ಹಿಂದು ಯುವಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮುಸ್ಲಿಂ ಯುವತಿ!

Picture of RB NEWS

RB NEWS

Bureau Report


ನೆಲ್ಲಿಕಾರಿನ ಸುಹಾನ (19) ನಾಪತ್ತೆಯಾಗಿದ್ದ ಯುವತಿ. ಈ ಕುರಿತು ಮೂಡಬದಿರೆ ಪೊಲೀಸ್ ಠಾಣೆಗೆ ಯುವತಿಯ ಮನೆ ಮಂದಿ ದೂರು ನೀಡಿದ್ದರು.
ನಾಪತ್ತೆಯಾಗಿದ್ದ ಸುಹಾನ ಹಾಗೂ ಧರ್ಮಸ್ಥಳ ಸಮೀಪದ ಪಟ್ರಮಿಯ ಹರೀಶ್ ಗೌಡ (24) ನಡುವೆ ಕಳೆದ ಒಂದು ವರ್ಷದಿಂದ ಫೇಸ್‌ಬುಕ್ ಮೂಲಕ ಪರಿಚಯವಾಗಿ ಮುಂದೆ ಅವರಿಬ್ಬರ ನಡುವೆ ಪ್ರೇಮಾಂಕುರ ಬೆಳಯಲು ಕಾರಣವಾಗಿತ್ತು.
ಇಬ್ಬರು ವಿವಾಹವಾಗಲು ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನಲ್ಲೆಯಲ್ಲಿ ಸುಹಾನ ಮನೆಮಂದಿಗೂ ತಿಳಿಸದೇ ಯುವಕನ ಸೂಚನೆಯಂತೆ ನೇರವಾಗಿ ಬೆಳ್ತಂಗಡಿ ಕಡೆಗೆ ಪ್ರಯಾಣ ಬೆಳಸಿದ್ದಳು.
ಬೆಳ್ತಂಗಡಿ ಕುತ್ರೊಟ್ಟು ಶ್ರೀ ಕ್ಷೇತ್ರದಲ್ಲಿ ಸುಹಾನ ಹಾಗೂ ಹರೀಶ್ ಗೌಡ ಹಾರ ಬದಲಾಯಿಸಿಕೊಂಡಿದ್ದಾರೆ. ಆ ಕ್ಷಣದಲ್ಲಿ ಸುಹಾನಳಿಗೆ ಹರೀಶ್ ಗೌಡ ಮಾಂಗಲ್ಯಧಾರಣೆ ಮಾಡಿದ್ದಾನೆ.
ಈ ಎಲ್ಲಾ ಬೆಳವಣಿಗೆಯ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾದ ಸುಹಾನ ಮತ್ತು ಹರೀಶ್ ಗೌಡ ತಾವು ಪರಿಸ್ಪರ ಸಮ್ಮತಿಯ ಮೇರೆಗೆ ವಿವಾಹವಾಗಿರುವುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ.
ಅರ್ಜಿ ಸಲ್ಲಿಸಿದ ನವದಂಪತಿ: ಮುಸ್ಲಿಂ ಯುವತಿ ಸುಹಾನ ತನ್ನ ಇಚ್ಚೆಯಂತೆ ಹಿಂದು ಸಂಪ್ರದಾಯ ಪ್ರಕಾರ ಹಿಂದು ಯುವಕನೊಂದಿಗೆ ವಿವಾಹವಾಗಿದ್ದಳು.
ನವದಂಪತಿ ನೇರವಾಗಿ ಬೆಳ್ತಂಗಡಿ ವಿವಾಹ ನೊಂದಾವಣಾ ಕಚೇರಿಗೆ ತೆರೆಳಿ, ಹಿಂದು ವಿವಾಹ ಕಾಯಿದೆಯ ಪ್ರಕಾರ ವಿವಾಹ ನೊಂದಾಣೆಗೆ ಅರ್ಜಿ ಸಲ್ಲಿಸಿದ್ದಾರೆ.

ಮನೆಮಂದಿಗೆ ಮನವರಿಕೆ

ಸುಹಾನ ನಾಪತ್ತೆ ಪ್ರಕರಣ ಕುರಿತು ಮೂಡುಬಿದಿರೆ ಪೊಲೀಸರು ತನಿಖೆ ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ಸುಹಾನ ಹಾಗೂ ಹರೀಶ್ ಗೌಡ ವಿವಾಹವಾಗಿ ಧರ್ಮಸ್ಥಳ ಠಾಣೆಗೆ ಹಾಜರಾಗಿದ್ದರು. ಈ ವಿಚಾರವು ಮೂಡಬಿದಿರೆ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸುಹಾನಳ ಮನೆಮಂದಿಯನ್ನು ಠಾಣೆಗೆ ಕರೆಯಿಸಿ ನಡೆದಿರುವ ಬೆಳವಣಿಗೆ ಹಾಗೂ ವಿವಾಹವಾದ ಫೋಟೋಗಳನ್ನು ತೋರ್ಪಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top