ಸರಕಾರದ ಸವಲತ್ತು ಉತ್ತಮ ಬದುಕಿಗೆ ಅಡಿಪಾಯ

Picture of RB NEWS

RB NEWS

Bureau Report

ಕಾರ್ಕಳ: ವಿಶೇಷ ಚೇತನ ಮಕ್ಕಳ ಆರೈಕೆದಾರಾರ ಸಬಲೀಕರಣಕ್ಕೆ ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮಜೀವನ ರೂಪಿಸಿಕೊಳ್ಳುವಂತೆ ಕಾರ್ಕಳ ತಾಳೂಕು ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಾನಂದ ಕೆ ಹೇಳಿದರು.

ಕುಕ್ಕುಂದೂರು ಅಯ್ಯಪ್ಪನಗರದ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ರಿ. ವಿಜೇತ ವಿಶೇಷ ಶಾಲೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ ಆಯೋಜಿಸಿದ ತಾಲೂಕು ಮಟ್ಟದ ವಿಶ ್ವಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶೇಷ ಚೇತನ ಯುವತಿ ಜ್ಯೋತಿ ಶಿಂಧೆ ಇವರ ಆರೈಕೆದಾರರಾದ ಶಾರದ ಶಿಂದೆ ಇವರನ್ನು ಹಾಗೂ ವಿಜೇತ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವ ರಮ್ಯಾ ಶ್ರೀ ಶೆಟ್ಟಿ ಇವರನ್ನು ಆರೈಕೆದಾರರ ದಿನಾಚರಣೆಯ ಪ್ರಯುಕ್ತ ಗೌರವಿಸಲಾಯಿತು.

ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಸಭಾಧ್ಯಕ್ಷತೆ ವಹಿಸಿ, ವಿಶೇಷ ಚೇತನರ ಪ್ರತಿಯೊಂದು ಕೆಲಸವನ್ನು ಯಾವುದೇ ಅಸಹ್ಯ ಭಾವನೆ ಇಲ್ಲದೆ ನಿಸ್ವಾರ್ಥಿಗಳಾಗಿ ಸೇವೆ ಸಲ್ಲಿಸುತ್ತಿರುವ ಆರೈಕೆದಾರರಿಗೆ ಮೀಸಲಾಗಿಟ ್ಟಈ ದಿನವನ್ನು ಆಚರಿಸುವುದು ಸಂತೋಷದಾಯಕವೆAದರು.

ಸಂಪನ್ಮೂಲ ವ್ಯಕ್ತಿಗಳಾಗಿ ವಿಜೇತ ವಿಶೇಷ ಶಾಲಾ ಫಿಸಿಯೋ ಥೆರಫಿಸ್ಟ್ ಡಾ.ವೆನ್ಸಿಟಾ ಪ್ರಿಯಾಂಕ ಆರಾನ್ಹ ಉಪಸ್ಥಿತರಿದ್ದು, ಆರೈಕೆದಾರರ ವೈಯುಕ್ತಿಕ ಆರೋಗ್ಯಕ್ಕಾಗಿಯೂ ಸಮಯ ಮೀಸಲಿಟ್ಟು ಆರೋಗ್ಯ ಕಾಪಾಡಿಕೊಳ್ಳುವುದು ಜವಾಬ್ದಾರಿ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಪುನರ್ವಸತಿ ಕಾರ್ಯಕರ್ತೆ ಮಂಜುಳಾ ಸುಭಾಷ್, ಶ್ರೀ ದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಟ್ಟಿ, ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಉಪಸ್ಥಿತರಿದ್ದರು.
ವಿಜೇತ ಶಾಲಾ ವಿಶೇಷ ಶಿಕ್ಷಕಿಯರಾದ ಹರ್ಷಿತಾ ಕಿರಣ್ ನಿರೂಪಿಸಿದರು. ಶ್ವೇತಾ ನಿತಿನ್ ಸ್ವಾಗತಿಸಿದರು ಶ್ರೀನಿಧಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top