ವಾರ ಭವಿಷ್ಯ ದಿನಾಂಕ 16.02.2025 ರಿಂದ 22.02.2025 ರ ವರೆಗೆ
ಮೇಷ : ದ್ವಿತೀಯಾದಲ್ಲಿ ಗುರು ಇರುವುದು ನಿಮಗೆ ಪೂರ್ಣ ದೈವಾನುಗ್ರಹವಿರುವುದನ್ನು ತೋರಿಸುತ್ತಿದೆ. ವ್ಯಯದಲ್ಲಿ ಇರುವ ಶುಕ್ರ ಮತ್ತು ರಾಹು ಸಂಗಾತಿಯ ಅತಿಯಾದ ಕಿರಿಕಿರಿ ,ಸಂಸಾರದಲ್ಲಿ ಬಿರುಗಾಳಿಯ ಸಾಧ್ಯತೆಯನ್ನು ತೋರಿಸುತ್ತಿದೆ. ಕುಜ ತೃತೀಯಾದಲ್ಲಿ ಶುಭ ಫಲವನ್ನು ಅತಿಯಾದ ಧನ ಲಾಭವನ್ನು ತೋರಿಸುತ್ತಿದ್ದಾನೆ. ಹಲವಾರು ವಿಚಾರಗಳಲ್ಲಿ ಮನಸ್ತಾಪ ,ಹಿರಿಯರೊಂದಿಗೆ ಹೊಂದಾಣಿಕೆಯ ಕೊರತೆ ಉಂಟಾಗಲಿದೆ .ಸಾಲ ಮಾಡುವ ಪ್ರಸಂಗ ಉಂಟಾಗಲಿದೆ .ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಕೆಲವು ರಹಸ್ಯಗಳು ಬಹಿರಂಗಗೊಳ್ಳಲಿದೆ. ದುಷ್ಟರಿಂದ ಆದಷ್ಟು ದೂರವಿರುವುದು ಒಳ್ಳೆಯದು. ನಿಮ್ಮ ಮಾವನವರಿಂದ ,ಸಂಗಾತಿಯಿಂದ ಹಲವು ರೀತಿಯ ಲಾಭ ಪ್ರಾಪ್ತಿ ಯೋಗವಿದೆ .ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ.
ವೃಷಭ : ಭವಿಷ್ಯದ ಬಗ್ಗೆ ಯೋಜನೆ /ಯೋಚನೆಯನ್ನು ರೂಪಿಸಲಿದ್ದೀರಿ. ಉತ್ತಮವಾದ ಆದಾಯ ನಿಮ್ಮದಾಗಲಿದೆ. ಮಾತಿನಲ್ಲಿ ಹಿಡಿತವಿರಲಿ. ಮಕ್ಕಳ ಆರೋಗ್ಯದಲ್ಲಿ ಏರಿಳಿತ ಬರಲಿದೆ. ತಾಳ್ಮೆಯ ಪರೀಕ್ಷೆ ಆಗಾಗ ನಡೆಯುತ್ತಿರುತ್ತದೆ .ಪ್ರವಾಸ ಮಾಡುವ ಸಮಯವಿದು. ಸ್ನೇಹಿತರೊಂದಿಗೆ ಸಂತೋಷ ಕೂಟ ಭೋಜನ ನಡೆಯಲಿದೆ. ಕಾನೂನಿನ ಸಂಕೋಲೆಯಲ್ಲಿ ಸಿಲುಕಿದವರಿಗೆ ಬಿಡುಗಡೆಯ ಭಾಗ್ಯ ದೊರಕಲಿದೆ. ಉದ್ಯೋಗದಲ್ಲಿ ವರ್ಗಾವಣೆ /ಬದಲಾವಣೆಯ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಶುಭ ಶೋಭನಾದಿ ಕೆಲಸಗಳು ನಡೆಯಲಿವೆ. ಧನ ಹೂಡಿಕೆಯ ಕ್ರಮ ಸರಿ ಇದ್ದಾಗ ಬರುವ ಆದಾಯವೂ ಸರಿಯಾಗಿ ಇರುತ್ತದೆ. ದೇವಿಯ ಆರಾಧನೆ ಅತ್ಯಂತ ಉತ್ತಮ ಪ್ರಯೋಜನವನ್ನು ನೀಡಲಿದೆ.
ಮಿಥುನ : ಕುಜ ಜನ್ಮ ರಾಶಿಯಲ್ಲಿ ಇರುವುದರಿಂದ ಯಾವುದೇ ರೀತಿಯ ಶತ್ರುಗಳಿದ್ದರೂ ಅವರನ್ನು ಎದುರಿಸುವಿರಿ. ಕೆಲಸದ ಒತ್ತಡ ,ದೇಹದಲ್ಲಿ ಅನಾರೋಗ್ಯ ಇರುವುದರಿಂದ ತಾಳ್ಮೆಯನ್ನು ಕಳೆದುಕೊಳ್ಳಬೇಡಿರಿ.ದೈವಾನುಗ್ರಹದ ಕೊರತೆ ಇರುತ್ತದೆ. ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ಗೌರವಿಸುವುದನ್ನು ಕಲಿಯಿರಿ. ರಾಜಕೀಯ ವರ್ಗದವರಿಗೆ ಶತ್ರುಗಳಿಂದ ತೊಂದರೆಯಾಗಲಿದೆ.ನಿಮ್ಮ ದುಡುಕು ವರ್ತನೆಯಿಂದ ಕಾರ್ಯ ಭಂಗ ಬರಬಹುದು. ಆದಾಯ ವೃದ್ಧಿಯಾಗಲಿದೆ. ಅಧಿಕಾರಿವರ್ಗದವರಿಂದ ಕಿರಿಕಿರಿ ಬರಲಿದೆ. ಕೋರ್ಟ್ ಕಚೇರಿ ವ್ಯವಹಾರಗಳು ಸುಖಾಂತ್ಯ ಕಾಣಲಿದೆ.
ಕರ್ಕಾಟಕ : ನಿರೀಕ್ಷಿತ ಕೆಲಸಗಳೆಲ್ಲವೂ ಸರಾಗವಾಗಿ ನಡೆಯಲಿದೆ .ನೆಮ್ಮದಿ ಕಡಿಮೆ ಇದ್ದರೂ ಆರ್ಥಿಕ ಚಿಂತೆ ಇರುವುದಿಲ್ಲ ಅಷ್ಟಮದಲ್ಲಿ ರವಿ ,ಶನಿ ,ಬುಧ ಇರುವುದರಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ .ಕೃಷಿಕರಿಗೆ ನಷ್ಟ ಉಂಟಾಗಲಿದೆ. ವ್ಯಾಪಾರಿಗಳಿಗೆ ಅಧಿಕಾರಿ ವರ್ಗದವರಿಗೆ ಸಂತಸದ ಕಾಲವಾಗಲಿದೆ.ಆಭರಣ ,ಗೃಹ ಅಲಂಕಾರ ವಸ್ತುಗಳ ಖರೀಧಿಯಿಂದ ಸಂತಸ. ವಿದ್ಯಾರ್ಥಿಗಳಿಗೆ ವಿದ್ಯಾ ಪ್ರಗತಿಯ ಕಾಲವಾಗಿದೆ. ಮನರಂಜನೆ ,ಸುಖ ಸಂತೋಷ ,ಸಣ್ಣ ಪ್ರವಾಸ ,ಮನೆಯ ದುರಸ್ತಿಕಾರ್ಯ ಹೊಸ ಯೋಜನೆಗಳ ಕಾರ್ಯಾರಂಭ ನಡೆಯಲಿದೆ.
ಸಿಂಹ : ಉದ್ಯೋಗ ಕ್ಷೇತ್ರದಲ್ಲಿ ಇರುವವರಿಗೆ ಮುಂಬಡ್ತಿ ಯೋಗ.ಸದ್ಯದಲ್ಲಿ ಮಂಗಳ ಕಾರ್ಯಗಳಿಂದ ಮನಸ್ಸಿಗೆ ಸಂತೋಷ ನೆಮ್ಮದಿ ಸಿಗಲಿದೆ .ಹೆಚ್ಚು ಔದಾರ್ಯ ತೋರಿದರೆ ವಂಚನೆಗೆ ಒಳಗಾಗುವಿರಿ.ಕಫ ಶೀತ ತಲೆ ನೋವಿನಿಂದ ಆರೋಗ್ಯ ಏರುಪೇರಾಗುವ ಸಾಧ್ಯತೆ ಇರುತ್ತದೆ.ನಿರುದ್ಯೋಗಿಗಳಿಗೆ ಜೀವನ ಕಹಿ ಎನಿಸೀತು. ಧೈರ್ಯವೇ ಎಲ್ಲದಕ್ಕೂ ಮೂಲ ಸಾಧನವಾಗಿದೆ. ತೊಡಕುಗಳು ದೂರವಾಗಲಿದೆ. ಆರ್ಥಿಕ ಸ್ಥಿತಿ ಚೇತರಿಕೆ ಯಾಗಲಿದೆ.ಕಟ್ಟಡ/ಮನೆಯ ಮೇಲೆ ಹಣ ಹೂಡಿಕೆ ಬೇಡ.ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಬೇರೆಯವರ ವಾಹನ ಚಲಾಯಿಸಬೇಡಿರಿ. ಪ್ರಯಾಣದಿಂದ ಲಾಭವಾಗಲಿದೆ. ಹಣ ಕೊಡುವವರು ಇರುವ ವರೆಗೆ ತೆಗೆದುಕೊಳ್ಳುವವರು ಇರುತ್ತಾರೆ.
ಕನ್ಯಾ : ರಾಜಕೀಯದಲ್ಲಿ ಗೊಂದಲಗಳಿದ್ದರೂ ಹೊಸ ಸ್ಥಾನ -ಮಾನ ಸಿಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಸಿಗಲಿದೆ.ಎಲಾ ರೀತಿಯ ಸೌಕರ್ಯಗಳಿದ್ದರೂ ಚಿಂತೆ ತಪ್ಪುವುದಿಲ್ಲ. ನೌಕರ ವರ್ಗದವರಿಗೆ ಹೆಜ್ಜೆ ಹೆಜ್ಜೆಗೂ ವಿವೇಚನೆ ಅಗತ್ಯವಿದೆ.ಆರ್ಥಿಕವಾಗಿ ಆದಾಯವಿದ್ದರೂ ಖರ್ಚು ಹೆಚ್ಚುವುದರಿಂದ ಚಿಂತೆಗೆ ಕಾರಣವಾಗಲಿದೆ. ರಕ್ತದೊತ್ತಡ ಉಂಟಾಗುವ ಸಾಧ್ಯತೆ ಇದೆ. ಮಧುಮೇಹದ ಬಗ್ಗೆ ಎಚ್ಚರವಿರಲಿ. ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳು -ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹೊಸ ಮನೆ/ಅಂಗಡಿ ಖರೀಧಿಸುವಿರಿ. ಕೆಲವರು ಕಾಲು ಗಂಟು ನೋವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ .
ತುಲಾ : ತಾತ್ಕಾಲಿಕ ವೃತ್ತಿಯವರಿಗೆ ಅಭಿವೃದ್ಧಿಯ ಸಮಯವಾಗಿದೆ. ಅಧಿಕಾರಿಗಳಿಗೆ ,ಉದ್ಯೋಗಿಗಳಿಗೆ ವರ್ಗಾವಣೆಯ ತೊಂದರೆ ಕಾಡಲಿದೆ.ಇದಕ್ಕೆಲ್ಲಾ ಅಷ್ಟಮದಲ್ಲಿರುವ ಗುರುವಿನ ಪ್ರಭಾವ ಕಾರಣವಾಗಿರುವುದರಿಂದ ಶಿವ ಸಹಸ್ರನಾಮ /ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ. ಸಾಂಸಾರಿಕ ಸಮಸ್ಯೆಗಳು ಮನಸ್ಸಿನ ನೆಮ್ಮದಿಯನ್ನು ಕೆಡಿಸಲಿವೆ .ಆರೋಗ್ಯದ ಕಡೆಗೆ 60+ ಆದವರು ಬಹಳ ಎಚ್ಚರವಹಿಸಬೇಕು. ನೀವು ಮಾಡುವ ಯಾವುದೇ ಕೆಲಸಗಳಲ್ಲಿ ಉತ್ಸಾಹವನ್ನೂ ತೋರಿಸಿದರೆ ಬರುವ ಆದಾಯಕ್ಕೆ ಯಾವುದೇ ಕೊರತೆ ಆಗುವುದಿಲ್ಲ. ಕೃಷಿಕರಿಗೆ ನೆಮ್ಮದಿಯ ದಿನಗಳಾಗಿವೆ. ಅರ್ಧಕ್ಕೆ ನಿಂತ ಕೆಲಸಗಳೆಲ್ಲವೂ ಪೂರ್ಣಗೊಳ್ಳಲಿವೆ. ಭೂಮಿ ಮತ್ತು ಮರದ ವ್ಯಾಪಾರಿಗಳಿಗೆ ಉತ್ತಮ ಫಲ ಸಿಗಲಿದೆ.
ವೃಶ್ಚಿಕ : ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬಂದಿದೆ. ಮೇ 14 ರ ವರೆಗೆ ಉತ್ತಮ ಸಮಯವಾಗಿದೆ. ವೃತ್ತಿರಂಗದಲ್ಲಿ ಹಿತ ಶತ್ರುಗಳಿಂದ ತೊಂದರೆಯನ್ನು ಅನುಭವಿಸುವಿರಿ. ರವಿ ಮತ್ತು ಶನಿ ,ಬುಧ ಜೊತೆಯಾಗಿ ಇರುವುದೇ ಇದಕ್ಕೆ ಕಾರಣವಾಗಿದೆ. ರಾಜಕೀಯದಲ್ಲಿ ಇರುವವರು ಬಹಳ ಎಚ್ಚರವಹಿಸಬೇಕು. ಎಲ್ಲಿ ನೋಡಿದರೂ ಪರಸ್ಪರ ವೈಷಮ್ಯ ,ಬೇಸರ ಇರುತ್ತದೆ. ಅಪವಾದ ತಮ್ಮವರಿಂದಲೇ ಕೇಳಬೇಕಾದ ಕಾಲ ಬರುತ್ತದೆ. ವಾಹನ ಖರೀಧಿ ಗೃಹ ನಿರ್ಮಾಣ ಕಾರ್ಯವನ್ನು ಮುಂದೂಡುವುದು ಒಳ್ಳೆಯದು. ಹಣದ ಮುಗ್ಗಟ್ಟು ಉಂಟಾಗಲಿದೆ. ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗಲು ಕಾಯಬೇಕಾಗುತ್ತದೆ. ಕುಟುಂಬದಲ್ಲಿ ಮಾತಿನಲ್ಲಿ ಹಿಡಿತವಿಲ್ಲದಿದ್ದರೆ ವಿವಾದದಲ್ಲಿ ಸಿಲುಕುವಿರಿ .ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ .
ಧನು : ವ್ಯಾಪಾರ-ವ್ಯವಹಾರದಲ್ಲಿ ಇರುವವರಿಗೆ ಲಾಭದಾಯಕ ವಾತಾವರಣವಿರುತ್ತದೆ. ಕೃಷಿ, ಬೇಸಾಯ ವೃತ್ತಿಯವರಿಗೆ ಸಮಾಧಾನಕರ ದಿನಗಳು. ಗುರು 6 ನೇ ಮನೆಯಲ್ಲಿ ಇರುವುದರಿಂದ ,ಹಾಗೆಯೇ ಕುಜ ಸಪ್ತಮದಲ್ಲಿ ಇರುವುದರಿಂದ ಕೆಲವೊಮ್ಮೆ ಸಾಂಸಾರಿಕ ಸಮಸ್ಯೆಗಳು ನೆಮ್ಮದಿಯನ್ನು ಕೆಡಿಸಲಿವೆ. ಬಂಧು-ಮಿತ್ರರಿಂದ ಸಹಕಾರವಿದೆ .ಯಾವುದೇ ಪ್ರತಿಕೂಲ ಪರಿಸ್ಟಿತಿ ಬಂದರೂ ಸಹನೆ ಕಾಯ್ದು ಕೊಳ್ಳಿರಿ. ಕೆಲಸದ ಒತ್ತಡ ಹೆಚ್ಚಬಹುದು. ಸಣ್ಣ ಪುಟ್ಟ ಹಿನ್ನೆಡೆಗೆ ಹೆದರದಿರಿ. ದೈಹಿಕ ಕ್ಷಮತೆ ಕಾಪಾಡಿಕೊಳ್ಳಿರಿ. ಯಾರು ನಿಮ್ಮ ಹಿತೈಷಿಗಳು ಅಥವಾ ಶತ್ರುಗಳು ಎಂದು ತಿಳಿದುಕೊಳ್ಳಲು ಇದು ಸಕಾಲವಾಗಿದೆ . ಆಸ್ತಿವಿವಾದ ಬಗೆಹರಿಯಲಿದೆ.
ಮಕರ : ಉತ್ಸಾಹ ಹೆಚ್ಚುವ ಸಮಯವಿದು. ನಿಮ್ಮ ಅನೇಕ ವ ವೈಯಕ್ತಿಕ ಸಮಸ್ಯೆಗಳು ಪರಿಹಾರವನ್ನು ಪಡೆದುಕೊಳ್ಳಲಿದೆ. ಆರೋಗ್ಯ ಸಂಬಂಧಿ ಕಳವಳಗಳು ದೂರವಾಗುತ್ತದೆ .ಸಣ್ಣ ಸಣ್ಣ ವಿಷಯಗಳಿಗೂ ಉದ್ವಿಘ್ನಗೊಳ್ಳದಿರಿ .ಇದರಿಂದ ಮನೆಯೊಳಗೆ ,ಕುಟುಂಬದೊಳಗೆ ಆತ್ಮೀಯ ಸಂಬಂಧಗಳು ಹಾಳಾಗಬಹುದು. ಸಕಾಲದಲ್ಲಿ ಕಾರ್ಯ ಮುಗಿಸುವತ್ತ ಮುತುವರ್ಜಿ ವಹಿಸಿರಿ. ಸಾಡೇ ಸಾತ್ ಶನಿಯ ಪ್ರಭಾವ ಇರುವುದರಿಂದ ಹಣ ಕಾಸು ವಿಚಾರಗಳನ್ನು ಸಮರ್ಥವಾಗಿ ನಿಭಾಯಿಸಲು ಕೆಲವೊಮ್ಮೆ ಕಷ್ಟವೆನಿಸಬಹುದು. ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವಾಗ ಎಚ್ಚರ ವಹಿಸಿರಿ .
ಕುಂಭ : ಜನ್ಮ ರಾಶಿಯಲ್ಲಿ ರವಿ ಶನಿ ಬುಧ ಇರುವುದರಿಂದ ಕೆಳವಿಉ ವಿಚಾರಗಳಲ್ಲಿ ಆತ್ಮೀಯರೊಂದಿಗೆ ವಿವಾದಗಳು ಉಂಟಾಗಬಹುದು. ಅರ್ಧಕ್ಕೆ ನಿಂತ ಅನೇಕ ಕೆಲಸಗಳನ್ನು ಪೂರ್ಣ ಗೊಳಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ .ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಉತ್ತಮವಾದ ಸಮಯ. ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಇರಲಿ. ಆಸ್ತಿ ಮಾರಾಟದಲ್ಲಿ ಹೆಚ್ಚಿನ ಲಾಭ ಬರಲಿದೆ. ದೂರ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಹೊಸ ಆಲೋಚನೆಗಳು ಕಾರ್ಯ ರೂಪಕ್ಕೆ ಬರುತ್ತವೆ. ಸಂಗಾತಿಯೊಂದಿಗೆ ಮಧುರ ಬಾಂಧವ್ಯ ಇರುತ್ತದೆ.
ಮೀನ : ಆತ್ಮೀಯರೊಂದಿಗಿನ ದೀರ್ಘ ಕಾಲದ ವಿವಾದಗಳು ಬಗೆಹರಿಯಲಿವೆ.ವ್ಯಾಪಾರ-ವ್ಯವಹಾರಗಳಲ್ಲಿ ದ್ವಂದ್ವ ಆಲೋಚನೆಗಳಿದ್ದಾರೆ ತೊಂದರೆಗೆ ಒಳಗಾಗುತ್ತೀರಿ.ಹಲವು ಪ್ರಯತ್ನಗಳಿಂದ ಗುರಿ ತಲುಪಲು ಪ್ರಯತ್ನಿಸಿದರೆ ಯಶಸ್ಸು ಸಿಗುತ್ತದೆ..ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನ ಮಾಡಿರಿ.ಧನಾತ್ಮಕ ಮನಸ್ತಿತಿಯಲ್ಲಿ ಮುಂದುವರಿದರೆ ಅಸಾಧ್ಯವಾದುದನ್ನು ಸಾಧ್ಯವಾಗುವಂತೆ ಮಾಡಬಹುದು. ಕುಜ ಸುಖ ಸ್ಥಾನದಲ್ಲಿ ಇರುವುದರಿಂದ ಆರೋಗ್ಯದ ಕಡೆಗೆ ನಿಮ್ಮ ಗಮನ ಅತೀ ಅಗತ್ಯವಾಗಿದೆ .ಸಾಡೇ ಸಾತ್ ಶನಿಯ ಪ್ರಭಾವ ಇರುವುದರಿಂದ ವ್ಯರ್ಥ ಖರ್ಚು ಬರುವುದನ್ನು ಆದಷ್ಟು ಹಿಡಿತದಲ್ಲಿ ಇಟ್ಟುಕೊಂಡು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆಗಳನ್ನು ತಿಳಿಸಲಾಗುವುದು.






































