ಎಸ್.ಎಸ್.ಎಲ್.ಸಿ. ಫಲಿತಾಂಶ : ಜ್ಞಾನ ಸುಧಾದ ಸ್ವಸ್ತಿ ಕಾಮತ್‌ ರಾಜ್ಯಕ್ಕೆ ಪ್ರಥಮ

Picture of RB NEWS

RB NEWS

Bureau Report


ಕಾರ್ಕಳ ::2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಣಿತನಗರದ ಸ್ವಸ್ತಿ ಕಾಮತ್625 ರಲ್ಲಿ625ಅಂಕಗಳೊAದಿಗೆ ರಾಜ್ಯಕ್ಕೆ ಪ್ರಥಮಸ್ಥಾನಿಯಾಗಿದ್ದಾರೆ.

ಲಿಖಿತ್ ಡಿ ಶೆಟ್ಟಿ621ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ ಐದನೇ ಸ್ಥಾನ, ಮಿಶಾಲ್‌ಅಸ್ಸಾದಿ ಮತ್ತು ವೇದಿಕಾ620ಅಂಕಗಳೊಂದಿಗೆ ಶಾಲೆಗೆ ತೃತೀಯ ಹಾಗೂರಾಜ್ಯಕ್ಕೆಆರನೇಸ್ಥಾನಪಡೆದುಕೊಂಡಿರುತ್ತಾರೆ.ರಾಜ್ಯಮಟ್ಟದ ಮೊದಲ ಹತ್ತು ಸ್ಥಾನಗಳಲ್ಲಿ ಸಂಸ್ಥೆಯ15ವಿದ್ಯಾರ್ಥಿಗಳು ಗುರುತಿಸಿಕೊಂಡಿರುತ್ತಾರೆ.


ಪರೀಕ್ಷೆಗೆ ಹಾಜರಾದ107 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು 613 (98%)ಕ್ಕಿಂತಅಧಿಕ ಅಂಕಗಳನ್ನು, 41 ವಿದ್ಯಾರ್ಥಿಗಳು 600 (96%) ಕ್ಕೂ ಹೆಚ್ಚು ಅಂಕಗಳನ್ನು, 43ವಿದ್ಯಾರ್ಥಿಗಳು 595 (95%)ಕ್ಕಿಂತಅಧಿಕಅAಕಗಳನ್ನುಗಳಿಸಿರುತ್ತಾರೆ. 75(70.09%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆ ಹೊಂದಿರುತ್ತಾರೆ.

89 ಉತ್ತರಪತ್ರಿಕೆಗಳಲ್ಲಿ 100ಕ್ಕೆ 100 ಅಂಕಗಳ ಸಾಧನೆ ಮಾಡಿರುತ್ತಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯಅಧ್ಯಕ್ಷರು, ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top