ವಾರ ಭವಿಷ್ಯ ದಿನಾಂಕ 22.06.2025 ರಿಂದ 28.06.2025 ರ ವರೆಗೆ
ವಿಶೇಷ ದಿನಗಳು :
ದಿನಾಂಕ 22.06.2025…ಕರ್ಕಾಟಕ ರಾಶಿಗೆ ಬುಧನ ಪ್ರವೇಶ
ದಿನಾಂಕ 23.06.2025…ಸೋಮ ಪ್ರದೋಷ
ದಿನಾಂಕ 25.06.2025…..ಅಮಾವಾಸ್ಯೆ
ಮೇಷ : ನಿಮಗೆ ಸಾಂಸಾರಿಕ ತಾಪತ್ರಯ,ನಿರಾಸಕ್ತಿ,ಆಲಸ್ಯ ,ಮಾನಸಿಕ ಉದ್ವಿಘ್ನತೆ ಕಟ್ಟಿ ಹಾಕಲಿದೆ.ಗ್ರಹಗಳು ಎಲ್ಲೇ ಇದ್ದರೂ ದೇವರ ಪ್ರಾರ್ಥನೆ,ಪಾರಾಯಣವನ್ನು ನಿಲ್ಲಿಸಬಾರದು.ರಾಹು,ಬುಧ ನಿಮಗೆ ಶುಭ ಫಲವನ್ನು ನೀಡುತ್ತಿದ್ದಾರೆ.ಜೂನ್ 29 ರಂದು ಶುಕ್ರ ವೃಷಭ ರಾಶಿಗೆ ಪ್ರವೇಶ ಮಾಡಿದಾಗ ಇನ್ನಷ್ಟು ಶುಭ ಫಲಗಳು ದೊರೆಯಲಿವೆ. ಆರ್ಥಿಕ ಬಿಕ್ಕಟ್ಟು ಆಗಾಗ ಆತಂಕ ತಂದರೂ ಧನಾಗಮನ ಇದ್ದೇ ಇರುತ್ತದೆ. ಮಕ್ಕಳ ವಿಷಯದಲ್ಲಿ ತುಸು ಕಿರಿಕಿರಿ ಇರುತ್ತದೆ.ಯೋಗ್ಯ ವಯಸ್ಕರಿಗೆ ಕಂಕಣ ಭಾಗ್ಯ ಒದಗಿ ಬರಲಿದೆ. ಶನಿ,ಕುಜ ಕೇತು ಗುರು,ರವಿ ಇವರಿಗೆ ಯಥಾ ಶಕ್ತಿ ಪಾರಾಯಣ ಅಗತ್ಯವಿದೆ.
ವೃಷಭ : ನೀವು ಮಾಡುವ ಯಾವುದೇ ಉದ್ಯೋಗದಲ್ಲಿ ರವಿ ಗುರು ಗ್ರಹರು,,ಹೊಸಬರು ನಿಮ್ಮೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮಾಡಲಿದ್ದಾರೆ. ಶನಿಯೂ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಉದ್ಯೋಗದ ಅನ್ವೇಷಣೆಯಲ್ಲಿ ಇರುವವರಿಗೆ ಖಂಡಿತವಾಗಿಯೂ ಉದ್ಯೋಗ ಪ್ರಾಪ್ತಿಯಾಗಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆ ಅತೀ ಅಗತ್ಯವಾಗಿದೆ. ದುರ್ಗಾ ಪಾರಾಯಣ ಅತೀ ಅಗತ್ಯವಾಗಿದೆ. ಖರ್ಚು –ಆದಾಯ ಸಮಾನ ರೀತಿಯಲ್ಲಿ ಒದಗಿ ಬರಲಿದೆ.
ಮಿಥುನ : ಜನ್ಮಾಂತರದ ಪುಣ್ಯವಿದ್ದರೆ ಮಕ್ಕಳಾಗುತ್ತಾರೆ. ದೇವರು ಎಲ್ಲವನ್ನೂ ಕರುಣಿಸಿದರೂ ಮಕ್ಕಳನ್ನು ಪಡೆಯಲು ತಂದೆ-ತಾಯಿಯವರ ವಂಶದವರ ಅನುಗ್ರಹ ಬೇಕು. ಧನ ,ಧಾನ್ಯ ,ವಂಶಾಭಿವೃದ್ಧಿಯನ್ನು ಪಡೆಯಲು ಪಿತೃ ದೇವತೆಗಳ ಆಶೀರ್ವಾದ ಬೇಕು.ನಾಗ ದೇವರೇ ಸಂತಾನವನ್ನು ಕರುಣಿಸಲಿದ್ದಾರೆ. ಸಮಸ್ಯೆ ಇರುವವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾರ್ಥನೆ ಸಲ್ಲಿಸಿರಿ. ಗುರು,ರವಿ ಜನ್ಮ ರಾಶಿಯಲ್ಲಿ ಇದ್ದುಕೊಂಡು ಧನಾಗಮನದಲ್ಲಿ ತಾಪತ್ರಯಕ್ಕೆ ಕಾರಣವಾಗುವ ಹುನ್ನಾರ ನಡೆಯುವಂತೆ ಮಾಡಲಿದ್ದಾರೆ . ಖರ್ಚು ವೆಚ್ಚಗಳನ್ನು ನಿಯಂತ್ರಿಸಿಕೊಳ್ಳಿರಿ.
ಕರ್ಕಾಟಕ : ರವಿ ಗುರು ,ರಾಹು ,ಕುಜ ಕೇತು ಗ್ರಹರ ಅಶುಭ ಫಲದ ಕಾರಣದಿಂದಾಗಿ ತುಸು ಮಟ್ಟಿನ ಏರು ಪೇರುಗಳು ಅನುಭವಕ್ಕೆ ಬರಲಿವೆ. ಗುರು ಬಲ ಕಳೆದು ಕೊಂಡರೂ ನಿಮ್ಮ ಯಾವುದೇ ರೀತಿಯ ವ್ಯವಹಾರದಲ್ಲಿ ಬೆಳವಣಿಗೆಯ ಕಾಲವಾಗಿದೆ. ಅವಿವಾಹಿತರು ವಿವಾಹದ ಚಿಂತನೆ ಮಾಡಲು ಇದು ಸಕಾಲವಲ್ಲ. ಗುರು ಮೌಢ್ಯದ ಕಾಲವಾಗಿದೆ. ರಾಹುವಿನ ಕಾರಣದಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಕಣ್ಣು ನೋವು ,ಚರ್ಮ ವ್ಯಾಧಿ ಬರಲಿದೆ. ಉದ್ಯೋಗದಲ್ಲಿ ಸವಾಲುಗಳನ್ನು ಎದುರಿಸಲೇ ಬೇಕಾಗಿದೆ.
ಸಿಂಹ : ಆಶಾವಾದಿಗಳಾದ ನಿಮಗೆ ವಿಶೇಷವಾಗಿ ದೈವಾನುಗ್ರಹ ಇರುವ ಕಾಲವಾಗಿರುವುದರಿಂದ ಜೀವನದ ಹಲವಾರು ಕನಸುಗಳನ್ನು ಈಡೇರಿಸಿಕೊಳ್ಳುವ ಕಾಲ.ದುಡ್ಡು ಎಷ್ಟು ಇದ್ದರೇನು? ಸಂಗಾತಿಯೊಂದಿಗೆ ಸದಾ ಅಂದರೆ ಇನ್ನೂ ಎರಡೂವರೆ ವರ್ಷ ಅಷ್ಟಮದ ಶನಿಯಿಂದಾಗಿ ಕಾದಾಡುವ ನೀವು ಸುಖ ,ನೆಮ್ಮದಿಯಿಂದ ವಂಚಿತರಾಗುವಿರಿ. ಇದಕ್ಕಿರುವ ದಿವ್ಯ ಔಷಧಿಯೆಂದರೆ ದಿನಕ್ಕೊಮ್ಮೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದೇ ಆಗಿರುತ್ತದೆ.
ಕನ್ಯಾ : ಲಲಿತಾ ಸಹಸ್ರನಾಮ ಪಾರಾಯಣದಿಂದ ದಿನವನ್ನು ಆರಂಭಿಸಿ.ಈ ಅಭ್ಯಾಸ ಎರಡೂವರೆ ವರ್ಷಗಳ ಕಾಲ ಮುಂದುವರಿಯಬೇಕಾಗಿದೆ. ಶನಿ ಸಪ್ತಮದಲ್ಲಿ ಇದ್ದಾನೆ. ಪ್ರಸ್ತುತ ಶುಕ್ರ ಅಷ್ಟಮದಲ್ಲಿ ಇದ್ದಾನೆ. ಜೂನ್ 29 ರಂದು ಶುಕ್ರ ವೃಷಭ ರಾಶಿಗೆ ಹೋಗಲಿದ್ದಾನೆ. ಪ್ರಯತ್ನ ಬಲದಿಂದ ಹಿಡಿದ ಕೆಲಸಗಳೆಲ್ಲವೂ ಯಶಸ್ವಿಯಾಗಲಿವೆ. ಕೃಷಿಕರು ,ಹೈನುಗಾರಿಕೆ ಮುಂತಾದ ವ್ಯವಹಾರಗಳಲ್ಲಿ ಲಾಭದಾಯಕ ಆದಾಯಕ್ಕೆ ಅನುಕೂಲವಾಗಲಿದೆ. ಹಣ ಕಾಸಿನ ವಿಚಾರಗಳಲ್ಲಿ ಹಲವು ಖರ್ಚು –ವೆಚ್ಚಗಳಿರುತ್ತದೆ. ವೃತ್ತಿರಂಗದಲ್ಲಿ ಎಚ್ಚರಿಕೆಯ ನಡೆ ಅಗತ್ಯವಿದೆ.
ತುಲಾ : ಭಾಗ್ಯದಲ್ಲಿ ಇರುವ ಗುರು ಮತ್ತು ರವಿ ಕೌಟುಂಬಿಕವಾಗಿ ಬಂಧುಗಳಿಂದ ಸಹಕಾರ ಸಿಗುವಂತೆ ಮಾಡಲಿದ್ದಾರೆ. ವೃತ್ತಿರಂಗದಲ್ಲಿ ಉದ್ಯೋಗಸ್ಥರಿಗೆ ಅಚ್ಚರಿಗೆಯ ಸುದ್ಧಿ ಕೇಳಿ ಬಂದೀತು. ದೂರ ಸಂಚಾರದಲ್ಲಿ ಕಾರ್ಯಾನುಕೂಲವಾಗಿ ಸಮಾಧಾನಕ್ಕೆ ಕಾರಣವಾಗಲಿದೆ. ಪಂಚಮದಲ್ಲಿ ಇರುವ ರಾಹು,ಮಕ್ಕಳ ಬಗ್ಗೆ ಬೇಸರವನ್ನು ತರಲಿದ್ದಾನೆ ನಾಗ ದೇವರ ಯಥಾ ಶಕ್ತಿ ಸೇವೆ ಅಗತ್ಯವಾಗಿದೆ. ಸಾಲ ತೆಗೆಯುವವರಿಗೆ ಜಾಮೀನು ಸಹಿ ಹಾಕಲು ಹೋಗಬೇಡಿರಿ. ತೀರ್ಥ ಕ್ಷೇತ್ರ ದರ್ಶನ ಮಾಡುವ ಮನಸ್ಸು ಬರಲಿದೆ.
ವೃಶ್ಚಿಕ : ರಾಹು ,ಶನಿ ,ಗುರು ,ರವಿ ,ಕುಜ ಕೇತು ಪ್ರತಿಕೂಲ ಸ್ಟಿತಿಯಲ್ಲಿ ಇರುವುದರಿಂದ ಆಗಾಗ ಆತಂಕ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಪರಿಚಿತರೊಡನೆ ಅನಾವಶ್ಯಕವಾದ ಸ್ನೇಹಕ್ಕೆ ಅವಕಾಶ ನೀಡದಿರಿ.ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಗಾಗ ಭಂಗ ಉಂಟಾದೀತು. ಆರೋಗ್ಯದ ಮೇಲೆಯೂ ನಕಾರಾತ್ಮಕ ಪ್ರಭಾವ ಉಂಟಾಗಲಿದೆ. ಮಾನಸಿಕ ಅಸ್ಥಿರತೆ ಉದ್ವೇಗ ಸ್ಥಿತಿಗೆ ಕಾರಣವಾಗಲಿದೆ. ರಾಜಕೀಯ ವಲಯದಲ್ಲಿ ಕೂಡಾ ನಿಮ್ಮ ವರ್ಚ್ಚಸ್ಸು ಕಳೆಗುಂದಲಿದೆ.
ಧನು : ಗುರುವಿನ ಅನುಗ್ರಹ ಹೆಚ್ಚಿನ ಆತ್ಮ ವಿಶ್ವಾಸವನ್ನು ನೀಡಲಿದೆ. ಇಳಿತಗಳೋ,ವಿಳಂಬಗಳೋ ,ಆಗಾಗ ಕಾಣಿಸಿಕೊಂಡರೂ ಹಂತ ಹಂತವಾಗಿ ನೆಮ್ಮದಿಯನ್ನು ಪಡೆಯಲಿದ್ದೀರಿ. ವೃತ್ತಿರಂಗದಲ್ಲಿ ಲವಲವಿಕೆ ಉತ್ಸಾಹ ಮೂಡಿಬರಲಿದೆ. ಚಿಂತಿತ ಕಾರ್ಯಗಳನ್ನು ಚಾಲನೆಗೊಳಿಸಲು ಸಕಾಲವಿದು. ಕೋರ್ಟ್ ಕಚೇರಿ,ವ್ಯವಹಾರಗಳು ,ನಿಮ್ಮ ಪರವಾಗಿ ಒಲಿದು ಬರಲಿದೆ. ವಿದ್ಯಾರ್ಥಿಗಳಿಗೆ ಬೈಕ್ ಚಾಲನೆಯಲ್ಲಿ ಎಚ್ಚರವಹಿಸಲು ಶನಿ ಸೂಚನೆ ನೀಡುತ್ತಿದ್ದಾನೆ.
ಮಕರ : ಗುರುವಿನ ಅನುಗ್ರಹದ ಕೊರತೆಯಿಂದ ಸಹೋದರ ವರ್ಗದವರ ಜೊತೆಗೆ ,ಸಾಂಸಾರಿಕವಾಗಿ ಮನ:ಕ್ಲೇಶ ಹೆಚ್ಚಾಗದಂತೆ ಗಮನ ಹರಿಸಿರಿ. ಸುಖಾಧಿಪತಿ ಕುಜ ಅಷ್ಟಮದಲ್ಲಿ ಕೇತುವಿನೊಂದಿಗೆ ಇರುವುದರಿಂದ ಮಾನಸಿಕವಾಗಿ ಒಮ್ಮೊಮ್ಮೆ ಋಣಾತ್ಮಕ ಚಿಂತೆಯಿಂದ ಪೇಚಾಡುವಂತೆ ಆದೀತು. ಅಧಿಕ ಖರ್ಚು ವೆಚ್ಚಗಳು ಇದ್ದರೂ ಸರಿಯಾದ ಸಮಯದಲ್ಲಿ ಧನಾಗಮನವಾಗಿ ನೆಮ್ಮದಿ ಉಂಟಾದೀತು. ನವ ದಂಪತಿಗಳಿಗೆ, ಸಂತಾನ ಭಾಗ್ಯದ ಸೂಚನೆ ನೆಮ್ಮದಿ ತರಲಿದೆ. ರಾಜಕೀಯ ವ್ಯಕ್ತಿಗಳಿಗೆ ನೆಮ್ಮದಿಯ ದಿನಗಳಾಗಿವೆ. ವೈವಾಹಿಕ ಭಾಗ್ಯದ ಪ್ರಯತ್ನಫಲ ಲಭಿಸಲಿದೆ,
ಕುಂಭ : ಸಹನಶೀಲರಾಗಿ ಇನ್ನೊಬ್ಬರ ಮಾತನ್ನು,ಅಭಿಪ್ರಾಯವನ್ನು ಕೇಳಿಸಿ ಕೊಳ್ಳುವ ತಾಳ್ಮೆ ನಿಮ್ಮಲ್ಲಿ ಇರಲಿ.ರಾಹು ಶನಿ ಇವರ ಅಭಿಪ್ರಾಯ ಇದಾಗಿದೆ. ಸಮಾಧಾನವಾದ ಅವಗಾಹನೆ ಹಾಗೂ ಕಾರ್ಯತಂತ್ರಗಳ ಗಡಿಬಿಡಿಯಿಂದ ಹೊರತಾದ ಧನಾತ್ಮಕ ನಿರೂಪಣೆಯು ಉತ್ತಮವಾಗಿಸಬಲ್ಲದು. ಕುಜ ಕೇತು ಕೂಡಾ ನಿಮ್ಮನ್ನು ತಾಳ್ಮೆಯಿಂದ ಇರುವಂತೆ ಸೂಚನೆ ಕೊಡುತ್ತಿದ್ದಾನೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಇರಲೇಬೇಕಾಗುತ್ತದೆ. ಆರೋಗ್ಯ ಭಾಗ್ಯದ ಬಗ್ಗೆ ಸರಿಯಾದ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿರಿ. ಲಕ್ಷ್ಮೀ ನರಸಿಂಹ ದೇವರ ಪಾರಾಯಣ ಅಗತ್ಯವಿದೆ.
ಮೀನ : ನಿಮ್ಮ ಆಕರ್ಷಕ ವ್ಯಕ್ತಿತ್ವ ನಿಮ್ಮ ಮುನ್ನೆಡೆಗೆ ಕಾರಣವಾಗಲಿದೆ. ಶನಿ ನಿಮ್ಮಲ್ಲಿ ತಳಮಳವನ್ನು ಉಂಟು ಮಾಡಲು ಸಾಧವಿದೆ.ವ್ಯಯದ ರಾಹು ಅನೇಕ ರೀತಿಯ ನಷ್ಟವನ್ನು ತರುವ ಸಾಧ್ಯತೆ ಇದೆ. ಕುಜ ಕೇತುವಿನ ಅನುಗ್ರಹ ಇರುವುದರಿಂದ ಭೂಮಿಯ ವ್ಯಾಪಾರಿಗಳಿಗೆ ಸುಗ್ಗಿಯ ಕಾಲವಾಗಲಿದೆ. ನಿಮ್ಮ ಆರೋಗ್ಯ ಉಲ್ಲಾಸ ಭರಿತವಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಅವಕಾಶ ಒದಗಿ ಬರಲಿದೆ.ಒಡವೆ,ಹಣ ,ಕಾಗದ ಪಾತ್ರಗಳ ಬಗ್ಗೆ ಎಚ್ಚರವಿರಲಿ.

ನಿಮ್ಮ ಪೂರ್ಣ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು . ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು.ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು.ವಾಸ್ತು ಸಲಹೆ, /ವಿವಾಹ ಹೊಂದಾಣಿಕೆ ಮಾಡಿ ತಿಳಿಸಲಾಗುವುದು.






































