ಕೊಲೆ ಯತ್ನ ಆರೋಪಿಯ ಬಂಧನ

Picture of RB NEWS

RB NEWS

Bureau Report

ಪಡುಬಿದ್ರಿ : ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಜರಕಟ್ಟೆ ಗ್ಲೋರಿಯಾ ಬಾರ್ ನಲ್ಲಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಕೊಲೆಗೆ ಯತ್ನಿಸಿದ ಆರೋಪಿಯಾಗಿರುವ ತಮಿಳುನಾಡು ಮೂಲದ ಅಳಗೇಶ ನನ್ನು ಪಡುಬಿದ್ರಿ ಪೊಲೀಸರು ತಮಿಳುನಾಡು ರಾಜ್ಯದ ಕೃಷ್ಣಗಿರಿ ಎಂಬಲ್ಲಿ ಬಂಧಿಸಿರುತ್ತಾರೆ.

2025 ಜುಲಾಯಿ 15ರಂದು ಪಡುಬಿದ್ರೆ ಪೋಲೀಸ್ ಠಾಣಾ ವ್ಯಾಪ್ತಿಯ ಕಾಂಜರಕಟ್ಟೆ ಗ್ಲೋರಿಯಾ ಬಾರ್ ನಲ್ಲಿ ಸಾಂತೂರಿನ ಸತೀಶ್ ಆಚಾರ್ಯ ತನ್ನ ಸ್ನೇಹಿತರಾದ ನರಸಿಂಹ ಮತ್ತು ಕಾರ್ತಿಕ್ ಎಂಬವರೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಆರೋಪಿ ಅಳಗೇಶ ಬಾರಿನ ಒಳಗಡೆ ಬಂದು ನರಸಿಂಹನಿಗೆ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದಾಗ ಸತೀಶ್ ಆಚಾರ್ಯ ಯಾಕೆ ಗಲಾಟೆ ಮಾಡುತ್ತಿ ಎಂದು ಹೇಳಿ ಬಾರ್ ಕ್ಯಾಬಿನ್ ನಿಂದ ಹೊರಗೆ ದೂಡಿದಾಗ ನೀನು ನರಸಿಂಹನಿಗೆ ಸಪೋರ್ಟ್ ಮಾಡುತ್ತೀಯಾ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದ ಅಳಗೇಶನು ತನ್ನಲ್ಲಿದ್ದ ಚೂರಿಯಿಂದ ಸತೀಶ್ ಆಚಾರ್ಯನ ತಲೆಗೆ ಮತ್ತು ಹೊಟ್ಟೆಗೆ ತಿವಿದು ಕೊಲೆಗೆ ಪ್ರಯತ್ನಪಟ್ಟಿದ್ದನು.

ಕೃತ್ಯ ಎಸಗಿದ ಅಳಗೇಶನು ತನ್ನ ಸ್ವಂತ ಊರಾದ ತಮಿಳುನಾಡಿಗೆ ಹೋಗಿ ತಲೆಮೆರೆಸಿಕೊಂಡಿದ್ದನು. ಚೂರಿ ಇರಿತದಿಂದ ತೀವ್ರ ಗಾಯಗೊಂಡ ಸತೀಶ್ ಆಚಾರ್ಯ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸದಾನಂದ ಎಸ್ ನಾಯಕ್ ಮತ್ತು ಪರಮೇಶ್ವರ ಹೆಗಡೆ ರವರ ಮಾರ್ಗದರ್ಶನದಂತೆ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಾಂವಧ ರವರ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ರವರು ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕ ಸಕ್ತಿವೇಲು( ಕಾ.ಸು) ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಕಾನ್ ಸ್ಟೇಬಲ್ ಸಂದೇಶ ಕುಮಾರ್, ಶರಣ್ ಪುತ್ರನ್ ರವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ತಮಿಳುನಾಡು ರಾಜ್ಯಕ್ಕೆ ತೆರಳಿದ ಪೊಲೀಸರ ತಂಡವು ತಮಿಳುನಾಡು ರಾಜ್ಯದ ಈರೋಡ್, ಸೇಲಂ, ಕೃಷ್ಣಗಿರಿ ಜಿಲ್ಲೆಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ ಆರೋಪಿ ಅಳಗೇಶ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top