ಕಾರ್ಕಳ : ಕಲ್ಯಾದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ. ಹಿ. ಪ್ರಾ. ಶಾಲೆ ಕಲಂಬಾಡಿ ಪದವು ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು ಪ್ರಥಮ -6,, ದ್ವಿತೀಯ -7ಹಾಗೂ ತೃತೀಯ -2ಬಹುಮಾನಗಳನ್ನು ತಂದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಪ್ರತಿಭೆಯಲ್ಲಿ ಪಾಲ್ಗೊಂಡವರು, ಸಾಧನೆಗೈದ ವಿಧ್ಯಾರ್ಥಿಗಳಿಗೆ ಶಾಲಾ ಪರವಾಗಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯೋ ಪಾಧ್ಯಾಯ ನಾಗರಾಜ್. ಬಿ, ದೈಹಿಕ ಶಿಕ್ಷಕರಾದ ರವೀಂದ್ರನ್, ವಿಜಯಲಕ್ಷ್ಮಿ, ಗುಲಾಬಿ, ಆಶಾ ಹಾಗೂ ಅಡುಗೆ ಸಿಬ್ಬಂದಿ ಸುಮಿತ್ರ, ರತ್ನ ಉಪಸ್ಥಿತರಿದ್ದರು.
ಕಿರಿಯ ವಿಭಾಗ :ಅನ್ಸ್ಯಿಕ ಭಕ್ತಿ ಗೀತೆ ಪ್ರಥಮ, ಕನ್ನಡ ಕಂಠಪಾಠ ದ್ವಿತೀಯ, ಖುಷಿ -ಇಂಗ್ಲಿಷ್ ಕಂಠಪಾಠ ಪ್ರಥಮ, ಅಭಿನಯ ಗೀತೆ ದ್ವಿತೀಯ, ಅನುಶ್ರೀ -ಕಥೆ ದ್ವಿತೀಯ, ಆದಿತ್ಯ -ಕ್ಲೇ ಮಾಡಲಿಂಗ್ ತೃತೀಯ, ಅನ್ವಿತಾ -ಆಶುಭಾಷಣ ದ್ವಿತೀಯ,.
ಹಿರಿಯ ವಿಭಾಗ :ಭವಿಷ್ -ಹಿಂದಿ ಪ್ರಥಮ, ಇಂಗ್ಲಿಷ್ ದ್ವಿತೀಯ, ಕೀರ್ತಿತ -ಚಿತ್ರಕಲೆ ತೃತೀಯ, ಪ್ರಣೀತ -ಭಕ್ತಿ ಗೀತೆ ದ್ವಿತೀಯ,, ನಿರೀಕ್ಷ -ಕ್ಲೇ ಮಾಡಲಿಂಗ್ ಪ್ರಥಮ, ಸ್ವೀಕೃತಿ -ಅಭಿನಯ ಗೀತೆ ಪ್ರಥಮ, ಕಥೆ ಪ್ರಥಮ, ಯಶಸ್ -ಧಾರ್ಮಿಕ ಪಠಣ ದ್ವಿತೀಯ ಬಹುಮಾನ ತಂದು ಕೀರ್ತಿ ತಂದಿರುತ್ತಾರೆ.





















