



ವಾರ ಭವಿಷ್ಯ ದಿನಾಂಕ 17.11.2024 ರಿಂದ ದಿನಾಂಕ 23.11.2024 ರ ವರೆಗೆ
ವಿಶೇಷ ದಿನಗಳು : 18.11.2024….ಸಂಕಷ್ಟ ಹರ ಚತುರ್ಥಿ ;ಕನಕದಾಸ ಜಯಂತಿ
ಮೇಷ : ದೈವಾನುಕೂಲತೆ ಇರುವುದರಿಂದ ತುಂಬಾ ದಿನಗಳಿಂದ ಇದ್ದ ಸಮಸ್ಯೆ ಪರಿಹಾರವಾಗಲಿದೆ. ರವಿ
ಕುಜರು ತಿಳಿಸುವಂತೆ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಿರಿ. ಅಪರಿಚಿತರೊಡನೆ ವಾದ-
ವಿವಾದ ಬೇಡ. ಸೂಕ್ತವಾಗಿ ಖರ್ಚು ವೆಚ್ಚ ನಿಭಾಯಿಸುವಿರಿ. ಸಂಗಾತಿಯೊಂದಿಗೆ ತೀರ್ಥ ಕ್ಷೇತ್ರ ದರ್ಶನ
ಮಾಡುವಿರಿ. ಕಾಗದ ಪತ್ರಗಳಿಗೆ ಸಹಿ ಹಾಕುವ ಮೊದಲು ಯೋಚಿಸಿರಿ. ಕುಜ ಮತ್ತು ರವಿ ಕೆಲವೊಂದು
ಅನಾರೋಗ್ಯ ಸಮಸ್ಯೆಗಳಿಗೆ ಕಾರಣರಾಗುತ್ತಾರೆ.”ಓಂ ಶ್ರೀಂ ನಾಮ: ಶಿವಾಯ “ ಪ್ರತಿನಿತ್ಯ 108 ಬಾರಿ
ಹೇಳುತ್ತಾ ಬನ್ನಿರಿ . ವಿದೇಶಕ್ಕೆ ಹೋಗುವ ಅವಕಾಶವಿದೆ. ಮಕ್ಕಳೊಂದಿಗೆ ಪ್ರೀತಿಯಿಂದ ವರ್ತಿಸಿರಿ.
ವೃಷಭ :ಕೆಲವೊಂದು ಅಶುಭ ಸುದ್ಧಿಗಳಿಂದ ಮಾನಸಿಕ ಚಿಂತೆ ಉಂಟಾಗಲಿದೆ. ಇಂದು ನಿಮ್ಮ ಕೆಲಸದ ಮೇಲೆ
ಪ್ರಭಾವ ಭೀರಲಿದೆ. ನಿಮ್ಮ ಸ್ವಯಂ ಕೃತ ಅಪರಾಧಗಳಿಂದ ಕೆಲಸಕ್ಕೆ ಅಡಚಣೆ ಬಂದರೂ ಜನರು
ನಿಮ್ಮಕೆಲಸವನ್ನು ಗುರುತಿಸಲಿದ್ದಾರೆ. ನಿಮ್ಮ ದಾಂಪತ್ಯಕಲಹಕ್ಕೆ ಅಂತ್ಯ ಬರಲಿದೆ. ಮನೆಗಾಗಿ ವಿಶೇಷ
ವಸ್ತುಗಳನ್ನುಖರೀದಿ ಮಾಡಲಿದ್ದೀರಿ. ಮಹಿಳೆಯರಲ್ಲಿವ್ಯವಹಾರ ಮಾಡುವಾಗ ಎಚ್ಚರವಿರಲಿ. ಶುಕ್ರ
ಅಷ್ಟಮದಲ್ಲಿ ಇದ್ದಾನೆ. ನಿಮ್ಮ ಕರ್ತವ್ಯ ಜವಾಬ್ದಾರಿಗಳ ಬಗ್ಗೆ ಎಚ್ಚರದಿಂದಿರಿ. ಗಣಪತಿ ದೇವರ
ಪ್ರಾರ್ಥನೆ ಅಗತ್ಯವಿದೆ. ಅಕ್ಕ ತಂಗಿಯರ ನಡುವೆ ಭೂಮಿಯ ವಿಷಯದಲ್ಲಿ ವಾದ-ವಿವಾದ ಬರಲಿದೆ.
ಉದ್ಯೋಗ ಪ್ರಾಪ್ತಿ ಯೋಗವಿದೆ. ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಇರಲಿ “ಓಂ ಶಂ ಶನೈಶ್ಚರಾಯ
ನಮ:” ಪ್ರತಿನಿತ್ಯ ಹೇಳುತ್ತಾ ಬನ್ನಿರಿ.
ಮಿಥುನ : ಹಿರಿಯರ ಮತ್ತು ಹೆತ್ತವರ ಆಶೀರ್ವಾದ ದೊರೆಯಲಿದೆ. ಜೀವನದ ಮೂಲಭೂತ
ಪ್ರಶ್ನೆಗಳನ್ನುಮಾನಸಿಕವಾಗಿ ಯೋಚಿಸಲಿದ್ದೀರಿ.ಸಾಮಾಜಿಕವಾಗಿ ಪ್ರಾಮುಖ್ಯತೆ ,ಅಧಿಕಾರ
ಗಳಿಸಲಿದ್ದೀರಿ.ನಿಮ್ಮ ಅಹಂಕಾರದಿಂದ ಕೆಲಸದಲ್ಲಿ ಕಿರಿಕಿರಿ. ನಿಮಗೆ ಪ್ರಸ್ತುತ ಗುರುವಿನ ಅನುಗ್ರಹ
ಇರುವುದಿಲ್ಲ. ಕೇತು ಸುಖ ಸ್ಥಾನದಲ್ಲಿಇದ್ದಾನೆ. ಶುಕ್ರ ಸಪ್ತಮದಲ್ಲಿ ಇರುವುದರಿಂದ ಪ್ರೇಮ
ಪ್ರಕರಣಗಳು ಮುಂದೆ ಸಾಂಸಾರಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಡಲಿದೆ. ಅಧಿಕ ಖರ್ಚು ವೆಚ್ಚ ಬರುವ
ಸಾಧ್ಯತೆ ಇರುವುದರಿಂದ,ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಒಳ್ಳೆಯದು.
ಜೀವನದಲ್ಲಿ ಗಾಂಭೀರ್ಯತೆಯನ್ನು ಬೆಳೆಸಿಕೊಳ್ಳಿರಿ.ದುರ್ಗಾ ಪ್ರಾರ್ಥನೆ ಅವಶ್ಯಕವಾಗಿದೆ.
ಕರ್ಕಾಟಕ : ಡಿಸೆಂಬರ್ 6 ರ ವರೆಗೆ ಎಚ್ಚರವಾಗಿರಿ. ಗುರುವಿನ ಅನುಗ್ರಹ ಉತ್ತಮವಾಗಿದೆ. ಆದರೆ ಗುರು
ಭಾಧಕ ಸ್ಥಾನದಲ್ಲಿ ಇದ್ದಾನೆ. ಕುಜ ನೀಚನಾಗಿದ್ದಾನೆ. ಶನಿ ಅಷ್ಟಮದಲ್ಲಿ ಇದ್ದಾನೆ.ವಾಹನ
ಚಲಾಯಿಸುವಾಗ ಎಚ್ಚರವಿರಲಿ. ನಿಮ್ಮಲ್ಲಿ ಉದಾಸೀನತೆ ,ಜಡತ್ವ, ಬರಲಿದೆ.ಅದನ್ನುಒಂದು ಬದಿಗಿಟ್ಟು
ಕಾರ್ಯ ನಿರ್ವಹಿಸಿದರೆ ಅಧಿಕ ಆದಾಯ ಬರಲಿದೆ. ನಿಮ್ಮವಾಹನ ದುರಸ್ತಿಗೆ ಬರಲಿದೆ. ಮನೆಯಲ್ಲಿ ಶುಭ
ಕೆಲಸಗಳಿಗೆ ಚಾಲನೆ ಸಿಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ವಿಷ್ಣು ಸಹಸ್ರನಾಮ ಪಾರಾಯಣ
ಉತ್ತಮವಾದ ಪರಿಹಾರವಾಗಿದೆ. ಆಸ್ತಿ ವಿವಾದಗಳು ಚಿಗುರು ಒಡೆಯಲು ಆರಂಭವಾಗಲಿದೆ. ಕುಜ ನಿಮ್ಮ
ಉದ್ವೇಗ, ಸಿಟ್ಟು,ತರಿಸಿ ಬಂಧು ವರ್ಗ ಎನ್ನುವ ಪ್ರೀತಿಯನ್ನೇ ಮರೆಯುವಂತೆ ಮಾಡಲಿದ್ದಾನೆ.ಸಿಂಹ : ಗಣ್ಯ ವ್ಯಕ್ತಿಗಳ ಭೇಟಿಯಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ.ಕೀರ್ತಿ ಪ್ರತಿಷ್ಠೆ ಹೆಚ್ಚಳವಾಗಲಿದೆ.
ನಿಮ್ಮ ವ್ಯವಹಾರ,ವ್ಯಾಪಾರ, ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸುಬರಲಿದೆ, ಪಾಲು ವ್ಯವಹಾರ
ಮಾಡುವಾಗ ಎಚ್ಚರವಿರಲಿ. ನಿಮ್ಮ ಸಂಗಾತಿ,ಮಕ್ಕಳ ಬಗ್ಗೆ ಕಾಳಜಿ ಇರಲಿ. ಶುಭ ಸಮಾರಂಭಗಳಲ್ಲಿ
ಭಾಗವಹಿಸುವಿರಿ. ದಾನ ಧರ್ಮದಲ್ಲಿ ಆಸಕ್ತಿ ಉಕ್ಕಿ ಬರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಒದಗಿ
ಬರಲಿದೆ.ಸಿಕ್ಕಿದ ಅವಕಾಶ, ಸಂಬಳಕ್ಕೆ ಹೊಂದಿ ಕೊಂಡು ಒಮ್ಮೆ ಕೆಲಸಕ್ಕೆ ಸೇರುವುದು ಅತೀ ಅಗತ್ಯವಾಗಿದೆ.
ಆಹಾರ ಸೇವನೆಯಲ್ಲಿ ಎಚ್ಚರವಿರಲಿ.ಉದಾರ ಸಂಬಂಧಿ ಸಮಸ್ಯೆ ಬರಲಿದೆ. ಕುಟುಂಬಕ್ಕೆ ಹೊಸ ವ್ಯಕ್ತಿಯ
ಸೇರ್ಪಡೆ ಆಗುವ ಸಾಧ್ಯತೆ ಇದೆ. ಆದಿತ್ಯ ಹೃದಯ ಪಾರಾಯಣ ಮಾಡಿರಿ.
ಕನ್ಯಾ : ಉತ್ತಮ ದೈವಾನುಗ್ರಹ ಒದಗಿ ಬಂದಿರುವ ಸಮಯ. ನೀವು ಹಾಕಿ ಕೊಂಡಿರುವ ಯೋಜನೆಗಳು
ಪೂರ್ಣಗೊಳ್ಳಲಿವೆ. ಕಂಕಣ ಭಾಗ್ಯ ಒಲಿದು ಬರಲಿದೆ. ಕುಟುಂಬದ ಹಿರಿಯರ ಅನಾರೋಗ್ಯ ಸಮಸ್ಯೆ
ನಿಮ್ಮನ್ನು ಚಿಂತೆಗೇಡು ಮಾಡಲಿದೆ. ಧರ್ಮ ಮಾರ್ಗ ಬಿಟ್ಟು ಸಂಪಾದನೆ ಮಾಡುವ ಅಗತ್ಯವಿಲ್ಲ. ಬೆಲೆ
ಬಾಳುವ ವಸ್ತುಗಳನ್ನು ಖರೀಧಿ ಮಾಡುವಿರಿ. ಸಂತೋಷದ ಸಮಯವನ್ನು ಶುಕ್ರ ನೀಡಲಿದ್ದಾನೆ. ನೃತ್ಯ
ಸಂಗೀತ ,ಹೊಟೇಲ್ ಸಿನೆಮಾ ವೃತ್ತಿಯವರಿಗೆ ಕೃಷಿಕರಿಗೆ ಒಳ್ಳೆಯ ಆದಾಯ ಬರುವ ಸಮಯವಾಗಿದೆ.
ಸಂಗಾತಿಯೊಂದಿಗೆ ಹೊಂದಿ ಕೊಂಡು ಮುನ್ನೆಡೆಯಿರಿ. ಭೂಮಿ ವ್ಯಾಪಾರಿಗಳಿಗೆ ಒಳ್ಳೆಯ ಸಮಯ .
ಸತ್ಯನಾರಾಯಣ ದೇವರ ನಾಮಾವಳಿಗಳನ್ನು ಪ್ರತಿನಿತ್ಯ ಓದುತ್ತಾ ಬನ್ನಿರಿ.
ತುಲಾ : ಕೆಲಸದ ಒತ್ತಡದಿಂದ ಆರೋಗ್ಯ ಮೇಲೆ ಪರಿಣಾಮವನ್ನು ಅಷ್ಟಮದ ಗುರು ಉಂಟು ಮಾಡಲಿದೆ.
ಮೃತ್ಯುಂಜಯ ಜಪವನ್ನುಮೇ 2025 ದಿನಾಂಕ 14 ರ ವರೆಗೆ ಮಾಡುತ್ತಾ ಬರಬೇಕು.ಇದು ಪಂಚಮದ
ಶನಿಗೂ ಸಹಾಯವಾಗಲಿದೆ. ಮಾತಿನಲ್ಲಿ ಹಿಡಿತವಿಲ್ಲದಿದ್ದರೆ ಯೋಜನೆಗಳೆಲ್ಲವೂ ಬುಡ ಮೇಲಾಗಲಿದೆ.
ವ್ಯಾಪಾರದಲ್ಲಿ ಹೊಸ ತಂತ್ರಗಳನ್ನು ಅಳವಡಿಸಿರಿ. ಸಂತಾನದ ಬಗ್ಗೆ ಶುಭ ಸುದ್ಧಿ
ಬರಲಿದೆ.ದಾಂಪತ್ಯದಲ್ಲಿ ಕಲಹ ಬರಲಿದೆ. ಉದ್ಯೋಗದಲ್ಲಿರುವವರು ಮೇಲಧಿಕಾರಿಗಳ ಜೊತೆಗೆ
ಹೊಂದಾಣಿಕೆಯಿಂದ ಮುಂದುವರಿಯಬೇಕು .ಆದಾಯದ ಮೂಲಗಳಲ್ಲಿ ಹೆಚ್ಚಳವಾಗಲಿದೆ. ರವಿ ಮತ್ತು
ಬುಧ ದ್ವಿತೀಯಾದಲ್ಲಿ ಇದ್ದುಕೊಂಡು ವಿದ್ಯಾರ್ಥಿಗಳು ಯಶಸ್ವಿಯಾಗುವರು.
ವೃಶ್ಚಿಕ : ದೈವಾನುಗ್ರಹ ಉತ್ತಮವಾಗಿದೆ. ಶುಭ ಸುದ್ಧಿಯಿಂದ ನಿಮ್ಮ ಉತ್ಸಾಹ ಹೆಚ್ಚಾಗಲಿದೆ.
ಶತ್ರುಗಳು ಎಷ್ಟೇ ಸಮಸ್ಯೆಗಳನ್ನುತಂದರೂ ಅವರ ಮೇಲೆ ಹಿಡಿತ ಸಾಧಿಸಲಿದ್ದೀರಿ. ಅನೇಕ ನೂಲಗಳಿಂದ
ರವಿ ಮತ್ತು ಬುಧ ಧನ ಲಾಭವನ್ನು ಕೊಡಲಿದ್ದಾರೆ. ಹಳೆಯ ರಹಸ್ಯವೊಂದು ಹೊರಬಂದು ಮನಸ್ಸಿಗೆ
ಕಿರಿಕಿರಿ ಆಗಲಿದೆ. ನಿಮ್ಮ ಸಂಗಾತಿಯಿಂದ ಬೆಂಬಲ ಸಿಗಲಿದೆ. ಕೌಟುಂಬಿಕ ಸಮಾರಂಭದಲ್ಲಿ
ಭಾಗವಹಿಸುವಿರಿ. ನೌಕರರಿಗೆ ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಳ್ಳುವಿರಿ. ಮಹಾ ರುದ್ರನಿಗೆ
ದೀಪ ಸೇವೆ ಮಾಡುತ್ತಾ ಬನ್ನಿರಿ. ಸುಖ ಸ್ಥಾನದ ಶನಿಯ ದೋಷಕ್ಕೂ ಇದು ಪರಿಹಾರವಾಗಿದೆ. 60+
ಆದವರಿಗೆ ಭವಿಷ್ಯದ ಚಿಂತೆಯೊಂದು ಕಾಡಲಿದೆ. ಜನರೊಂದಿಗೆ ಬೆರೆಯುವ ಅವಕಾಶದ ಕೊರತೆಯೂ ಇದಕ್ಕೆ
ಕಾರಣವಾಗಿದೆ.ಧನು : ದೈವಾನುಗ್ರಹದ ಕೊರತೆ ಇರುವುದರಿಂದ ಎಲ್ಲಾ ಕೆಲಸಗಳಲ್ಲಿ ನಿಧಾನವಾಗಿ ಯಶಸ್ಸು ಸಿಗಲಿದೆ.
ನಿರುದ್ಯೋಗಿಗಳು ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಮುಂದುವರಿಯಬೇಕು. ಬಡ್ತಿಯ ಯೋಗವಿದೆ.
ಹಿರಿಯ ಅಧಿಕಾರಿಗಳನ್ನು ಸ್ನೇಹದಿಂದ ಇದ್ದುಕೊಂಡು ಹೊಂದಾಣಿಕೆಯಿಂದ ಮುಂದುವರಿಯಬೇಕು.
ಹಿರಿಯರ ಬಗ್ಗೆ ಪ್ರೀತಿ ಒಲವು ಇರಲಿ. ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ. ಕುಜ ಅಷ್ಟಮದಲ್ಲಿ
ಇದ್ದಾನೆ.ಬಿಪಿ ಷುಗರ್ ಇರುವವರು ಆಹಾರ ಸೇವನೆ ನಿಯಮವನ್ನು ಪಾಲನೆಯನ್ನುಮಾಡುತ್ತಾ ಬನ್ನಿರಿ.
ರವಿ ಬುಧ ವ್ಯಯದಲ್ಲಿ ಇರುವುದರಿಂದ ಉದ್ಯೋಗದ ಬದಲಾವಣೆ ಮಾಡಲು ಹೋಗಬೇಡಿರಿ. ಶಿವ
ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ.
ಮಕರ : ಗುರು ಪಂಚಮದಲ್ಲಿ ಇದ್ದರೂ ಪಂಚಮಾಧಿಪತಿ ಶುಕ್ರ ವ್ಯಯದಲ್ಲಿ ಇದ್ದಾನೆ. ಆರ್ಥಿಕ ಪ್ರಗತಿ
ಉತ್ತಮವಾಗಿದ್ದರೂ ,ನಿಮ್ಮ ಜೊತೆಯಲ್ಲಿ ಇರುವ ಹಿತ ಶತ್ರುಗಳು ಅಲ್ಪ ಸ್ವಲ್ಪ
ತೊಂದರೆಗಳನ್ನುಮಾಡುತ್ತಲೇ ಬರುತ್ತಾರೆ. ಖರ್ಚಿನ ಹಿಡಿತ ನಿಮ್ಮಲ್ಲಿ ಇರಬೇಕಾಗಿದೆ. ದೇವಿಯ
ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಾಗಿದೆ. ಸಾಡೇ ಸಾತ್ ಶನಿಯ ಪ್ರಭಾವದಿಂದ ಸ್ವಯಂ
ಕೃತ ಅಪರಾಧಗಳಿಂದ ವಾದ-ವಿವಾದ ನಡೆಯಲಿದೆ. ಅದನ್ನು ನಿಭಾಯಿಸಿಕೊಳ್ಳುವ ಸಾಮರ್ಥ್ಯ ನಿಮಗೆ
ಬರಲಿದೆ. ವಸ್ತು ಭೂಮಿ ,ವಾಹನ ಖರೀಧಿಯಲ್ಲಿ ಮೋಸ ಹೋಗುವ ಸಾಧ್ಯತೆ ಇದೆ.ವಿಷ್ಣು ಸಹಸ್ರನಾಮ
ಪಾರಾಯಣ ಮಾಡಿರಿ.
ಕುಂಭ : ಶನಿ ನಿಮ್ಮ ಜನ್ಮ ರಾಶಿಯಲ್ಲಿಇದ್ದುಕೊಂಡು ಸಾಡೇ ಸಾತ್ ಶನಿ ಮುಂದುವರಿಯುತ್ತಿದೆ. ಹಣದ
ಆಗಮನ ಉತ್ತಮವಾಗಿರುತ್ತದೆ. ತಾಯಿಯವರ ಕಡೆಯಿಂದ ಸಹಾಯ ಹಸ್ತ ನಿಮಗೆ ಒದಗಿ ಬರಲಿದೆ. ನಿಮ್ಮ
ಶಾರೀರಿಕ, ಮಾನಸಿಕ ಆರೋಗ್ಯನೀವಾಡುವ ಮಾತಿನಲ್ಲಿ, ನೀವು ಮಾಡುವ ಕೆಲಸದಲ್ಲಿ ಇದೆ. ಯಾರೋ
ಮಾಡಿದ ತಪ್ಪಿಗೆ ನಿಮ್ಮ ಹೆಸರು ಸೇರಿಕೊಳ್ಳಲಿದೆ. ಇದನ್ನೇ ಗ್ರಹಚಾರ ಎನ್ನುವುದು. ಸಹೋದರನೊಂದಿಗೆ
ವಿನಾ ಕಾರಣ ಕಲಹ ಬರಲಿದೆ. ಅನೈತಿಕ ವ್ಯವಹಾರ ಬೇಡ. ದೊಡ್ಡ ಜವಾಬ್ದಾರಿಯೊಂದು ನಿಮ್ಮ
ಹೆಗಲೇರಿ ಕುಳಿತು ಕೊಳ್ಳಲಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ಸರಿಯಾಗಿ ಫಲ ಲಭಿಸಲಿದೆ.
ಮೀನ : ಸಾಡೇ ಸಾತ್ ಶನಿಯ ಪ್ರಭಾವ ನಿಮ್ಮ ದೈನಂದಿನ ಜೀವನದಲ್ಲಿ ತಿಳಿದು ಬರಲಿದೆ. ನಿಮ್ಮ ಸಾಧನೆ
ಗುರುತಿಸಿ ಸಮಾಜ ಗೌರವಿಸಲಿದೆ. ಆಸ್ತಿ ವಿವಾದಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆಇಡಿರಿ. ಮಗಳೊಂದಿಗೆ ಕಲಹ
ಬೇಡ. ದಾಂಪತ್ಯದಲ್ಲಿಕಲಹ ಕಿರಿಕಿರಿ ಇರುತ್ತದೆ. ನಿಮ್ಮ ಉದ್ಯೋಗದಲ್ಲಿಬಡ್ತಿ ಸಿಗಲಿದೆ. ಜವಾಬ್ದಾರಿ
ಹೆಚ್ಚಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಮತ್ಸರ ಪಡುವ ಹಿತ ಶತ್ರುಗಳು ನಿಮ್ಮ ಜೊತೆಯಲ್ಲಿಯೇ
ಇರುತ್ತಾರೆ. ನೀರಿನ ಪ್ರದೇಶಕ್ಕೆ ಹೋಗುವಾಗ ಎಚ್ಚರವಿರಲಿ. ಖರ್ಚು ವೆಚ್ಚಗಳು ಸಮಾನವಾಗಲಿದೆ. ತೀರ್ಥ
ಕ್ಷೇತ್ರ ದರ್ಶನ ಯೋಗವಿದೆ. ನಿಮ್ಮವರ ಬಗ್ಗೆ,ನಿಮ್ಮನ್ನೆ ನಂಬಿಕೊಂಡು ಇರುವವರ ಬಗ್ಗೆ ಉದಾಸೀನತೆ
ಬೇಡ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು. ವಾಸ್ತು ಸಲಹೆ/ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.






































