ಆಟೋ ರಿಕ್ಷಾ ಚಾಲಕನ ಕೊಲೆ : ಆರೋಪಿಗಳ ಬಂಧನಕ್ಕೆ ಡಿವೈಎಫ್ಐ ಆಗ್ರಹ

Picture of RB NEWS

RB NEWS

Bureau Report

ಮಂಗಳೂರು : ಮುಲ್ಕಿ ಭಾಗದ ಕೊಳ್ಳಾಡು ನಿವಾಸಿ ಮೊಹಮ್ಮದ್ ಶರೀಫ್ (52) ಎಂಬವರು ದಿನಾಂಕ ಎಪ್ರಿಲ್ 9 ರಂದು ಓ ಕೆಲಸಕ್ಕೆಂದು ಆಟೋ ರಿಕ್ಷಾ ಓಡಿಸಿಕೊಂಡು ಹೋದವರು ಹಿಂದಿರುಗಿ ಬರಲೇ ಇಲ್ಲ. ಈ ಬಗ್ಗೆ ಸಂಶಯಗೊಂಡ ಮನೆಮಂದಿ ಸ್ಥಳೀಯ ಮುಲ್ಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ಹುಡುಕಾಟದ ಪ್ರಯತ್ನ ನಡೆಸಿದ್ದಾರೆ.

ಆದರೆ ರಿಕ್ಷಾ ಚಾಲಕ ಮೊಹಮ್ಮದ್ ಶರೀಫ್ ಮರು ದಿನ (10-4-25) ಸಂಜೆ ಹೊತ್ತಿಗೆ ಮಂಜೇಶ್ವರದ ಕುಂಜತ್ತೂರಿನ ನಿರ್ಜನ ಪ್ರದೇಶದ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ ಪ್ರಕರಣದ ಸುದ್ದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಓಡಿಸಿ ದುಡಿಯುವಂತಹ ಚಾಲಕರನ್ನು ಬೆಚ್ಚಿಬೀಳಿಸಿದೆ. ಆಟೋ ಚಾಲಕ ಮೊಹಮ್ಮದ್ ಶರೀಫರನ್ನು ಹತ್ಯೆಗೈದ ಕೊಲೆಗಟುಕರನ್ನು ಪೊಲೀಸ್ ಇಲಾಖೆ ಶೀಘ್ರ ಬಂಧನ ಮಾಡಿ ಈ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top