ಕಾರ್ಕಳ ಪುರಸಭೆ ನೂತನ ಆಡಳಿತಕ್ಕೆ ಹೊಸ ಸವಾಲು



ಕಾರ್ಕಳ: ಸ್ವಚ್ಚ ಕಾರ್ಕಳ ಸುಂದರ ಕಾರ್ಕಳ ಎಂದು ರಾರಾಜಿಸುತ್ತಿದ್ದ ಘೋಷವಾಕ್ಯ ಮಂಗಮಾಯವಾಗಿದೆ.
ಇದಕ್ಕೆ ಉತ್ತಮ ನಿದರ್ಶನ ಕಾರ್ಕಳ ನಗರದ ಐತಿಹಾಸಿಕ ಧಾರ್ಮಿಕ ನೆಲೆಬೀಡು ಅನಂತಪದ್ಮನಾಭ ದೇವಸ್ಥಾನದ ಪರಿಸರ. ಪ್ರಸಕ್ತ ಸಾಲಿನ ಮಳೆಗಾಲದ ಸಂದರ್ಭದಲ್ಲಿ ಭಾರೀ ಗಾಳಿ ಮಳೆಗೆ ಶ್ರೀ ಕ್ಷೇತ್ರಕ್ಕೆ ಒಳಪಟ್ಟ ಬೃಹತ್ ಗಾತ್ರದ ಮರದ ಕೊಂಬೆ ಉರುಳಿ ಬಿದ್ದು, ಕೆಲ ವಾಹನಗಳು ಜಖಂಗೊAಡಿತ್ತು. ಆ ಸಂದರ್ಭದಲ್ಲಿ ಕೊಂಬೆಯ ಪರಿಕರಗಳು ರಸ್ತೆಯ ಒಂದುಪಾರ್ಶ್ವದಲ್ಲಿ ಬಿದ್ದುಕೊಂಡು ಇದೀಗ ಒಣಕಸವಾಗಿ ಮಾರ್ಪಟ್ಟಿದೆ. ಇದು ಪುರಸಭೆಯ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದರೂ ತಪ್ಪಾಗಲಾರದು.
ಶ್ರೀ ಅನಂತಪದ್ಮನಾಭ ಕ್ಷೇತ್ರವು ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯ ಅಧೀನಕ್ಕೊಳಪಡುತ್ತಿದೆ. ಉರುಳಿಬಿದ್ದ ಮರದ ಕೊಂಬೆಯ ಪರಿಕರಗಳ ತೆರವು ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮಾಡಬೇಕೆಂಬ ವಾದವು ಕಾರ್ಕಳ ಪುರಸಭೆಯ ಆಡಳಿತ ವರ್ಗದಾಗಿತ್ತು. ಪುರಸಭಾ ಆಡಳಿತ ವರ್ಗವು ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದರೆ, ಇಷ್ಟು ದಿನಗಳ ಒಳಗಾಗಿ ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿ ರಸ್ತೆಯ ಪಾರ್ಶ್ವದಲ್ಲಿ ಬಿದ್ದುಕೊಂಡಿದ್ದ ಕೊಂಬೆಯ ಒಣತ್ಯಾಜ್ಯ ತೆರವು ಕಾರ್ಯ ನಡೆಸುತ್ತಿತ್ತು.
ಕೊಂಬೆಯ ತ್ಯಾಜ್ಯ ಬಿದ್ದು ಕೊಂಡಿರುವ ರಸ್ತೆಯಾಗಿ ಮಂದೆ ನ್ಯಾಯಾಲಯ, ಪ್ರವಾಸಿ ಬಂಗಲೆ ಶಿಕ್ಷಣ ಸಂಸ್ಥೆಗಳು, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್, ತಾಲೂಕು ಕ್ರೀಡಾಂಗಣ, ಈಜುಕೊಳ್ಳ, ಕೈಗಾರಿಕಾ ಸಂಕೀರ್ಣ…ಮುAತಾದುವುಗಳು ಇವೆ. ದೈನಂದಿನ ಜನಸಾಮಾನ್ಯರು, ಜನಪ್ರತಿನಿಧಿಗಳು, ಘನವ್ಯಕ್ತಿಗಳು ಇದೇ ರಸ್ತೆಯಾಗಿ ಹಾದು ಹೋಗುತ್ತಾರೆ.
ಸ್ವಚ್ಚತಾ ಕಾರ್ಯದಲ್ಲಿ ರಾಷ್ಟçಮಟ್ಟದಲ್ಲಿ ಹೆಸರು ಗಳಿಸಿರುವ ಕಾರ್ಕಳ ಪುರಸಭೆಯು ಆಡಳಿತವನ್ನು ಗಮನಿಸಿದರೆ ದೀಪದಡಿಯಲ್ಲಿ ಕತ್ತಲು ಎಂಬುವುದು ಭಾಸವಾಗುತ್ತದೆ.
ಮನೆಗಳಿಂದ ಹಾಗೂ ವ್ಯಾಪಾರ ಕೇಂದ್ರಗಳಿAದಲೂ ಸ್ವಚ್ಚತಾ ಕಾರ್ಯಕ್ಕೆಂದು ಶುಲ್ಕ ಸಂಗ್ರಹಿಸುತ್ತಿದ್ದು, ತ್ಯಾಜ್ಯ ಸಂಗ್ರಹಣೆಗಾಗಿ ಸಿಬ್ಬಂದಿಗಳನ್ನು ಕಾರ್ಕಳ ಪುರಸಭೆ ನಿಯೋಜಿಸಿದೆ.
ದುರಾದೃಷ್ಟಕರವೆಂದರೆ ಸಂಘ-ಸAಸ್ಥೆಯ ಸದಸ್ಯರು ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚತಾ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಸ್ವಚ್ಚತಾ ಕಾರ್ಯದಲ್ಲಿ ಮೊಂಡುವಾದವನ್ನು ಕೈಬಿಟ್ಟು ಅನಂತಪದ್ಮನಾಭ ದೇವಸ್ಥಾನ ಪಕ್ಕದ ರಸ್ತೆಯ ಅಂಚಿನಲ್ಲಿ ಬಿದ್ದುಕೊಂಡಿರುವ ಕೊಂಬೆಯ ತ್ಯಾಜ್ಯ ರಾಶಿಗೆ ಮುಕ್ತಿ ನೀಡಬೇಕಾಗಿದೆ.
ಪುರಸಭೆಯಲ್ಲಿ ನೂತನ ಆಡಳಿತ ಅಸಿತ್ವಕ್ಕೆ ಬಂದಿದ್ದು, ಸಮಸ್ಸೆಗೆ ಸ್ವಂದಿಸ ಬೇಕೆಂಬ ಆಗ್ರಹ ಪ್ರಜ್ಞಾವಂತ ನಾಗರಿಕರದಾಗಿದೆ.





















