ಕಾರ್ಕಳ: ಬೈಕ್ ಖರೀದಿಯ ಕನಸ್ಸು ಕಂಡ ಕಾರ್ಕಳದ ಯುವಕನೊಬ್ಬ ಓಎಲ್ಎಕ್ಸ್ ನಲ್ಲಿ ಇದ್ದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿ ಮೋಸದ ಜಾಲಕ್ಕೆ ಬರೋಬರಿ ರೂ. 1,18,139 ಕಳೆದುಕೊಂಡು ನ್ಯಾಯಕೋರಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಮೆಟ್ಟಲೇರಿದ್ದಾನೆ.
ಇರ್ಫಾನ್ (27) ಎಂಬಾತ ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದರು.
ಇವರು ಬೈಕ್ ಖರೀದಿ ಮಾಡಲು ಸಾಮಾಜಿಕ ಜಾಲತಾಣವಾದ olx ನಲ್ಲಿ ಹುಡುಕಾಟ ನಡೆಸುತ್ತಿರುವ ಸಮಯ ಅದರಲ್ಲಿ ಸಿಕ್ಕಿದ ಮೊಬೈಲ್ ನಂಬ್ರಗಳಿಗೆ 2023 ಆಗಸ್ಟ್ ೦3 ರಂದು ಬೆಳಿಗ್ಗೆ ೦9:3೦ ಗಂಟೆಗೆ ಕರೆಮಾಡಿರುತ್ತಾರೆ.
ಬೈಕ್ ಬಗ್ಗೆ ಮಾಹಿತಿ ಕೇಳಿದಾಗ ಆ ವ್ಯಕ್ತಿ ತಾನು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ತಾನು ಬೈಕ್ ಮಾರಾಟ ಮಾಡುತ್ತೇನೆ ಎಂದು ಹೇಳಿ ಬೈಕಿನ ಫೋಟೋ ಮತ್ತು ವಿವರವನ್ನು ಇರ್ಫಾನ್ ನ ವಾಟ್ಸಾಪ್ ಮೂಲಕ ರವಾಯಿಸಿರುತ್ತಾನೆ.
ವಾಟ್ಸಾಪ್ನಲಲಿ ಬಂದ ಬೈಕ್ನ ಫೋಟೋ ಗಮನಿಸಿದ ಇರ್ಫಾ£ ಬೈಕ್ ಖರೀದಿಸುವ ಕುರಿತು ಮಾತುಕತೆ ನಡೆಸಿದಲ್ಲದೇ ಒಪ್ಪಿಗೆ ಸೂಚಿಸಿದ್ದಾರೆ.
ಆ ವ್ಯಕ್ತಿಯು ಆತನ ಬ್ಯಾಂಕ್ ನ ಖಾತೆ ನೀಡಿ ಸದರಿ ಖಾತೆಗೆ ಹಣ ಜಮಾವಣೆ ಮಾಡಿದರೆ ಸಾಯಂಕಾಲದ ಒಳಗಾಗಿ ಬೈಕನ್ನು ನಿಮ್ಮ ಮನೆಗೆ ಮುಟ್ಟಿಸುವುದಾಗಿ ಇರ್ಫಾನ್ ಗೆ ಮನದಟ್ಟು ಮಾಡಿದ್ದಾನೆ.
ಅದರಂತೆ ಆತನು ತಿಳಿಸಿದ ಬ್ಯಾಂಕ್ ಖಾತೆಗೆ ಇರ್ಫಾನ್ ಹಂತ ಹಂತವಾಗಿ ಒಟ್ಟು ರೂ. 1,18,139 ಹಣವನ್ನು ವರ್ಗಾಯಿಸಿದರೂ ಇರ್ಫಾನ್ಗೆ ಇದುವರೆಗೂ ಬೈಕನ್ನು ನೀಡದೆ ಹಣವನ್ನು ವಾಪಾಸು ಪಿರ್ಯಾದಿದಾರರ ಖಾತೆಗೆ ಜಮಾ ಮಾಡದೇ ಮೋಸ ಮಾಡಿರುವುದಾಗಿ ತಿಳಿದುಬಂದಿದೆ.
ಇರ್ಪಾನ್ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.






































