ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಸಮಾಜ ಮಂದಿರ ಸಭಾ ದವರ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ 4 ನೇ ದಿನದ ಕಾರ್ಯಕ್ರಮ ಅಕ್ಟೋಬರ್ 6 ರಂದು ನಡೆಯಿತು.
ಯಕ್ಷರಂಗದ ಸ್ವಾರಸ್ಯ ಪ್ರಸಂಗಗಳ ಹಿನ್ನೆಲೆ, ಔಚಿತ್ಯ ಗಳನ್ನು ತಿಳಿಸುತ್ತಾ ವಿಶೇಷ ಪ್ರಸಂಗಗಳನ್ನು ಎಕ್ಸಲೆಂಟ್ ಪ.ಪೂ.ಕಾಲೇಜಿನ ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ವಿವರಿಸಿದರು.

ಎದುರುದಾರರ ಮಾತನ್ನೇ ಬೆಳೆಸುತ್ತಾ ಹೋಗುವುದು ಯಕ್ಷರಂಗದ ಅತ್ಯಂತ ವಿಶೇಷವಾದಂತಹ ಜಾಣ್ಮೆ ಎಂದರು.
ಮಹಾವೀರ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಧನಂಜಯ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಕಾಮತ್ ಸಮ್ಮಾನಿತರ ಪರಿಚಯಿಸಿದರು. ಕೆ ಆರ್ ಪಂಡಿತ್ ವಂದಿಸಿದರು.
ತರುವಾಯ ವಿದುಷಿ ಶಾರದಾ ಮಣಿ ಶೇಖರ್ ಅವರ ಮಂಗಳೂರು ಮೂಡುಬಿದಿರೆ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನಾಟ್ಯಂಜಲಿ ಕಾರ್ಯಕ್ರಮ ಜರುಗಿತು.





















