ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ : ಬಂಟ್ವಾಳ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

Picture of RB NEWS

RB NEWS

Bureau Report

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ 2024-29 ನೇ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಬಿಸಿ ರೋಡ್ .ಸಂಘದ ಸಭಾಭವನದಲ್ಲಿ ನೆರವೇರಿತು.

ಅಧ್ಯಕ್ಷ ರಾಗಿ ಶಿವಪ್ರಸಾದ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಯಾಗಿ ಸಂತೋಷ್ ಕುಮಾರ್,ಖಜಾಂಚಿಯಾಗಿ ಬಸಯ್ಯ ಆಲಿಮಟ್ಟಿ, ರಾಜ್ಯ ಪರಿಷತ್ ಸದಸ್ಯರಾಗಿ ಜನಾರ್ಧನ್ ಜೆ ಆಯ್ಕೆಯಾಗಿರುತ್ತಾರೆ.

ಗೌರವಾಧ್ಯಕ್ಷರಾಗಿ ಶಮಂತ್ ಕುಮಾರ್, ಹಿರಿಯ ಉಪಾಧ್ಯಕ್ಷರಾಗಿ ನಂದನ್ ಶೆಣೈ, ಯಮನಪ್ಪ, ಉಪಾಧ್ಯಕ್ಷ ರಾಗಿ ಲಕ್ಷ್ಣಣ್ ಹೆಚ್ ಕೆ, ರಮಾನಂದ, ಸೀತಾರಾಮ‌ ಪೂಜಾರಿ ಆಯ್ಕೆಯಾಗಿರುತ್ತಾರೆ.

ತಾಲೂಕಿನ ವಿವಿಧ ಇಲಾಖೆಯಿಂದ ಒಟ್ಟು 28 ಮಂದಿಯನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯರು,ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು ರಮೇಶ್ ನಾಯಕ್ ರಾಯಿ ಇವರು ಸಹಕರಿಸಿದರು.

ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಎಲ್ಲ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷ ತೆಯನ್ನು ನಿಕಟಪೂರ್ವ ಅಧ್ಯಕ್ಷರಾದ ಉಮಾನಾಥ ರೈ ಮೇರಾವು ವಹಿಸಿದ್ದರು.

ವೇದಿಕೆಯಲ್ಲಿ ಚುನಾವಣಾಧಿಕಾರಿ ರಮೇಶ್ ನಾಯಕ್ ರಾಯಿ, ನೂತನ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್,ಖಜಾಂಚಿ ಬಸಯ್ಯ ಆಲಿಮಟ್ಟಿ,ರಾಜ್ಯ ಪರಿಷತ್ ಸದಸ್ಯ ಜೆ ಜನಾರ್ಧನ್, ಗೌರವ ಸಲಹೆಗಾರ ಡಾ ಆಶೋಕ್ ಕುಮಾರ್ ರೈ,ಅಂಬಾಪ್ರಸಾದ್,ನವೀನ್ ಕುಮಾರ್ ಬೆಂಜನಪದವು, ಜೋಯೆಲ್ ಲೋಬೋ,ಗುರುರಾಜ ,ಇಂದುಶೇಖರ್,ರಾಜೇಂದ್ರ ರೈ,ಪದ್ಮರಾಜ್ ಶಿಂಧೆ,ಜನಾರ್ಧನ್ ಕೊಯಿಲ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿದರು. ಖಜಾಂಚಿ ಬಸಯ್ಯ ಆಲಿಮಟ್ಟಿ ವಂದಿಸಿದರು. ಜಯರಾಮ್ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top