ಕಾರ್ಕಳ ರಾಮಕ್ರತ್ರಿಯ ಸಂಘ(ರಿ)ದ ವಾರ್ಷಿಕೋತ್ಸವ-2024

ಕಾರ್ಕಳ: ಇಲ್ಲಿನ ರಾಮಕ್ಷತ್ರಿಯ ಸಂಘ(ರಿ)ಇದರ ವಾರ್ಷಿಕೋತ್ಸವ-2024 ದಿನಾಂಕ 28.07.2024ರಂದು ಶ್ರೀರಾಮ ಸಭಾಭವನ ಬಂಡಿಮಠ ಕಾರ್ಕಳ ಇಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕ ಎ. ನಾರಾಯಣ ಸೇರ್ವೆಗಾರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಕೆ. ಶ್ರೀಕಾಂತ್, ಡಿ.ವೈ.ಎಸ್.ಪಿ ರಾಜ್ಯ ಗುಪ್ತ ವಾರ್ತೆ, ಮಂಗಳೂರು, ಸದಾಶಿವ ರಾವ್ .ಕೆ. ನಿವೃತ್ತ ಎ.ಎಸ್.ಐ ಕಾರ್ಕಳ, ಕೆ. ದಿನೇಶ್ ರಾವ್, ಉದ್ಯಮಿಗಳು, ಎಲ್ಕೋ ಮತ್ತು ಕ್ಯಾಡ್ ಸಂಸ್ಥೆ, ಮಂಗಳೂರು ಹಾಗೂ ಮಾಜಿ ಅಧ್ಯಕ್ಷರು, ರಾಮಕ್ಷತ್ರಿಯ ಸಂಘ(ರಿ)ಮಂಗಳೂರು,




ಶಕುಂತಳಾ ರಾವ್ ಮಾಜಿ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ನೀರೆ, ಮತ್ತು ಆದರ್ಶ್.ವಿ.ರಾವ್, ಸಾಪ್ಟ್ ವೇರ್, ಇಂಜಿನಿಯರ್, ಬೆಂಗಳೂರು ಭಾಗವಹಿಸಿದ್ದರು.
ಪಾರ್ಥಸಾರಥಿ, ಅಧ್ಯಕ್ಷರು ಶ್ರೀರಾಮ ಚಾರಿಟೇಬಲ್ ಟ್ರಸ್ಟ್(ರಿ)ಕಾರ್ಕಳ ಹಾಗೂ ಗೌರವಾಧ್ಯಕ್ಷರು, ರಾಮಕ್ಷತ್ರಿಯ ಸಂಘ(ರಿ)ಕಾರ್ಕಳ, ಪ್ರಸನ್ನ ಕೆ.ಬಿ, ಗೌರವಾಧ್ಯಕ್ಷರು ರಾಮಕ್ಷತ್ರಿಯ ಸಂಘ(ರಿ)ಕಾರ್ಕಳ ಮತ್ತು
ಸುಕೇಶ್. ಎನ್.ರಾವ್ ಬೈಲೂರು, ಸಾಂಸ್ಕೃತಿಕ ಕಾರ್ಯದರ್ಶಿ, ರಾಮಕ್ಷತ್ರಿಯ ಸಂಘ(ರಿ)ಕಾರ್ಕಳ ಇವರು ಗೌರವ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 2023-24 ಸಾಲಿನ ವಾರ್ಷಿಕ ಪರೀಕ್ಷೆಯ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ 85 ಶೇಕಡ ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದ ರಾಮಕ್ಷತ್ರಿಯ ಸಮಾಜದ ಒಟ್ಟು 22 ವಿದ್ಯಾರ್ಥಿಗಳನ್ನು ಸಮಾರಂಭದ ಅತಿಥಿಗಳು ಹಾಗೂ ಅಧ್ಯಕ್ಷರು ಅಭಿನಂದಿಸಿದರು.
ದಿವಂಗತ ಶ್ರೀನಿವಾಸ್ ರಾವ್ ಹೊಸಂಗಡಿ ಇವರ ಸ್ಮರಣಾರ್ಥ ಅವರ ಧರ್ಮಪತ್ನಿ ಶಕುಂತಲಾ. ಎಸ್. ರಾವ್ ನೀರೆ ಬೈಲೂರು ಮತ್ತು ಮಕ್ಕಳು ಬೆಂಗಳೂರು ಇವರು ಕೊಡಮಾಡಿದ ರಾಮಕ್ಷತ್ರಿಯ ಸಮಾಜದ 02 ಬಡ ವಿದ್ಯಾರ್ಥಿಗಳಿಗೆ ಶಕುಂತಳಾ ಎಸ್.ರಾವ್ ಹಾಗೂ ದಿ.ವಿಜೇಂದ್ರ ರಾವ್ ಅಜೆಕಾರ್ ಅವರ ಸ್ಮರಣಾರ್ಥ ಅವರ ಮಗ ಆದರ್ಶ.ವಿ.ರಾವ್ ಅವರು ಕೊಡಮಾಡಿದ 03 ವಿದ್ಯಾರ್ಥಿಗಳಿಗೆ ಆದರ್ಶ.ವಿ.ರಾವ್ ಬೆಂಗಳೂರು ವಿದ್ಯಾನಿಧಿಯನ್ನು ವಿತರಿಸಿದರು.ಪ್ರಸ್ತುತ ಪೆರ್ಡೂರು ಮೇಳದ ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರು,.
ಕಂಬಳ ಕೋಣಗಳ ಯಜಮಾನರಾದ ಉಮೇಶ್ ರಾವ್ ಹಿತ್ತಲು ಮನೆ ಅಂಡಾರು ಹಾಗೂ ಶಿರ್ಲಾಲು ಕುಕ್ಕುಜೆ ತ್ರಿಶಾ ಸಂಜೀವ ಸೇರ್ವೆಗಾರ್ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಸಂತೋಷ್ ಸೇರ್ವೆಗಾರ್ ರವರನ್ನು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ, ಫಲವಸ್ತು ಹಾಗೂ ಸನ್ಮಾನ ಪತ್ರಗಳನ್ನಿತ್ತು ಗೌರವದಿಂದ ಸನ್ಮಾನಿಸಲಾಯಿತು.
ಸನ್ಮಾನಿತರ ಅಭಿನಂದನಾ ನುಡಿಗಳನ್ನು ಬಾಲಕೃಷ್ಣ.ಜಿ., ಜ್ಯೋತಿ.ಬಿ.ಎಸ್. ಮತ್ತು ಪ್ರಮೋದ್ ನಾಯ್ಕ್ ಹಾಗೂ ಸನ್ಮಾನ ಪತ್ರವನ್ನು ಮಾನ್ಯ ರಾವ್, ಸಂಧ್ಯಾ ಮಹೇಶ್ ರಾವ್ ದುರ್ಗಾ ಮತ್ತು ಡಾ.ಸುಮ ಬೈಲೂರು ಕ್ರಮವಾಗಿ ವಾಚಿಸಿದರು.
ಮಕ್ಕಳಾದ ತನ್ವಿ ರಾವ್, ಧನ್ಯಾ.ಪಿ.ರಾವ್, ಧೃತಿ ರಾವ್ ಹಾಗೂ ಧನ್ಯಾ.ಕೆ.ರಾವ್ ಪ್ರಾರ್ಥನೆಗೈದರು.
ಅಂಬಾ ಪ್ರಸಾದ್ ಸ್ವಾಗತಿಸಿದರು. ಸುಕೇಶ್.ಎನ್.ರಾವ್ ಬೈಲೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರವೀಣ್.ಕೆ ವರದಿ ವಾಚಿಸಿದರು. ಮಹೇಶ್ ರಾವ್ ಬೈಲೂರು ವಂದಿಸಿದರು.



ಸಂಜಯ ಕುಮಾರ್ ಮತ್ತು ಸಾವಿತ್ರಿ ಮುಡಾರು ನಿರೂಪಿಸಿದರು.



ಸಮಾಜದ ಹಿರಿಯ-ಕಿರಿಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳ ಜೊತೆಗೆ ವಿಘ್ನೇಶ್ ರಾವ್ ಜೋಡುರಸ್ತೆ ಯವರಿಂದ ಕೊಳಲು ವಾದನ ಮತ್ತು ಶ್ರೀಹರಿ ಜೋಡುರಸ್ತೆ ಅವರಿಂದ ಹಾರ್ಮೋನಿಯಂ ವಾದನ ಕಾರ್ಯಕ್ರಮ ನಡೆಯಿತು.
ಮಲ್ಲಿಕಾ ರಾವ್ ಮತ್ತು ವಿಜೇತ ರಾಣಿ ಅಂಡಾರು ಸಾಂಸ್ಕೃತಿಕ ನಿರೂಪಿಸಿದರು.































