ಹೊಂಡ-ಗುಂಡಿಗಳಿಗೆ‌ ಮುಕ್ತಿ

Picture of RB NEWS

RB NEWS

Bureau Report

ಮೂಡುಬಿದಿರೆ: ಮೂಡುಬಿದಿರೆಯ ಲಾವಂತಬೆಟ್ಟು ರಸ್ತೆಯ ದ್ವಿಚಕ್ರ ವಾಹನಗಳು ಮಾತ್ರ ಓಡಾಡುವ ಓಣಿಯ ರಸ್ತೆಗೆ ಪುರಸಭಾ ನಾಮನಿರ್ದೇಶಿತ ಸದಸ್ಯ ಕ್ಲಾರಿಯೋ ಸುಸ್ಮಿತ್ ಡಿಸೋಜ ಮತ್ತು ಅವರ ಕಚೇರಿ ಸಿಬ್ಬಂದಿ ಸುಮಿತ್ ಅವರು ಸಿಮೆಂಟ್ ಬ್ಲಾಕ್ ಹಾಗೂ ಮಣ್ಣು ಹಾಕಿ ದುರಸ್ತಿಗೊಳಿಸುವ ಮೂಲಕ ಸಾಮಾಜಿಕ ಸೇವೆ ಮಾಡಿದ್ದಾರೆ.

ಅಲ್ಲೊಂದು ಚಿಕ್ಕದಾದ ದ್ವಿಚಕ್ರವಾಹನಗಳು ಮಾತ್ರ ಹೋಗುವಷ್ಟು ಅಗಲದ ಓಣಿ ರಸ್ತೆ ಇದೆ.ಆ ರಸ್ತೆ ನಡುವೆ ಗುಂಡಿಬಿದ್ದು ದ್ವಿಚಕ್ರ ವಾಹನಗಳ ಓಡಾಟಕ್ಕೆ ಅಡಚಣೆಯಾಗಿತ್ತು. ಅಲ್ಲದೆ ಇತ್ತೀಚೆಗೆ ಮಹಳೆಯೋರ್ವರು ಮತ್ತು ವಿದ್ಯಾರ್ಥಿಯೊಬ್ಬ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರು.

ದಿನಂಪ್ರತಿ ಈ ರಸ್ತೆಯಲ್ಲಿ ಹಲವು ದ್ವಿಚಕ್ರವಾಹನಗಳು ಓಡಾಡಿದರೂ ತಮ್ಮ ಬೈಕ್ ನ ಎಕ್ಸಲೇಟರ್ ಹಾಗೂ ಬ್ರೇಕ್ ನ ಮೇಲೆ ಮಾತ್ರ ಗಮನಕೊಟ್ಟರೇ ವಿನಹ ರಿಪೇರಿ ಮಾಡಬಹುದೆಂದು ಲೆಕ್ಕಹಾಕುತ್ತಾರೆ ಹೊರತು( ‘ನಂಕ್ ದಾಯೆ,ಬೋಡಾಂಡ ಮಲ್ಪುವೆರ್’) ದುರಸ್ಥಿ ಕಾರ್ಯಕ್ಕೆ ಮುಂದಾಗುತ್ತಿಲ್ಲ.

ಹೊಂಡ ಮುಚ್ಚಿರುವುದು ಅಷ್ಟೊಂದು ದೊಡ್ಡ ಘನ ಕಾರ್ಯವೇ ಎಂಬ ಪ್ರಶ್ನೆಗಳು ಸಹಜವಾಗಿ ಕಾಡುತ್ತಿದ್ದರೂ, ಅದೇ ಹೊಂಡದಿಂದ ಅದೆಷ್ಟೋ ಮಂದಿಯ ಪ್ರಾಣಪಾಯ ತಪ್ಪಿಸಿದ್ದಾರೆ ಎಂಬುವುದೇ ಗಮನಾರ್ಹವಾಗಿದೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top