ಆನೆಕೆರೆ ಚತುರ್ಮುಖ ಕೆರೆಬಸದಿ ಜೀಣೋದ್ಧಾರದ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಸಾಮೂಹಿಕ ಭಕ್ತಾಮರ ಆರಾಧನೆ

Picture of RB NEWS

RB NEWS

Bureau Report

ಕಾರ್ಕಳ: ಆನೆಕೆರೆ ಚತುರ್ಮುಖ ಕೆರೆಬಸದಿ ಜೀಣೋದ್ಧಾರದ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಸಾಮೂಹಿಕ ಭಕ್ತಾಮರ ಆರಾಧನೆಯು ಬುಧವಾರದಂದು ಜರುಗಿತು.
ಕಾರ್ಕಳ ದಾನಶಾಲೆ ಜೈನಮಠದ ಪರಮ ಪೂಜ್ಯ ಸ್ವಸ್ತಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು, ನರಸಿಂಹರಾಜಪುರ ಶ್ರೀ ಸಿಂಹನಗದ್ದೆ ಬಸ್ತಿಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷಿö್ಮÃಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.


ಬೆಳಿಗ್ಗೆ ವಿಮಾನ ಶುದ್ಧಿ, ನಾಲ್ಕು ದಿಕ್ಕಿನಲ್ಲಿ 24 ಕಳಸ ಮಹಾಭಿಷೇಕ ಮತ್ತು ಮೇಗಿನನೆಲೆ ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ , ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ಶ್ರೀ ನಾಗಸನ್ನಿಧಿಯಲ್ಲಿ ಕ್ಷೀರಾಭಿಷೇಕ ಮತ್ತು ದೈವ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಮಹಾಂಗಳಾರತಿ ಮತ್ತು ಶ್ರೀ ಪ್ರಸಾದ ವಿತರಣೆ ಜರುಗಿತು.
ಧಾರ್ಮೀಕ ವಿಧಿ ವಿಧಾನಗಳನ್ನು ಕಾರ್ಕಳದ ವರ್ಧಮಾನ ಇಂದ್ರರು ಹಾಗೂ ಸಹ ಪುರೋಹಿತರು ನೆರವೇರಿಸಿದರು. ಸ್ಥಳ ಪುರೋಹಿತರಾಗಿ ಸುನೀಲ್ ಇಂದ್ರ ಪಾಲ್ಗೊಂಡರು.

ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಮಧ್ಯಾಹ್ನ 2.30ಕ್ಕೆ ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಕಲಿಕುಂಡ ಯಂತ್ರಾರಧನೆ, ರಾಥ್ರಿ 8.00 ಗಂಟಗೆ ಶ್ರೀ ಸರ್ವಾಹ್ನ ಯಕ್ಷನ ಶ್ರೀ ವಿಹಾರ(ಉತ್ಸವ) ಮಹಾಮಂಗಳಾರತಿ ಮತ್ತು ಜಿನಪ್ರಸಾದ, ರಾತ್ರಿ 9.00 ಗಂಟಗೆಯಿAದ ಕಲ್ಕುಡ ದೈವದ ಗಗ್ಗರ ಸೇವೆ ಜರಗಲಿರುವುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top