ಸಾಹೇಬ್ರಕಟ್ಟೆ: ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯಿಂದ 4 ನೇ ಮನೆ ‘ಪಾಂಚಜನ್ಯ’ ಹಸ್ತಾಂತರ -ಮಹಿಳಾ ಸಶಕ್ತಿಕರಣ ಪ್ರೋತ್ಸಾಹ ಧನ ವಿತರಣೆ

Picture of RB NEWS

RB NEWS

Bureau Report

ಕಾರ್ಕಳ : ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಮತ್ತು ಜಿಎಸ್‌ಬಿ ಸೇವಾ ಸಂಘ (ರಿ) ಸಾಹೇಬ್ರಕಟ್ಟೆ ಶಿರಿಯಾರ ಇವರ ಸಹಯೋಗದೊಂದಿಗೆ ಊರ ಹಾಗೂ ಪರ ಊರ ದಾನಿಗಳ ಸಹಕಾರದಿಂದ ಸುಲೋಚನಾ ಮತ್ತು ನಾಗೇಶ್ ಪ್ರಭು ಕಾಜ್ರಳ್ಳಿ ಇವರ ಕುಟುಂಬಕ್ಕೆ ನೂತನವಾಗಿ ನಿರ್ಮಾಣ ಮಾಡಿಕೊಟ್ಟಿರುವ ನೂತನ ಗೃಹ ಪಾಂಚಜನ್ಯ ಇದರ ಹಸ್ತಾಂತರ ಕಾರ್ಯಕ್ರಮವು ಕಾಜ್ರಳ್ಳಿಯಲ್ಲಿ ಮಾರ್ಚ್ 31 ರವಿವಾರದಂದು ಜರುಗಿತು.

ವೇದಮೂರ್ತಿ ಮಹೇಶ್ ಭಟ್ ರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಜರುಗಿತು.

ಸಾಗರದ ಉದ್ಯಮಿ ಉಮಾ ಮತ್ತು ಶಿವಾನಂದ ಭಂಡಾರ್ಕರ್ ದಂಪತಿಗಳು ನೂತನ ಗೃಹವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಾರ್ಗದರ್ಶಕರಾದ ವೇ.ಮೂ. ಚೆಂಪಿ ರಾಮಚಂದ್ರ ಅನಂತ ಭಟ್ ರವರು ಮನೆಯ ಕೀಲಿ ಕೈ ಹಸ್ತಾಂತರಿಸಿ ಮಾತನಾಡುತ್ತಾ, ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆ ಕಳೆದ 13 ವರ್ಷಗಳಿಂದ ನಿರಂತರವಾಗಿ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿದ್ಯಾ ಪೋಷಕ ನಿಧಿ , ಕುಟುಂಬ ಚೈತನ್ಯ ನಿಧಿ,ಆರೋಗ್ಯ ಚೈತನ್ಯ ನಿಧಿ, ಗೃಹ ನಿರ್ಮಾಣ ಯೋಜನೆಯ ಮೂಲಕ ಅವಶ್ಯಕತೆಯುಳ್ಳವರಿಗೆ ಸಕಾಲದಲ್ಲಿ ನೆರವು ನೀಡುತ್ತಿರುವ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಭು ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಪ್ರವರ್ತಕರಾದ ಶಾಲಿನಿ ಅರವಿಂದ ಪ್ರಭುರವರು ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆಯ ವತಿಯಿಂದ ಆಯ್ದ 15 ಮಂದಿ ಮಹಿಳಾ ಫಲಾನುಭವಿಗಳಿಗೆ ಮನೆಯಲ್ಲಿಯೇ ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬನೆಯ ಬದುಕಿಗಾಗಿ ಮಹಿಳಾ ಸಶಕ್ತೀಕರಣದ ಯೋಜನೆಯ ತಲಾ ರೂ. 25,000 ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.

ಪ್ರಭು ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಮುಂದಿನ ದಿನಗಳಲ್ಲಿ ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಸಹಯೋಗದೊಂದಿಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಜೊತೆಗೆ ಆರ್ಥಿಕ ಸಹಕಾರವನ್ನು ಪಡೆದಿರುವ ಫಲಾನುಭವಿಗಳು ಅದರ ಸದ್ವಿನಿಯೋಗದೊಂದಿಗೆ ಜೀವನದಲ್ಲಿ ಯಶಸ್ಸನ್ನು ಕಾಣಬೇಕೆಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ಲೆಕ್ಕ ಪರಿಶೋಧಕ ಎಸ್ ಎಸ್ ನಾಯಕ ಮಾತನಾಡುತ್ತಾ, ಅಶಕ್ತರ ಬಾಳಿಗೆ ಆಶಾಕಿರಣವಾಗಿರುವ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಸಮಾಜಕ್ಕೆ ಮಾದರಿಯಾಗಿ ಸಮಾಜ ಸಂಘಟನೆ ಹಾಗೂ ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಶ್ಲಾಘಿಸಿದರು.

ರೂ. 18 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಗೃಹ ನಿರ್ಮಾಣ ಯೋಜನೆಗೆ ಆರ್ಥಿಕ ಹಾಗೂ ವಸ್ತು ರೂಪದಲ್ಲಿ ಸಹಕರಿಸಿದ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.

ಜಿ.ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್.ವಿವೇಕಾನಂದ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಳೆದ ಆರ್ಥಿಕ ವರ್ಷದಲ್ಲಿ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ಉಡುಪಿ ,ದಕ್ಷಿಣ ಕನ್ನಡ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ 1115 ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿದ್ಯಾ ಪೋಷಕ ನಿಧಿಯ ಮೂಲಕ ಆರ್ಥಿಕ ಸಹಕಾರದ ಜೊತೆಗೆ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಕುಟುಂಬ ಚೈತನ್ಯ ನಿಧಿ, ಆರೋಗ್ಯ ಚೈತನ್ಯ ನಿಧಿ ಹಾಗೂ ನೂತನ ಗೃಹ ನಿರ್ಮಾಣ ಯೋಜನೆಗೆ ಒಟ್ಟು 1 ಕೋಟಿ 60 ಲಕ್ಷ ರೂಪಾಯಿಗಳನ್ನು ದಾನಿಗಳ ಸಹಕಾರದಿಂದ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.

ವೈಜಯಂತಿ ಕಾಮತ್, ಶಾಲಿನಿ ಅರವಿಂದ ಪ್ರಭು, ಪ್ರಕಾಶ್ ಪ್ರಭು ಶಿವಮೊಗ್ಗ
, ಗೋಕುಲ ದಾಸ ಭಟ್, ರಾಮದಾಸ ಕಾಮತ್, ತೀರ್ಥಹಳ್ಳಿ, ಅಶೋಕ್ ಪ್ರಭು ಹಾಗೂ ಜಿಎಸ್ ಬಿ ಸೇವಾ ಸಂಘ ಸಾಹೇಬ್ರಕಟ್ಟೆ ಶಿರಿಯಾರ ಇದರ ಅಧ್ಯಕ್ಷ ಗಾವಳಿ ನಾರಾಯಣ ಶೆಣೈ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ ಕೋಟ ವಹಿಸಿದ್ದರು.

ಮಧುವನ ಮಾಧವ ಹೆಗ್ಡೆ ಸ್ವಾಗತಿಸಿದರು, ಮಧುವನ ಗಣೇಶ ನಾಯಕ್ ವಂದಿಸಿದರು.

ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top