ಮೂಡುಬಿದಿರೆ: ಗಣೇಶೋತ್ಸವ ಸಮಿತಿಗಳಿಂದ ಪ್ರತಿಭಟನೆ

Picture of RB NEWS

RB NEWS

Bureau Report

ಮೂಡುಬಿದಿರೆ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಧಾಳಿ ವಿರೋಧಿಸಿ ಮೂಡುಬಿದಿರೆ ತಾಲೂಕು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಒಕ್ಕೂಟವು ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ಸಪ್ಟೆಂಬರ್ 13ರಂದು ಸಂಜೆ ಪ್ರತಿಭಟನೆಯನ್ನು ನಡೆಸಿತು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ನರಸಿಂಹ ಶೆಟ್ಟಿ, ಮಾಣಿ ಅವರು ಮಾತನಾಡಿ ಗಣೇಶ ಪೂಜೆಗೆ ವಿಘ್ನ ಬಂಧುದು ಆತಂಕಕಾರಿ ಎಂದರು. ಕ್ರಾಂತಿಕಾರಕ ಹೋರಾಟಕ್ಕೆ ಇನ್ನು ಮುಂದೆ ಹಿಡಿಯ ಬೇಕಾಗಬಹುದು ಎಂದು ಎಚ್ಚರಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಹಿ.ಜಾ.ವೇ. ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ, ತಾಲೂಕು ಸಂಯೋಜಕ ಹರೀಶ್ ಚಂದ್ರ ಕೆ ಸಿ, ಸಹ ಸಂಯೋಜಕ ಶರತ್ ಮಿಜಾರು, ಭಜರಂಗದಳದ ಅಭಿಲಾಶ್, ಪುರಸಭಾಧ್ಯಕ್ಷ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಬಾಹುಬಲಿ ಪ್ರಸಾದ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ, ರಂಜಿತ್ ಪೂಜಾರಿ, ಸುಚೇತನ್ ಜೈನ್, ಸೋಮನಾಥ ಕೋಟ್ಯಾನ್, ಈಶ್ವರ್ ಕಟೀಲು, ಕಸ್ತೂರಿ ಪಂಜ ಹಾಗೂ ಇತರ ಹಲವಾರು ಮುಂದಾಳುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top