ಮೂಡಬಿದಿರೆ ಆಳ್ವಾಸ್ ಕಾಲೇಜು : ಸಂಸ್ಕೃತ ದಿನಾಚರಣೆ
ರಾಮ, ಕೃಷ್ಣ ರು ಯುಗ ಧರ್ಮದ ನಾಯಕರು- ಉಜಿರೆ ಅಶೋಕ ಭಟ್ಟ
ಮೂಡುಬಿದಿರೆ : ಬದುಕಿನ ದಾರಿ ಕಷ್ಟಕಾರವಾಗಿದೆ ಅದರಲ್ಲಿ ಸುಲಲಿತವಾಗಿ ಸಾಗಬೇಕು. ಶ್ರೀಕೃಷ್ಣ ಬರಿಯ ನಾಯಕತ್ವ ಗುಣ ಹೊಂದಿದವನಲ್ಲ. ಆತ ನಾಯಕತ್ವದ ನಿರ್ಮಾತೃ.ರಾಮ,ಕೃಷ್ಣ ದೇವರಲ್ಲ ಬದಾಲಾಗಿ ಅವರು ಯುಗಧರ್ಮದ ನಾಯಕರು. ಕೇವಲ ಭಾವುಕ ಭಕ್ತಿಯಿಂದ ಅವರನ್ನು ದೇವರು ಅಂತ ನೋಡಬೇಕಿಲ್ಲ ಪ್ರಾಯೋಗಿಕವಾಗಿ ನೋಡಬೇಕು ಎಂದು ಪ್ರವಚನಕಾರ, ವಾಗ್ಮಿ ಉಜಿರೆ ಅಶೋಕ ಭಟ್ಟ ಹೇಳಿದರು.
ಮೂಡಬಿದಿರೆ ಆಳ್ವಾಸ್ ಕಾಲೇಜುನಲ್ಲಿ ಜರುಗಿದ್ದ ಸಂಸ್ಕೃತ ದಿನಾಚರಣೆ ಅಂಗವಾಗಿ ರಾಮ, ಕೃಷ್ಣ ರು ಯುಗ ಧರ್ಮದ ನಾಯಕರು ವಿಚಾರದ ಕುರಿತು ಮಾತನಾಡಿದರು.
ಆಳ್ವಾಸ್ ಸಂಸ್ಥೆ all in one ಮತ್ತು one in all. ನಾಯಕತ್ವ ಎಂಬ ವಿಷಯಕ್ಕೆ ಡಾ.ಡಿ.ವಿರೇಂದ್ರ ಹೆಗ್ಗಡೆ ಹಾಗೂ ಡಾ.ಮೋಹನ್ ಆಳ್ವ ಬಹು ದೊಡ್ಡ ನಿದರ್ಶನ. ಹೇಳಿದರು.
ಅತ್ಯಂತ ಶ್ರೇಷ್ಠ ಜಾತ್ಯತೀತ ವ್ಯಕ್ತಿತ್ವ ಶ್ರೀರಾಮನಲ್ಲಿ ಅಡಕವಾಗಿದೆ. ಭಗವದ್ಗೀತೆಯಲ್ಲಿ ಹೇಳುವಂತೆ ತನ್ನನ್ನು ತಾನು ಉದ್ಧರಿಸಿಕೊಳ್ಳಬೇಕು.ಕೃಷ್ಣ ವಿಕಾರಕ್ಕೆ ಆಕಾರ ಕೊಟ್ಟ, ಪ್ರಾಕೃತ ಸಂಗತಿಗಳಿಗೆ ಸಂಸ್ಕಾರ ಕೊಟ್ಟವ ಕೃಷ್ಣ.
ಮಕ್ಕಳ್ಳನ್ನು ಪಡೆಯುವಾಗ ಯಾವ ಮನೋಧರ್ಮದಲ್ಲಿ ಪೋಷಕರು ಇರ್ತಾರೆ ಆ ಪ್ರಕಾರ ಮಕ್ಕಳು ಹುಟ್ಟುತ್ತಾರೆ, ಬೆಳೆಯುತ್ತಾರೆ.ಕೃಷ್ಣ ಕ್ಷೀರ ಕ್ರಾಂತಿ, ಕೃಷಿ ಕ್ರಾಂತಿ,ಅಕ್ಷರ ಕ್ರಾಂತಿಗಳ ಹರಿಕಾರ.ಎಲ್ಲರಲ್ಲೂ ಜಾಗೃತಿ ಮೂಡಿಸುವ ಕೃಷ್ಣ ತುಂಬಾ ಜಾಗರೂಕನಾಗಿದ್ದ. ಯಾರು ಧರ್ಮ ಅನುಷ್ಠಾನ ಮಾಡ್ತಾರೆ ಅವರಿಗೆ ಸದಾ ಕೃಷ್ಣ ಪರೋಕ್ಷ ಪ್ರೀತಿ ತೋರುತ್ತಾನೆ. ಸದಾಚಾರಗಳನ್ನು, ಸಂಸ್ಕಾರಗಳನ್ನು ಆಚರಿಸುವ ಮೂಲಕ ಭೋಧಿಸಿದವ ಕೃಷ್ಣ.
ಪ್ರಜಾಪ್ರಭುತ್ವದ ವ್ಯವಸ್ಥೆಗೆ ನಾಂದಿ ಹಾಡಿದೆ ಜಗತ್ತಿನ ಮೊದಲ ರಾಜತಾಂತ್ರಿಕ. ಕೃಷ್ಣ ಭಾರತ ಸಂಸ್ಕೃತಿಯ ತಾಯಿ ಇಂದು ನಾವು ಆ ಸಂಸ್ಕೃತಿಯ ಉತ್ತಾರಾಧಿಕಾರಿಗಳಾಗಬೇಕಾಗಿದೆ.
ಕಣಕಣದಲ್ಲಿ ಕೃಷ್ಣ ಪ್ರಜ್ಞೆ ಇದೆ ಎಂದು ಪ್ರವಚನಕಾರ, ವಾಗ್ಮಿ ಉಜಿರೆ ಅಶೋಕ ಭಟ್ಟ ಅವರು ಅಭಿಪ್ರಾಯ ಪಟ್ಟರು.

ಕಾಲೇಜಿನ ಆಡಳಿತ ಅಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ಟ ಗಾಳಿ ಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಉಪನ್ಯಾಸಕ ವಿದ್ವಾನ್ ಲಕ್ಷ್ಮೀಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಅಪರ್ಣ ಹೊಳ್ಳ ವಂದಿಸಿದರು.
ವೇದಿಕೆಯಲ್ಲಿ ಆಳ್ವಾಸ್ ಪ್ರತಿಷ್ಠಾನದ ವಿವೇಕ್ ಆಳ್ವ ಉಪಸ್ಥಿತರಿದ್ದರು.





















