ಮೆಡಿಕಲ್ ಶಾಪ್‌ನ ದಲಿತ ಯುವತಿ ಮೇಲೆ ಮುಸ್ಲಿಂ ಮಹಿಳೆಯಿಂದ ಹಲ್ಲೆ, ಜಾತಿನಿಂದನೆ-ದೂರು ದಾಖಲು

Picture of RB NEWS

RB NEWS

Bureau Report

ಉಡುಪಿ: ಕುಂದಾಪುರ ತಾಲೂಕಿನ ಮಾವಿನಕಟ್ಟೆಯ ಮೆಡಿಕಲ್ ಶಾಪ್‌ನ ದಲಿತ ಯುವತಿಗೆ ಚಿಲ್ಲರೆ ವಿಚಾರವಾಗಿ ಮುಸ್ಲಿಂ ಮಹಿಳೆಯೋರ್ವಳು ಹಲ್ಲೆಗೈದ ಘಟನೆ ನಡೆದಿದೆ.

ಲಕ್ಷ್ಮೀ ಹಲ್ಲೆಗೊಳಗಾದ ಯುವತಿ. ಯಾಸ್ಮಿನ್ ಹಲ್ಲೆಗೈದ ಆರೋಪಿ. ಮಾವಿನಕಟ್ಟೆಯ ಮೆಡಿಕಲ್‌ಗೆ ಬಂದಿದ್ದ ಯಾಸ್ಮಿನ್, ಔಷಧ ಖರೀದಿಸಿ 500 ರೂಪಾಯಿ ನೋಟು ಕೊಟ್ಟಿದ್ದರು.

ಆಗ ಯುವತಿ ಚಿಲ್ಲರೆ ಇಲ್ಲ ಫೋನ್ ಪೇ ಮಾಡಿ ಎಂದು ಹೇಳಿದ್ದಳು. ಇದಕ್ಕೆ ಕೋಪಗೊಂಡ ಯಾಸ್ಮಿನ್ ಚಿಲ್ಲರೆ ಕೊಡು ಎಂದು ಜಗಳವಾಡಿ ಯುವತಿಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ಜಾತಿ ನಿಂದನೆ ಮಾಡಿದ್ದಾಳೆ.

ಘಟನೆಯ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಲಭ್ಯವಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆಗೊಳಗಾದ ಲಕ್ಷ್ಮೀ ಅವರನ್ನು ಕುಂದಾಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಆರೋಗ್ಯ ವಿಚಾರಿಸಿದರು. ಘಟನೆ ನಡೆದ ಔಷಧ ಅಂಗಡಿಗೂ ಭೇಟಿ ಮಾಹಿತಿ ಸಂಗ್ರಹಿಸಿದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top