ಹೆಬ್ರಿ : ಮುನಿಯಾಲು ಜಿ. ಎಸ್. ಬಿ. ಮಹಿಳಾ ಮಂಡಳಿಯ ವತಿಯಿಂದ 34 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನೆರವೇರಿಸಲಾಯಿತು.
ಮಹಿಳಾ ಮಂಡಳಿ ಅಧ್ಯಕ್ಷೆ ಸುಧಾ ಗಣಪತಿ ಪೈ ಮುದ್ರಾಡಿ, ಉಪಾಧ್ಯಕ್ಷೆ ಲತಾ ದಾಮೋದರ್ ಪೈ, ಕೋಶಾಧಿಕಾರಿ ಮಹಾಲಸ ಕೃಷ್ಣಕಾಂತ ನಾಯಕ್ ಹಾಗೂ ಕಾರ್ಯದರ್ಶಿಗಳಾದ ರಜನಿ ರಾಮ್ ಪೈ ಇವರ ನೇತೃತ್ವದಲ್ಲಿ ಸಮಾಜದ ಸುಮಾರು 200 ಕ್ಕೂ ಮಿಕ್ಕಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಅದ್ದೂರಿಯಾಗಿ ನೆರವೇರಿತು.
ಪೂಜಾ ವಿಧಿವಿಧಾನಗಳನ್ನು ಪ್ರಧಾನ ಅರ್ಚಕರಾದ ವಾಮನ್ ಭಟ್ ಇವರು ನೆರವೇರಿಸಿದರು ಹಾಗೂ ಸಮಸ್ತ ಸಮಾಜ ಭಾಂದವರಿಗೆ ಪೂಜೆಯ ಬಳಿಕ ಏಕಾದಶಿಯ ಪ್ರಯುಕ್ತ ಭೋಜನದ ಬದಲಿಗೆ ಫಾಲಾಹಾರದ ವ್ಯವಸ್ಥೆಯನ್ನು ನೆರವೇರಿಸಲಾಗಿತ್ತು.
ಚಿತ್ರ; ಪ್ರಮೋದ್ ಚಂದ್ರ ಪೈ






















