ಮೇ 22ರಂದು ಆನೆಗುಂದಿ ಶ್ರೀಗಳವರ ಪಟ್ಟಾಭಿಷೇಕ ವರ್ಧಂತಿ

Picture of RB NEWS

RB NEWS

Bureau Report

ಪಡುಕುತ್ಯಾರು(ಉಡುಪಿ) : ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಯವರ 15ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ದವರ್ಧಂತ್ಯುತ್ಸವವು ಇದೇ ಬರುವ 2025ರ ಮೇ22ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿದೆ.

ಮೇ 22ರಂದು ವರ್ಧಂತಿ ಉತ್ಸವದ ಅಂಗವಾಗಿ ಸಾಮೂಹಿಕ ಚಂಡಿಕಾಯಾಗ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪ ಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಪ್ರಧಾನ, ಯುವಶಿಲ್ಪಿಗಳಿಗೆ ಅಭಿನಂದನೆ ನಡೆಯಲಿದೆ.

ಅಂದು ಬೆಳಿಗ್ಗೆ ಜಗದ್ಗುರು ಅವರಿಂದ ಕಟಪಾಡಿ ಶ್ರೀ ಮಹಾ ಸಂಸ್ಥಾನದಲ್ಲಿ ಪಟ್ಟಾಭಿಷೇಕ ವರ್ಧಂತಿಯ ಸಂಬಂಧಿತ ವಿವಿಧ ವೈದಿಕ ವಿಧಿ ವಿಧಾನಗಳ ನಡೆಯಲಿವೆ.

ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ ಕಟಪಾಡಿಯಲ್ಲಿರುವ ಅನಂತ ಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳ ವರವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಲಿದೆ.

ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಲಿದೆ. ನಂತರ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರು ಅವರ ಪಾದಪೂಜೆಯ ಬಳಿಕ ಮಹಾಸಂಸ್ಥಾನದ ಪ್ರಥಮ ವಿಶ್ವಸ್ಥರಾಗಿರುವ ದೇವಸ್ಥಾನಗಳ ಧರ್ಮದರ್ಶಿಗಳವರಿಂದ, ವಾಡಿಕೆಯಂತೆ ಆಯಾ ದೇವಸ್ಥಾನಗಳ ವತಿಯಿಂದ ಜಗದ್ಗುರು ಅವರಿಗೆ ಫಲನ್ಯಾಸ, ದೇವಸ್ಥಾನಗಳಲ್ಲಿ ವಾರ್ಷಿಕ ಸಂಗ್ರಹಿತ ಗುರುಕಾಣಿಕೆ ಸಮರ್ಪಣೆಪಟ್ಟಾಭಿಷೇಕ ವರ್ಧಂತಿಯ ವಿಧಿ ವಿಧಾನಗಳ ನಡೆಯಲಿವೆ.

ಮೋರ್ಸಿಂಗ್ ಸಾಮ್ರಾಟ್ ವಿದ್ವಾನ್ ಎಲ್ ಭೀಮಾಚಾರ್ ಮಕ್ಕಳಾದ ವಿದ್ವಾನ್ ರಾಜಶೇಖರಎಲ್ ಭೀಮಾಚಾರ್ ಬೆಂಗಳೂರು ವಿದುಷಿ ಭಾಗ್ಯಲಕ್ಷ್ಮೀಕೃಷ್ಣ ತಂಡದವರಿಂದ ಮೋರ್ಸಿಂಗ್ ತರಂಗಲಯ ಕಾರ್ಯಕ್ರಮ ನಡೆಯಲಿದೆ.

ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಪಡುಕುತ್ಯಾರು ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರ ಧರ್ಮ ಸಭೆಯಲ್ಲಿ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳ ಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ವೇಳೆ ಚಾಳುಕ್ಯ ಶಿಲ್ಪಿಲಿಪಿಕಾರ ಶ್ರೀ ಅಕ್ಷರ ಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತೀ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ, ಮಹಾಶಿಲ್ಪಿ ಶ್ರೀ ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿ ,ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿ, ವಾಸ್ತು ಪಿತಾಮಹನ್ಸ್ವರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿ ಹಾಗೂವಆನೆಗುಂದಿ ಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ.


ಚಾಳುಕ್ಯ ಶಿಲ್ಪಿಲಿಪಿಕಾರ ಶ್ರೀ ಅಕ್ಷರಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತೀ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ: ಖ್ಯಾತಸಂಶೋಧಕರು, ಲೇಖಕರು ಹಾಗೂ ವಿದ್ವಾಂಸರಾದ ಡಾ.ಜಿಜ್ಞಾನಾನಂದ ಬೆಂಗಳೂರು,
ಮಹಾಶಿಲ್ಪಿಶ್ರೀಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿ: ಖ್ಯಾತಸ್ಥಪತಿಗಳು ಪಾರಂಪರಿಕ ಶಿಲ್ಪಿಗಳಾದ ಶಿಲ್ಪಾಚಾರ್ಯಕೆ.ಪಿ .ಉಮಾಪತಿ ಆಚಾರ್ಯ ಕುಂಭಕೋಣಂ.
ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿ: ಶಿಲ್ಪಿ ಜಯಣ್ಣ ಆಚಾರ್ಯ ಚಿಕ್ಕಮಗಳೂರು
ವಾಸ್ತು ಪಿತಾಮಹನ್ಸ್ವರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿ : ಪಾರಂಪರಿಕ ದೇವಾಲಯ ವಾಸ್ತುಶಿಲ್ಪಿಗಳಾದ ಸ್ಥಪತಿ ಡಾ.ಕೆ ದಕ್ಷಿಣಾಮೂರ್ತಿ ಚೆನ್ನೈ
.
ಮೂಡಬಿದಿರೆಯ ಎಸ್. ಕೆ. ಎಫ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಡಾ. ಜಿ.ರಾಮಕೃಷ್ಣ ಆಚಾರ್ಯ ಹಾಗೂ ಡಾ. ಬಿ.ಶ್ರೀಕಂಠಾಚಾರ್ಯ.ಎಂ.ಆರ್.ಸಿ. ಮೈಸೂರು ವಿಶ್ವವಿದ್ಯಾನಿಲಯ ಸಂಚಾಲಕರಾಗಿರುವ ಮಹಾಸಂಸ್ಥಾನದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿಯು ಈ ಮೇಲಿನವರನ್ನು ಪ್ರಶಸ್ತಿಗೆ ಆಯ್ಕೆಮಾಡಿದೆ.


ಮಹಾಸಂಸ್ಥಾನದ ವತಿಯಿಂದ ಕಲೆ, ಸಮಾಜಸೇವೆ, ಶಿಲ್ಪಗಳಿಗೆ ನೀಡಲಾಗುವ ಆನೆಗುಂದಿ ಶ್ರೀಪ್ರಶಸ್ತಿಯನ್ನು ಸಚಿನ್ ಗಿರ್ಗಾವಕರ್ ಉದ್ಯಮಿ ವಿಶ್ವಕರ್ಮನಗರ ಸಂಸ್ಥಾಪಕ ವಿಜಯಪುರ , ಶ್ರೀಸುಬ್ರಾಯ ಆಚಾರ್ಯ ಇನ್ನಂಜೆ ಸಮಾಜಸೇವಕರು, ಶಿಲ್ಪಿಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ, ವಾಸ್ತುಶಿಲ್ಪಿಗಳು, ವಿದ್ವಾನ್ ರಾಜಶೇಖರಎಲ್ ಭೀಮಾಚಾರ್ ಬೆಂಗಳೂರು ಅಂತಾರಾಷ್ಟ್ರೀಯ ಮೋರ್ಸಿಂಗ್ ವಾದಕರು ಇವರಿಗೆ ಪ್ರದಾನ ಮಾಡಲಾಗುವುದು.

ಎಸ್ ಕೆಎಫ್ ಸಮೂಹ ಸಂಸ್ಥೆಗಳು ಬನ್ನಡ್ಕ ಮೂಡಬಿದ್ರೆ ಇವರು ನಿರ್ಮಿಸಿದ ಪಂಚಶಿಲ್ಪಗಳಲ್ಲಿ ಆಧುನಿಕತೆ ವಿನೂತನ ತಾಂತ್ರಿಕತೆ ನವನವೀನ ಆವಿಷ್ಕಾರ ಕುರಿತು ಮಹಾಸಂಸ್ಥಾನದ ಕಿರುಸಾಕ್ಷ್ಯಚಿತ್ರ ಮಹಾಶಿಲ್ಪಿ ಲೋಕಾರ್ಪಣೆ ನಡೆಯಲಿದೆ.

ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ , ಧಾರವಾಡ ಮೇಯರ್ ಶ್ರೀ ರಾಮಣ್ಣ ಬಡಿಗೇರ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿ ಅದ್ಯಕ್ಷ ಮೂಡಬಿದ್ರೆ ಎಸ್. ಕೆ. ಎಫ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾದ ಡಾ. ಜಿ.ರಾಮಕೃಷ್ಣಆಚಾರ್, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ಡಾ. ಬಿ.ಶ್ರೀಕಂಠಾಚಾರ್ .ಎಂ.ಆರ್.ಸಿ. ಮೈಸೂರು ವಿಶ್ವವಿದ್ಯಾನಿಲಯ,ಉದ್ಯಮಿ ನಿರಂಜನ ಆಚಾರ್ಯ ಬಡಿಗೇರ ಧಾರವಾಡ, ಶ್ರೀ ವೈದ್ಯನಾಥಸ್ವಾಮಿ ಕಾಮಾಕ್ಷಿಯಮ್ಮ ದೇವಸ್ಥಾನ ಧರಾಸುರಂ ಕುಂಭಕೋಣಂ ಅಧ್ಯಕ್ಷ ಟಿ.ಎಂರಾಜೇಂದ್ರನ್ , ಡಾ. ಪ್ರಭಾಕರ ಗೋವಿಂದ ಆಚಾರ್ಯ ಸ್ಥಪತಿಗಳು ಕುಂಭಕೋಣಂ, ಮುಖ್ಯಅತಿಥಿಗಳಾಗಿ ಭಾಗವಹಿಸುವರು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ಘನಪಾಠಿ ವಿದ್ವಾನ್ ಬಾಲಚಂದ್ರ ಭಟ್ಚಂದುಕೂಡ್ಲು, ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ವಿದ್ವಾನ್ ವೇ.ಬ್ರ. ಶಂಕರ ಆಚಾರ್ಯ ಕಡ್ಲಾಸ್ಕರ್ (ಪಂಡಿತ್), ಹುಬ್ಬಳ್ಳಿ ಘನಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ ಉಡುಪಿ ಕುತ್ಯಾರು ಗ್ರಾಮ ಪಂಚಾಯತ್ ಆಧ್ಯಕ್ಷ ಜನಾರ್ದನ ಆಚಾರ್ಯ ಕಳತ್ತೂರು ಆನೆಗುಂದಿ ಮೂಲ ಮಠ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ , ನಾಗರಾಜ ಆಚಾರ್ಯ ಕಾಡಬೆಟ್ಟು, ಕರಾವಳಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಕಾಳಿಕಾಂಬಾ ದೇವಾಲಯದ ಧರ್ಮದರ್ಶಿಗಳು ಹಾಗೂ ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರು, ಹಾಗೂ ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರಾದವರು ಭಾಗವಹಿಸುವರು.

ದೇವಸ್ಥಾನಗಳ ಧರ್ಮದರ್ಶಿಗಳಾದ ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ,  ಕೆ. ಪ್ರಭಾಕರ ಆಚಾರ್ಯ  ಮಧೂರು,  ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ,  ಬಾಲಕೃಷ್ಣ ಆಚಾರ್ಯ ಮೂಡಬಿದ್ರೆ,  ಮುರಹರಿ ಆಚಾರ್ಯ ಕಟಪಾಡಿ,  ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಗಣೇಶ ಆಚಾರ್ಯ, ಕಾಪು, ಕೆ. ಸುಧಾಕರ ಆಚಾರ್ಯ, ಕೊಲಕಾಡಿ,  ಸುಂದರ ಆಚಾರ್ಯ, ಕೋಟೆಕಾರು, ಬಿ.ಎಂಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಜನಾರ್ದನ ಆಚಾರ್ಯ ಆರಿಕ್ಕಾಡಿ,  ಪುರುಷೋತ್ತಮ ಆಚಾರ್ಯ ಕಾಞಂಗಾಡು,  ಗಜಾನನ ಆರ್ . ಆಚಾರ್ಯ  ಭಟ್ಕಳ, ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್ ಮುಂಬಯಿ,  ಚಿಕ್ಕಣ್ಣ  ಆಚಾರ್ ಬೆಂಗಳೂರು,  ನಾಗರಾಜ ಹಾವನೂರ ಹಳೇ ಹುಬ್ಬಳ್ಳಿ, ಶ್ರೀದತ್ತಾ ಎಂ ಆಚಾರ್ಯ ಅಂಕೋಲ , ಜಗದೀಶ್ ಆಚಾರ್ಯ ಪಡುಪಣಂಬೂರು,  ಗುರುನಾಥ ಪಟ್ಟಣಕೋಡಿ ಧಾರವಾಡ ಇವರುಭಾಗವಹಿಸುವರು.


ಮಹಾಸಂಸ್ಥಾನದ ವಿವಿಧ  ಸಮಿತಿಗಳ ಪ್ರಮುಖರಾದ  ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ,  ಗಣೇಶ್ ಆಚಾರ್ಯ ಕೆಮ್ಮಣ್ಣು, ಸುಂದರ ಆಚಾರ್ಯ ಬೆಳುವಾಯಿ,  ಸಂಧ್ಯಾಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ  ಶಾಖಾ ಮಠ ಸಮಿತಿ ಬೆಂಗಳೂರು ಅಧ್ಯಕ್ಷ   ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ಕೃಷ್ಣ ವಿ. ಆಚಾರ್ಯ, ಮುಂಬಯಿ, ಶ್ರೀಧರ ವಿ. ಆಚಾರ್ಯ ಮುಂಬಯಿ,  ಜಿ.ಟಿ ಆಚಾರ್ಯ ಮುಂಬಯಿ, ಶುಭಕರ ಎನ್. ಆಚಾರ್ಯ, ಕೊಯಂಬತ್ತೂರು,  ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ರವೀಶ್ ಜಿ ಆಚಾರ್ಯ ಮುಂಬಯಿ, ತುಕಾರಾಮ ಆಚಾರ್ಯ ಬೆಂಗಳೂರು, ವಿ.ಎಸ್ ಮೋಹನ ಆಚಾರ್ಯ ಬೆಂಗಳೂರು, ಯು.ಎಸ್.ಗಿರೀಶ್ ಆಚಾರ್ಯ ಕೊಯಂಬುತ್ತೂರು,  ಯೋಗೀಶ್ ಆಚಾರ್ಯ ಕೊಯಂಬತ್ತೂರು ಇವರ  ಉಪಸ್ಥಿತಿಯಲ್ಲಿ ಸಮಾರಂಭ ಸಂಪನ್ನಗೊಳ್ಳಲಿದೆ.

ಪಟ್ಟಾಭಿಷೇಕ ಮಹೋತ್ಸವದವರ್ಧಂತಿಯ ಪುಣ್ಯ ಸಮಾರಂಭದಲ್ಲಿ ಸಮಸ್ತ ಸಮಾಜ ಬಾಂಧವರುಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಗದ್ಗುರಗಳವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆನೆಗಂದಿ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top