ರಾಜ್ಯಮಟ್ಟದ ಕ್ರೀಡಾಕೂಟ: 4 ಚಿನ್ನದ ಪದಕ ತನ್ನದಾಗಿರಿಸಿದ ವಾಣಿ
ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟವು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆ.17,18,19 ರಂದು ನಡೆದಿರುತ್ತದೆ.

ಕ್ರೀಡಾಕೂಟದಲ್ಲಿ ಕಾರ್ಕಳದ ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕಿ ವಾಣಿ ಇವರು ಈಜು ಸ್ಪರ್ಧೆಯಲ್ಲಿ ಭಾಗವಹಿಸಿ, 50 ಮೀ ಬ್ಯಾಕ್ ಸ್ಟೋಕ್ ನಲ್ಲಿ ಪ್ರಥಮ ಸ್ಥಾನ, 50 ಮೀಟರ್ ಬ್ರೆಸ್ಟ್ ಪ್ರೋಕ್ ನಲ್ಲಿ ಪ್ರಥಮ ಸ್ಥಾನ ಹಾಗೂ 50 ಮೀ ಬಟರ್ ಪ್ರೈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 50 ಮೀಟರ್ ರಿಲೇ ವಿಭಾಗದಲ್ಲಿ ಪ್ರಥಮ ಸ್ಥಾನ ಒಟ್ಟು 4 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.






































