





ಕ್ರಿಯೇಟಿವ್ ಪುಸ್ತಕ ಮನೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖ ದಿಗ್ಗಜರು
ಜ. ೩ಕ್ಕೆ ಕ್ರಿಯೇಟಿವ್ ಪುಸ್ತಕ ಮನೆಯ ‘ಪರಸ್ಪರ’ದಲ್ಲಿ ಡಾ. ನಾ ಸೋಮೇಶ್ವರ ಮತ್ತು ಕನ್ನಡದ ಪ್ರೇಮಕವಿ ಬಿ. ಆರ್. ಲಕ್ಷ್ಮಣರಾವ್
ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖ ದಿಗ್ಗಜರು ಜೋಡುರಸ್ತೆಯಲ್ಲಿರುವ ಆಗಮಿಸುತ್ತಿದ್ದಾರೆ.
ಚಂದನವಾಹಿನಿಯ “ಥಟ್ಅಂತ ಹೇಳಿ” ಕಾರ್ಯಕ್ರಮದ ನಿರೂಪಕ, ನಡೆದಾಡುವ ಗ್ರಂಥಾಲಯ ಎಂಬ ಖ್ಯಾತಿಯನ್ನು ಪಡೆದ ಡಾ. ನಾ ಸೋಮೇಶ್ವರ ಅವರು ಸಂಜೆ ೪.೦೦ ಗಂಟೆಗೆ ಮೂಡುಬಿದಿರೆ ಕ್ರಿಯೇಟಿವ್ ಪುಸ್ತಕಮನೆಗೆ ಹಾಗೂ ಸಂಜೆ ೫.೦೦ ಗಂಟೆಗೆ ಕಾರ್ಕಳದ ಜೋಡುರಸ್ತೆಯಕ್ರಿಯೇಟಿವ್ ಪುಸ್ತಕಮನೆಗೆ ಮತ್ತುಕನ್ನಡದ ಪ್ರೇಮಕವಿ ಹಾಗು ತುಂಟ ಕವಿ ಎಂದೇ ಚಿರಪರಿಚಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಂಜೆ ೫.೩೦ಕ್ಕೆ ಕಾರ್ಕಳದ ಜೋಡುರಸ್ತೆಯ ಪುಸ್ತಕಮನೆಗೆ ಆಗಮಿಸುತ್ತಿದ್ದಾರೆ.
ಈ ಇಬ್ಬರು ಖ್ಯಾತ ಲೇಖಕರ ಭೇಟಿ ಸಾಹಿತ್ಯಾಸಕ್ತರಿಗೆ ಒಂದು ಸುವರ್ಣಾವಕಾಶ. ಸಾಹಿತ್ಯಾಸಕ್ತರು ಈ ಅಪರೂಪದ ಸಂದರ್ಭದಲ್ಲಿ ಪಾಲ್ಗೊಂಡು, ಈ ಸಾಹಿತ್ಯ ದಿಗ್ಗಜರ ಭೇಟಿಯಿಂದ ಪ್ರೇರಣೆಯನ್ನು ಪಡೆಯುವಂತೆ ಆಹ್ವಾನಿಸಲಾಗಿದೆ.





















