ರಾಜ್ಯಮಟ್ಟದ ರಾಂಕ್ ವಿಜೇತರ ಸನ್ಮಾನ, ವಾರ್ಷಿಕ ಮಹಾಸಭೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ
ಮೂಡುಬಿದಿರೆ: ಸ್ಥಳೀಯ ಶ್ರೀ ಆದಿಶಂಕರ ಸ್ಥಾನಿಕ ಬ್ರಾಹ್ಮಣ ಪರಿಷತ್ತಿನ ವಾರ್ಷಿಕ ಮಹಾಸಭೆ ಜುಲೈ 28ರಂದು ಕಡಲಕೆರೆ ಪ್ರೀತಮ್ ಗಾರ್ಡನ್ ಹಾಲ್ ನಲ್ಲಿ ಜರುಗಿತು.


ಇದೇ ಸಂದರ್ಭದಲ್ಲಿ ದ್ವಿತೀಯ ಪಿಯು ಸಿ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಎಂಟನೇ ರಾಂಕ್ ಅನ್ನು ಪಡೆದ ಕು. ಶ್ರೀಜಾ ಹೆಬ್ಬಾರ್ ಹಾಗೂ ಎಸ್ ಎಸ್ ಎಲ್ ಸಿ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಎಂಟನೇ ರಾಂಕ್ ಅನ್ನು ಪಡೆದ ಕು. ವೈಷ್ಣವಿ ರಾವ್ ರನ್ನು ಸನ್ಮಾನಿಸಲಾಯಿತು. ಸಮಾಜದ ಹಿರಿಯರಾದ ನಿವೃತ್ತ ಕೈಗಾರಿಕಾ ಉದ್ಯಮಿ ಲಾಡಿ ಸುರೇಶ್ ಕುಮಾರ್ ರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅಡಿಕೆ ಉದ್ಯಮಿ ವಸಂತ ಭಟ್ ನಾರಾವಿ, ಉಡುಪಿ ಸ್ಥಾನಿಕ ಬ್ರಾಹ್ಮಣ ಸಂಘ ಹಾಗೂ ಮಹಾಮಂಡಲದ ಅಧ್ಯಕ್ಷ ಮಂಜುನಾಥ ಹೆಬ್ಬಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಜಿಲ್ಲಾ ಸಂಚಾಲಕಿ ಶಾಂತ ಗಣೇಶ ರಾವ್ ಕುಂಭಾಶಿ, ಕಬ್ಬಿನಾಲೆ ಹೆಬ್ಬಾರ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ ಸೀತಾರಾಮ ಹೆಬ್ಬಾರ್, ಸುರತ್ಕಲ್ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಬೆಂಗಳೂರು ಆಲಮರ ಫೌಂಡೇಶನ್ ನ ಸ್ಥಾಪಕ ನಿರ್ದೇಶಕ ಅಧ್ಯಕ್ಷ ಕಟೀಲು ಪ್ರಭಾಕರಾವ್ ಹಾಜರಿದ್ದರು. ಪರಿಷತ್ತಿನ ಅಧ್ಯಕ್ಷ ಎಂ ದೇವಾನಂದ ಭಟ್ ಸ್ವಾಗತಿಸಿದರು, ಜಯರಾಮ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಗೌರವಾಧ್ಯಕ್ಷ ಚಂದ್ರಶೇಖರ್ ರಾವ್ ಬೊಕ್ಕಸ ವಂದಿಸಿದರು.
ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಬಹುಮಾನಿತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಧ್ಯಾಹ್ನ ಆಟಿಯ ವಿಶೇಷ ಖಾದ್ಯಗಳ ಭೋಜನ ನಡೆಯಿತು. ತರುವಾಯ ಕದಂಬ ಕೌಶಿಕೆ ಯಕ್ಷಗಾನ ಪ್ರದರ್ಶನ ನಡೆಯಿತು.
ಫೋಟೋ: ಶ್ರೀರಾಜ್ ಬೆಳುವಾಯಿ.
ವರದಿ : ರಾಯಿ ರಾಜಕುಮಾರ್ ಮೂಡುಬಿದಿರೆ.





































