠ ಶೆಣೈ ಸ್ವಾಗತಿಸಿದರು. ಕಾರ್ಯಧ್ಯಕ್ಷ ರಾಜೇಶ್ ಭಟ್ ಜಿ ವಂದಿಸಿದರು. ಶೋಭಾ ಭಾಸ್ಕರ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಮಿತಿಯ ಸರ್ವಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top