ಮನವಿ ಪತ್ರ ಸಲ್ಲಿಸಿದ ಮುನಿಯಾಲು ಉದಯ ಶೆಟ್ಟಿ
ಉಡುಪಿ : ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಸಭೆಯ ಸಂದರ್ಭದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಮನವಿ ಪತ್ರವನ್ನು ನೀಡಿ ವಿನಂತಿಸಿದರು.

ಕಾರ್ಕಳ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗ ಬೇಕಿದೆ. ಈಗಾಗಲೇ ಜನರು ತಮ್ಮ ಗ್ರಾಮದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುನಿಯಾಲು ಉದಯ ಶೆಟ್ಟಿಯವರ ಬಳಿ ವಿನಂತಿ ಮಾಡಿದ್ದರು.
ಹಲವಾರು ಗ್ರಾಮಗಳ ಜನರ ಮನವಿಯನ್ನು ಒಗ್ಗೂಡಿಸಿದ ಅವರು ಸಚಿವರ ಬಳಿ ಈ ಬಗ್ಗೆ ಪ್ರಸ್ತಾಪ ಮಾಡಿ ಅನುದಾನ ಮಂಜೂರು ಮಾಡುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ
ಶೀಘ್ರದಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಅನುದಾನ ಮಂಜೂರು ಮಾಡುತ್ತೇನೆ ಎಂದು ಸಚಿವರು ಉದಯ ಶೆಟ್ಟಿಯವರಿಗೆ ತಿಳಿಸಿದ್ದಾರೆ.






































