

ಏನ ಹಾಡಲ್ಲಿ ನಾನು
ಏನ ಹಾಡಲ್ಲಿ ನಾನು ಏನ ಹೇಳಲಿ ಹೇಳಿ…
ಚಂದಿರನ ಹಾಡಲೇ ಬರಿ ಶಿಲೆಯ ಚಂದ್ರ
ಚಂದಿರಗೆ ಮೊಗವಿಲ್ಲ ಬರಿ ಗೊರಜು ಕಲ್ಲು
ಚಂದಿರಗೆ ಬೆಳಕಿಲ್ಲ ರವಿಯ ಪಡಿ ಬೆಳಕು
ಹೋಲಿಸಿದರೆ ಹೊಲಸು ಚಂದ್ರಮುಖಿ ಎಂದು..l
ಕಂದ ನನು ಕುರಿತೊಂದು ಕವಿತೆಯನ್ನು ಹಾಡಲೇ
ಕಂದಯ್ಯ ನಳುವೆಲ್ಲಿ ನಗುವೆಲ್ಲಿ ಕಲಿಯುಗದಲ್ಲಿ
ಕಾಣೆಯಾಗಿದೆ ಕೆಲಸದಾಕೆಯ ಪಾಲನೆಯಲ್ಲಿ
ಕಂಗಳಲಿ ಒಲವಿಲ್ಲ ತಾಯೊ ಲುಮೆಯ ಅಭಾವದಲ್ಲಿ l
ಮದುಮಗಳ ಮೋದವನು ಮನಸಾರೆ ಪಾಡಲೇ
ಮದುಮಗಳ ಮೊಗದಲ್ಲಿ ಕಾಣಿಸದು ಲಜ್ಜೆ
ಮುದ್ದು ಮುಖದೊಳೆಲ್ಲ ಕೃತ್ರಿಮದ ಶೃಂಗಾರ
ಫೋಟೋ ವಿಡಿಯೋಗಳಿಗೆ
ನಗುವ ಬಡಿವಾರ. I
ಬಗೆ ಬಗೆಯೊಳ್ ಬಣ್ಣಿ ಸಲೇ ಭಗವಂತನುತ್ಸ ವವ…
ಭಗವಂತನಾ ಘೋಷಣೆ ಜಗದಿಂದ ಕಣ್ಮರೆ
ಬಗೆಬಗೆಯ ಧ್ವನಿಗಳಾ ಕ್ಯಾಸ್ಸೇಟ್ಟು ಮೈಕ್ಸೆಟ್ಟು
ಭೋರ್ಗರೆತದಲಿ ದೇವ ಕಿವಿಯಿದ್ದೂ ಕಿವುಡಾಗಿಹ…. I
–ಸಾವಿತ್ರಿ ಮನೋಹರ್
























