ಮಾಡದಂಗಡಿ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಮಾಹಿತಿ
ಮೂಡುಬಿದಿರೆ : ಶಿರ್ತಾಡಿ ಗ್ರಾಮದ ಮಾಡದಂಗಡಿ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಮಾಹಿತಿ ನೀಡಲಾಯಿತು.
ಬೆಂಗಳೂರು ಸೂರ್ಯ ಫೌಂಡೇಶನ್ ನ ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಮಾಹಿತಿಯನ್ನು ನೀಡಿದರು.
ವಿದ್ಯಾರ್ಥಿಗಳು ಒಂದರಿಂದ ಹತ್ತನೇ ತರಗತಿಯ ತನಕ ಎಡೆಬಿಡದೆ ಗ್ರಾಮೀಣ ಪರಿಸರದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಸರ್ಕಾರ ನೀಡುವ ಗ್ರಾಮೀಣ ಕೃಪಾಂಕವನ್ನು ಪಡೆಯಬಹುದು. ಈ ಕೃಪಾಂಕ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಹಾಗೂ ಉದ್ಯೋಗ ಪಡೆಯುವಾಗ ಇತರರಿಗಿಂತ ಹೆಚ್ಚು ಆದ್ಯತೆಗೆ ಸಾಧ್ಯವಾಗಿ ಉಳಿದವರಿಗಿಂತ ಮೊದಲು ಉದ್ಯೋಗ ಪಡೆಯಲು ಸಾಧ್ಯ. ಅದೇ ರೀತಿ ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದರಿಂದ ಹೆಚ್ಚುವರಿ ಕೃಪಾಂಕಗಳಿಸಿ ಇನ್ನೂ ಹೆಚ್ಚಿನ ಆದ್ಯತೆ ಉದ್ಯೋಗದಲ್ಲಿ ದೊರಕಲಿದೆ ಎಂಬ ಮಹತ್ವದ ವಿಚಾರಗಳನ್ನು ಹೇಳಿದರು.
ಶಿಕ್ಷಕಿಯರಾದ ವಾಣಿಶ್ರೀ ಸ್ವಾಗತಿಸಿದರು. ರಶ್ಮಿ ಎಂ.ಎಸ್. ವಂದಿಸಿದರು.
ಅಳಿಯೂರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಹಕ ಶಿಕ್ಷಣ ಮಾಹಿತಿ

ಮೂಡುಬಿದಿರೆ : ಅಳಿಯೂರು ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಹಕರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳು, ಗ್ರಾಹಕ ಹಿತ ರಕ್ಷಣಾ ಕಾಯ್ದೆಯ ಮಾಹಿತಿ ನೀಡಲಾಯಿತು.
ಬೆಂಗಳೂರು ಕ್ರಿಯೇಟ್ ಗ್ರಾಹಕ ಸಂಸ್ಥೆಯ ಸದಸ್ಯ, ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ , ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಮಾಹಿತಿಯನ್ನು ನೀಡಿದರು.
ದೇಶದಲ್ಲಿ 1986 ರಲ್ಲಿ ಕಾಯ್ದೆ ಜಾರಿಗೆ ಬಂದರೂ ಹೆಚ್ಚು ಜನರಿಗೆ ಅದರ ಉದ್ದೇಶ, ಉಪಯೋಗ ತಿಳಿಯದು. ಪಾಠ ಪುಸ್ತಕದಲ್ಲಿ ವಿವರವಾಗಿ ತಿಳಿಸಿದರು ಅದಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ. ವಿದ್ಯಾರ್ಥಿಗಳು ಗ್ರಾಹಕ ಹಕ್ಕು, ಕರ್ತವ್ಯ, ಮಾಹಿತಿ ಹಕ್ಕು ಕಾಯ್ದೆಯ ಮಾಹಿತಿಯನ್ನು ಹೊಂದಲು ಕೇಳಿಕೊಂಡರು. ಸೇವೆ ಹಾಗೂ ವಸ್ತುಗಳ ಗುಣಮಟ್ಟ ಕೊರತೆ ನೀಗಿಸಲು, ಪರಿಹಾರ ಪಡೆಯಲು ಇರುವ ವಿಧಾನ, ಜಿಲ್ಲಾ, ರಾಜ್ಯ, ಕೇಂದ್ರ ಪರಿಹಾರ ವೇದಿಕೆಯ ಮಾಹಿತಿಯನ್ನು ನೀಡಿದರು.
ಶಿಕ್ಷಕ ಸುಬ್ರಹ್ಮಣ್ಯ ವಿ. ಸ್ವಾಗತಿಸಿದರು. ಶಿಕ್ಷಕಿ ಪದ್ಮಿನಿ ವಂದಿಸಿದರು.





















