ಏಕತೆ ಮತ್ತು ಫಿಟ್ನೆಸ್ ನ ಕಲ್ಪನೆ – ಸಂಜೀವ ಬಳ್ಕೂರ್

Picture of RB NEWS

RB NEWS

Bureau Report

ನಿವ್ಯ ಸ್. ಮಂಗಳೂರು ಮ್ಯಾರಥಾನ್ ನವೆಂಬರ್ 10 ರಂದು ‘ಏಕತೆ ಮತ್ತು ಫಿಟ್ನೆಸ್ ‘ ನ ಕಲ್ಪನೆಯೊಂದಿಗೆ ವಿಜೃಂಭಣೆಯಿಂದ ಆರಂಭವಾಗಿದ್ದು, ಭಾಗವಹಿಸಿದ 5000 ಜನರಲ್ಲಿ ನಾನು ಒಬ್ಬ ಓಟಗಾರನಾಗಿ ಪಾಲ್ಗೊಂಡಿದ್ದು ಹೆಮ್ಮೆಯ ವಿಷಯ. ಎಲ್ಲಾ ವಯಸ್ಸಿನ ವರ್ಗದವರಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದ ಈ ಮ್ಯಾರಥಾನ್ ನಲ್ಲಿ ನಾನು 42 ಕಿ.ಮೀ. ಪೂರ್ಣ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದು, 42 ಕಿ.ಮೀ. ಪೂರ್ಣಗೊಳಿಸಿದ ಎಲ್ಲಾ ವಯೋ ಮಿತಿಯ 82 ಜನ ಕ್ರೀಡಾಪಟುಗಳಲ್ಲಿ 51 ನೇ ಸ್ಥಾನವನ್ನು ಪಡೆದಿದ್ದು ನನಗೆ ತೃಪ್ತಿಕರವಾದ ಸಾಧನೆಯಾಗಿದೆ.
ಮಂಗಳೂರಿನ ಮಂಗಳಾ ಸ್ಟೇಡಿಯಂನಿಂದ ಕಶಾರ್ಪ್ ಫಿಟ್ನೆಸ್ ನ ನೇತೃತ್ವದಲ್ಲಿ ವಾರ್ಮ್ ಅಪ್ ತರಬೇತಿಯೊಂದಿಗೆ ಈ ಮ್ಯಾರಥಾನ್ ಓಟವನ್ನು ಪ್ರಾರಂಭಿಸಿ, ಮಂಗಳೂರಿನ ನಗರ ಮತ್ತು ಕರಾವಳಿಯ ರಮಣೀಯ ಕಡಲ ತೀರದ ಮಾರ್ಗಗಳಲ್ಲಿ ಸರಾಸರಿ 7 ನಿಮಿಷ/ ಕಿ.ಮೀ. ವೇಗದಲ್ಲಿ ಓಡಿ ನಾನು 5 ಗಂಟೆ 12 ನಿಮಿಷಗಳಲ್ಲಿ 42 ಕಿ.ಮೀ. ಗಳನ್ನು ಕ್ರಮಿಸಿ ಅಂತಿಮ ಗೆರೆಯನ್ನು ದಾಟಿರುತ್ತೇನೆ. ಅಗ್ರ ಓಟಗಾರರ ಜೊತೆ ಓಡಿ ಈ ಸವಾಲನ್ನು ಪೂರ್ಣಗೊಸಿದ್ದು ನನ್ನನ್ನು ರೋಮಾಂಚನಗೊಳಿಸಿತ್ತು.
ಉಡುಪಿ ರನ್ನರ್ಸ್ ಕ್ಲಬ್ ನ ಬೆಂಬಲವಿಲ್ಲದೆ ನನ್ನ ಈ ಓಟದ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ನನ್ನ ತರಬೇತುದಾರರಾದ ಉಮೇಶ್ ಮಟ್ಟು, ಮತ್ತು ನನ್ನ ಪ್ರತಿ ಹಂತದಲ್ಲೂ ನನಗೆ ಸ್ಫೂರ್ತಿ ನೀಡಿದ ನನ್ನ ಒಡನಾಡಿ ಡಾ.ತಿಲಕ್ ಚಂದ್ರ ಅವರಿಗೆ ಧನ್ಯವಾದಗಳು.
ಕನಾ೯ಟಕದ ಪರಂಪರೆಯನ್ನು ಸಂಕೇತಿಸುವ ಸ್ಮರಣೀಯ ಕಂಬಳ ಕಲಾ ಪದಕವನ್ನು ಸ್ವೀಕರಿಸಿದ್ದು ನನ್ನ ಹೆಮ್ಮೆಯ ಕ್ಷಣವಾಗಿತ್ತು. ವಯಸ್ಸು ಕೇವಲ ಒಂದು ಸಂಖ್ಯೆ, ಉತ್ಸಾಹ ಮತ್ತು ಪರಿಶ್ರಮಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲವೆಂಬುದನ್ನು ಈ ಮ್ಯಾರಥಾನ್ ನಿಂದ ನಾನು ಸಾಬೀತು ಪಡಿಸಿದೆ. ಇದು ಇನ್ನೊಂದು ಸಾಧನೆಯ ಆರಂಭ ಮತ್ತು ಪ್ರೇರಣೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top