ರಾಜ್ಯಮಟ್ಟದ ನಾಟಕೋತ್ಸವ “ದಶರಂಗ ಸಂಭ್ರಮ
ಕಾರ್ಕಳ:- ರಂಗಸಂಸ್ಕೃತಿ ಕಾರ್ಕಳ ಇದರ ದಶಮಾನೋತ್ಸವ ಪ್ರಯುಕ್ತ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ದಶರಂಗ ಸಂಭ್ರಮ ಕಾರ್ಯಕ್ರಮವು ಮಾಚ್೯ ೨೧ರಿಂದ ೨೪ರ ವರೆಗೆ ಕಾರ್ಕಳದ ಬಿ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಜರಗಲಿದೆ.
ಮೊದಲನೆಯ ದಿನ ಮಾಚ್೯ ೨೧ ಗುರುವಾರದಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡಬಿದ್ರೆ ಯವರು ಅಭಿನಯಿಸಿರುವ ಡಾ. ಜೀವನ್ ರಾಮ್ ಸುಳ್ಯ ನಿರ್ದೇಶನದ “ನಾಯಿಮರಿ” ನಾಟಕ, ಎರಡನೆಯ ದಿನ ಮಾಚ್೯ ೨೨ ಶುಕ್ರವಾರದಂದು ಸಾಹಿತಿ ವೈದೇಹಿ ರಚನೆಯ ಡಾ. ಶ್ರೀಪಾದ್ ಭಟ್ ನಿರ್ದೇಶನದ ನಟನ ಮೈಸೂರು ಅಭಿನಯಿಸಿರುವ “ಕಣಿವೆಯ ಹಾಡು” ಮೂರನೆಯ ದಿನ ಮಾಚ್೯ ೨೩ ಶನಿವಾರದಂದು ಗಣೇಶ್ ಮಂದರ್ತಿ ನಿರ್ದೇಶನದ “ಚೋಮನ ದುಡಿ”, ನಾಲ್ಕನೆಯ ದಿನ
ಮಾಚ್೯ ೨೪ರಂದು ಶಶಿರಾಜ್ ಕಾವೂರು ನಿರ್ದೇಶನದ ” ದಟ್ಸ್ ಆಲ್ ಯುವರ್ ಆನರ್” ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರತಿದಿನ ಸಂಜೆ ೬-೪೫ಕ್ಜೆ ನಾಟಕ ಆರಂಭಗೊಳ್ಳಲಿದ್ದು ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದು ‘ರಂಗಸಂಸ್ಕೃತಿ’ಯ ಅಧ್ಯಕ್ಷ ನಿತ್ಯಾನಂದ ಪೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






































