ಮೂಡುಬಿದಿರೆ ತಹಶೀಲ್ದಾರರ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಕೆ

Picture of RB NEWS

RB NEWS

Bureau Report


ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದವರು ಸೆಪ್ಟೆಂಬರ್ 22ರಂದು ನಡೆಸಿದ ಸಭೆಯ ಪ್ರಕಾರ ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳು ಸಪ್ಟಂಬರ್ 26ರಂದು ಮೂಡುಬಿದಿರೆ ತಹಸಿಲ್ದಾರರಿಗೆ ಮನವಿಯನ್ನು ಅರ್ಪಿಸಿದರು. ಅವರು ತಮ್ಮ ಮನವಿಯಲ್ಲಿ 21 ಮೊಬೈಲ್ ತಂತ್ರಾಂಶಗಳಿಂದ ಗ್ರಾಮ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ತಾಂತ್ರಿಕ ಹುದ್ದೆಗಳಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನು ತಮಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ಸುಸಜ್ಜಿತ ಕಚೇರಿ, ಉತ್ತಮ ಮೊಬೈಲು, ಲ್ಯಾಪ್ಟಾಪ್ ಇತ್ಯಾದಿ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಿ ತಂತ್ರಾಂಶದ ವದಗಣೆಯನ್ನು ನೀಡಬೇಕೆಂದು ಕೇಳಿಕೊಂಡಿದ್ದಾರೆ.

ಮೊಬೈಲ್ ತಂತ್ರಾಂಶ ವಿಚಾರವಾಗಿ ಇದುವರೆಗೆ ಆದ ಎಲ್ಲಾ ಅಮಾನತ್ತುಗಳನ್ನು ರದ್ದುಪಡಿಸಿ ಸರಕಾರಿ ನಿಯಮದಂತೆ ರಜೆ, ಪದೋನ್ನತಿ, ವರ್ಗಾವಣೆ ಇತ್ಯಾದಿ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಕೂಡ ವಹಿಸುತ್ತಿರುವುದರಿಂದ ಆಪತ್ತಿನ ಭತ್ಯೆ, ಪ್ರಯಾಣ ಭತ್ಯೆ, ಇತ್ಯಾದಿ ಸೌಲಭ್ಯಗಳನ್ನು ಕೂಡ ನೀಡಿ ಗ್ರಾಮ ಆಡಳಿತ ಅಧಿಕಾರಿಗಳ ಸ್ಥಿತಿಯನ್ನು ಮೇಲ್ದರ್ಜೆಗೇರಿಸಬೇಕೆಂಬ, ಇತ್ಯಾದಿ 3೦ ಸೇವಾ ವಿಷಯದ ಬೇಡಿಕೆಗಳಿರುವ ಮನವಿಯನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಮೂಡುಬಿದಿರೆ ಗ್ರಾಮ ಆಡಳಿತ ಅಧಿಕಾರಿಗಳ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ , ಕಾರ್ಯದರ್ಶಿ ಭವ್ಯ ಹಾಗೂ ಇತರ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top