ಮುಟ್ಲುಪಾಡಿಯಲ್ಲಿ ಕಾಡಾನೆಯ ಹಾವಳಿ

Picture of RB NEWS

RB NEWS

Bureau Report

ಹೆಬ್ರಿ : ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ಮುಟ್ಲುಪಾಡಿ ಪರಿಸರದಲ್ಲಿ ಹಲವಾರು ದಿನಗಳಿಂದ ಒಂಟಿ ಸಲಗ ಅಲ್ಲಲ್ಲಿ ಗೋಚರಿಸಿತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ‌.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ಸರ್ವೇ ಸಾಮಾನ್ಯವಾಗಿದೆ.

ಜು.18ರ ಮುಂಜಾನೆ ಕೃಷಿಕರಾದ ನಾಗಯ್ಯ ನಾಯ್ಕ್ ಇವರ ತೋಟಕ್ಕೆ ನುಗ್ಗಿದ ಕಾಡಾನೆ ಕಂಗು, ಬಾಳೆ ಹಾಗೂ ತೋಟದ ತಡೆಗೋಡೆಯನ್ನು ದ್ವಂಸ ಗೊಳಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಕಾಡಾನೆಯ ಹಾವಳಿ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಇಲಾಖೆಯವರು ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top