ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಮುಂದಾಳುಗಳು
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮಂಗಳೂರು- ಕಾರ್ಕಳ ನಡುವೆ ಕೆಎಸ್ ಆರ್ ಟಿ ಸಿ ಬಸ್ಸು ಸಂಚಾರವಾಗಿ ಶನಿವಾರದಂದು ಮೂರನೇ ದಿನಕ್ಕೆ ಸಂದಾಯವಾಗುತ್ತದೆ. ಇದೇ ದಿನದಂದು ಬಿಜೆಪಿ-ಕಾಂಗ್ರೆಸ್ ಮುಖಂಡರುಗಳು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದ ರಾಜಕೀಯ ಬೆಳವಣಿಗೆ ಮೂಡುಬಿದಿರೆಯಲ್ಲಿ ನಡೆದಿದೆ.

ಬಿಜೆಪಿ ಪಕ್ಷದ ಮುಂದಾಳುಗಳು ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಮೂಡುಬಿದಿರೆಯ ವಿದ್ಯಾ ಗಿರಿಯ ಪ್ರದೇಶದಲ್ಲಿ ಮಂಗಳೂರಿನಿಂದ ಆಗಮಿಸಿದ ರಾಜ್ಯ ರಸ್ತೆ ಸಾರಿಗೆಯ ಬಸ್ಸಿಗೆ ಬಹಳ ಸಂಭ್ರಮದಿಂದ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮೂಡುಬಿದಿರೆಯ ಜನತೆ ಹಾಗೂ ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಪ್ರಾರಂಭವಾಗಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು. ಮೂಡುಬಿದಿರೆ ಪುರಸಭಾ ಅಧ್ಯಕ್ಷ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಹಲವಾರು ಪುರಸಭಾ ಸದಸ್ಯರುಗಳು, ಕಾರ್ಯಕರ್ತರು ಹಾಜರಿದ್ದರು.
ಮೂಡುಬಿದಿರೆ ಪೇಟೆಗೆ ಅದೇ ಬಸ್ಸು ಆಗಮಿಸಿದಾಗ ಕಾಂಗ್ರೆಸ್ ನ ಮುಂದಾಳುಗಳಾದ ಗ್ಯಾರಂಟಿ ಯೋಜನೆಯ ಅರುಣ್ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್, ಮೂಡ ಅಧ್ಯಕ್ಷ ಹರ್ಷವರ್ಧನ್ ಪಾಡಿವಾಳ, ನಗರ ಅಧ್ಯಕ್ಷ ಪುರಂದರ ದೇವಾಡಿಗ, ಮಹಿಳಾ ವಿಭಾಗದ ಸುಪ್ರಿಯಾ ಶೆಟ್ಟಿ, ಪದ್ಮ ಪ್ರಸಾದ್ ಹಾಗೂ ಇತರ ಮುಂದಾಳುಗಳು ಬಸ್ಸನ್ನು ಸ್ವಾಗತಿಸಿ ಸಂಭ್ರಮ ಪಟ್ಟರು.

ಇದು ಕಾಂಗ್ರೆಸ್ ಸರಕಾರದ ಗ್ಯಾರೇಟಿ ಯೋಜನೆಗಳಲ್ಲಿ ಒಂದಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಾಧನೆಯಾಗಿದೆ ಶ್ಲಾಘಿಸಿದರು.
ಇವತ್ತೇಕೆ ಈ ಕಾರ್ಯಕ್ರಮ?
ಡಿ.12ರಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಅಧಿವೇಶನದ ಪ್ರಯುಕ್ತ ಬೆಳಗಾವಿಯಲ್ಲಿ ಇದ್ದರು. ಅದೇ ದಿನದಂದು ಮಂಗಳೂರಿನಲ್ಲಿ ಬಸ್ಸು ಸಂಚಾರಕ್ಕೆ ಚಾಲನೆ ದಿಕ್ಕಿತ್ತು.
ಡಿ.13ರಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ವಕ್ಷೇತ್ರಕ್ಕೆ ಮರಳಿದ್ದು, ವಿದ್ಯಾಗಿರಿಯಲ್ಲಿ ಬಸ್ಸಿಗೆ ಹಸಿರುನಿಶಾನೆ ತೋರಿಸುವ ಕಾರ್ಯಕ್ರಮ ಆಯೋಜಿಸುತ್ತಿದ್ದಂತೆ, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ರಾಜ್ಯ ಸರಕಾರದ ಗ್ಯಾರೇಟಿಗಳ ಅನುಷ್ಠಾನದ ಮೇರೆಗೆ ಮಂಗಳೂರು- ಕಾರ್ಕಳಕ್ಕೆ ಕೆ ಎಸ್ ಆರ್ ಟಿ ಸಿ ಬಸ್ಸು ಓಡಾಟ ನಡೆಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ





















