ಉಡುಪಿ ಜಿಲ್ಲಾ ಮಲೆಕುಡಿಯ ಸಂಘ: ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಕರ್ಣ ನೂರಾಳ್ ಬೆಟ್ಟು ಆಯ್ಕೆ
ಉಡುಪಿ : ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇದರ ಆಶ್ರಯದಲ್ಲಿ ಸಮುದಾಯ ಬಾಂಧವರ ಅಂತರರಾಜ್ಯ ಮಟ್ಟದ ಕ್ರೀಡಾ ವೈಭವ-2024 ಡಿಸೆಂಬರ್ 15 ಮತ್ತು 25 ರಂದು ಕಾರ್ಕಳ ಮಾಳ ಕೂಡಬೆಟ್ಟು ಸ.ಹಿ.ಪ್ರಾ.ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದರ ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಕರ್ಣ ನೂರಾಳ್ ಬೆಟ್ಟು, ಉಪಾಧ್ಯಕ್ಷರಾಗಿ ಸುಧಾಕರ ಎಸ್.ಕಬ್ಬಿನಾಲೆ, ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯ ಕೆರ್ವಾಶೆ, ಸಹ ಕಾರ್ಯದರ್ಶಿಯಾಗಿ ಮಲ್ಲಿಕಾ ಕಬ್ಬಿನಾಲೆ, ಕೋಶಾಧಿಕಾರಿಯಾಗಿ ಪ್ರಶಾಂತ್ ನೂರಾಳ್ ಬೆಟ್ಟು ,ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಗೌಡ ಕೆರ್ವಾಶೆ, ಸಹ ಸಂಘಟನಾ ಕಾರ್ಯದರ್ಶಿಯಾಗಿ ರಾಜಶೇಖರ ಈದು, ಸಂಚಾಲಕರಾಗಿ ಸಂತೋಷ ಈದು, ಸುಕೇಶ್ ನೂರಾಳ್ ಬೆಟ್ಟು, ಅರುಣ್ ರೆಂಜಾಳ, ಪ್ರವೀಣ್ ನಲ್ಲೂರು, ಗುರುಪ್ರಸಾದ್ ಮಾಳ, ಮಧುಸೂದನ್ ಅಂಡಾರು, ಚಂದ್ರ ಕೆರ್ವಾಶೆ, ರವಿ ಪುಂಡಾಲು, ಪ್ರಸನ್ನ ಕಬ್ಬಿನಾಲೆ, ಗುರುಪ್ರಸಾದ್ ಮುದ್ರಾಡಿ, ರಾಮ ಶಿರ್ಲಾಲು, ಅಕ್ಷಯ್ ನಾಡ್ಪಾಲು, ಪುಷ್ಪಾ ತೆಳ್ಳಾರು, ಪ್ರವೀಣ್ ಹೆರ್ಮುಂಡೆ, ವಿಷ್ಣುಮೂರ್ತಿ ಕೆರ್ವಾಶೆ, ರಾಜೇಶ್ ಪೇರಡ್ಕ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.





















