







6 ಮಂದಿ ನಕ್ಸಲೀಯರ ಶರಣಾಗತಿಗೆ ಕ್ಷಣಗಣನೆ


ಕಾರ್ಕಳ : ಎರಡು ದಶಕಗಳಿಂದ ಮಲೆನಾಡು, ಪಶ್ವಿಮಘಟ್ಟ ಹಾಗೂ ಕರಾವಳಿ ಭಾಗಗಳಲ್ಲಿ ಬೇರೂರಿದ ನಕ್ಸಲೀಯರ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ. ಪೊಲೀಸರ ಹಿಟ್ಲಿಸ್ಟ್ನಲ್ಲಿ ಗುರುತಿಸಿಕೊಂಡಿರುವ ಆರು ಮಂದಿ ನಕ್ಸಲೀಯರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಗೆ ಒಲವು ತೋರಿದ್ದಾರೆ. ಪುನರ್ವಸತಿ ಸಮಿತಿ ಹಾಗೂ ನಾಗರಿಕ ವೇದಿಕೆ ಸದಸ್ಯರ ಮಧ್ಯಸ್ಥಿಕೆಯಲ್ಲಿ ಬುಧವಾರದಂದು ಈ ಬೆಳವಣಿಗೆ ನಡೆಯಲಿರುವುದು ಖಚಿತಗೊಂಡಿದೆ.

ನವಂಬರ್ 18ರಂದು ವಿಕ್ರಂ ಗೌಡ ಎನ್ಕೌಂಟರ್ಗೆ ಬಲಿಯಾದ ಬಳಿಕ ಬೆರಳೆಣಿಗೆಯ ಸಂಖ್ಯೆಯಲ್ಲಿ ಇದ್ದ ನಕ್ಸಲೀಯ ತಂಡ ಅದಾಗಿದೆ. ಈ ತಂಡದ ನಕ್ಸಲ್ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ಬೆಳ್ತಂಗಡಿ ನಾರಾವಿಯ ಕುತ್ಲೂರಿನ ಸುಂದರಿ ಕುತ್ಲೂರು, ಬಾಳೆಹೊಳೆ ವನಜಾಕ್ಷಿ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಒಪ್ಪಿಗೆ ಸೂಚಿಸಿದ್ದಾರೆ.
ಜ. 4 ರಂದು ರಹಸ್ಯ ಸ್ಥಳದಲ್ಲಿ ನಕ್ಸಲ್ ಶರಣಾಗತಿ/ ಪುರ್ವಾಸತಿ ಸಮಿತಿಯ 8 ಸದಸ್ಯರು ಮತ್ತು ನಕ್ಸಲರ ಸಭೆ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಎಲ್ಲಾ ಬೆಳವಣಿಗೆಯ ಬಳಿಕ ಜನವರಿ 8ರಂದು ಶರಣಾಗತಿ ಮುಂದಾಗಿದ್ದು, ಇಷ್ಟೊಂದು ಸಂಖ್ಯೆಯಲ್ಲಿ ಏಕಾಕಾಲದಲ್ಲಿ ನಕ್ಸಲೀಯರು ಶರಣಾಗತಿಯಾಗುವುದು ಚಿಕ್ಕಮಗಳೂರಿಗೆ ಐತಿಹ್ಯವಾಗಲಿದೆ.
ಆ ಮೂಲಕ ಪೊಲೀಸ್ ಇಲಾಖೆಯಲ್ಲಿ 6 ಮಂದಿ ನಕ್ಸಲೀಯರ ಮೇಲಿರುವ ಎಲ್ಪಿಸಿ ವಾರೆಂಟ್ಗೆ ಮುಕ್ತಿ ದೊರಕಲಿದೆ. ಚಿಕ್ಕಮಗಳೂರು ಜಿಲ್ಲೆ ಬುಕಡಿಬೈಲಿನ ಮುಂಡಗಾರು ಲತಾ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕುತ್ತೂರಿನ ಸುಂದರಿಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನವನ್ನು ರ್ಕಾನರ ಈ ಹಿಂದೆಯೇ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೇಳಿಕೆ ನೀಡಿ ನಕ್ಸಲೀಸಂಗೆ ತಿಲಾಂಜಲಿ ನೀಡಿ ಮುಖ್ಯವಾಹಿತಿನಿ ಬರುವಂತೆ ಹಾಗೂ ಕಾನೂನು ಅಡಿಯಲ್ಲಿ ಸಹಕಾರ ಸರಕಾರ ಬದ್ಧವಾಗಿದೆ ಎಂದು ತಿಳಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ನಕ್ಸಲೀಯರ ಶರಣಾಗತಿ ಒಲವು ತೋರುತ್ತಿರುವುದು ಮಹತ್ವ ಪಡೆದಿದೆ.
ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ಗೆ ಬಲಿ
ಕಾರ್ಕಳ: ಹೆಬ್ರಿ ಸಮೀಪದ ಕಬ್ಬನಾಲೆಯ ಪೀತುಬೈಲ್ನಲ್ಲಿ ನವಂಬರ್ 18ರಂದು ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್ಕೌಂಟರ್ಗೆ ಮೋಸ್ಟ್ ವಾಂಟೆಡ್ ವಿಕ್ರಂ ಗೌಡ ಬಲಿಯಾಗಿದ್ದನು. ಅದೇ ಸಂದರ್ಭದಲ್ಲಿ ಆತನೊಂದಿಗೆ ಇದ್ದ ತಂಡದ ಸದಸ್ಯರು ಮುಂಡಗಾರು ಲತಾ, ಬೆಳ್ತಂಗಡಿ ನಾರಾವಿಯ ಕುತ್ಲೂರಿನ ಸುಂದರಿ ಕುತ್ಲೂರು, ಬಾಳೆಹೊಳೆ ವನಜಾಕ್ಷಿ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಎಂದು ತಿಳಿದುಬಂದಿದೆ.
ಈದುನಲ್ಲಿ ನಕ್ಸಲೀಯರ ಹೆಜ್ಜೆಗುರುತು!
ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ನವಂಬರ್ ಮೊದಲವಾರದಂದು ನಕ್ಸಲೀಯರು ಕಾಣಿಸಿಕೊಂಡಿದ್ದರು. ಈದು ಗ್ರಾಮದಲ್ಲಿ ಕಾಡುತ್ಪತ್ತಿ ಸಂಗ್ರಹಿಸಿಲು ತೆರಳಿದ ಯುವನೊಬ್ಬನಿಗೆ ನಕ್ಸಲೀಯರ ತಂಡ ಎದುರುಗೊಂಡಿದ್ದು, ನಾವು ಅಗಮಿಸಿರುವ ವಿಚಾರ ಬಹಿರಂಗ ಪಡಿಸಬಾರದೆಂಬ ತಾಕೀತು ಮಾಡಿದ್ದರು. ಈ ಕುರಿತು ಮಾಧ್ಯಮವೊಂದು ವರದಿ ಪ್ರಕಟಿಸಿದ ಬಳಿಕ ಎತ್ತೆತ್ತುಕೊಂಡ ಪೊಲೀಸ್ ಇಲಾಖೆಗೆ ಘಟನಾ ಸ್ಥಳಕ್ಕೆ ತೆರಳಿ ಗ್ರಾಮಸ್ಥರಲ್ಲಿ ಮಾಹಿತಿಗೂ ಮುಂದಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಆ ವಿಚಾರದ ಕುರಿತು ಇಲಾಖೆಯೂ ಕೇವಲ ಊಹಾಪೋಹವೆಂದು ಬಣ್ಣಿಸಿತ್ತು.
ರಾಜ್ಯಗುಪ್ತಚರ ಇಲಾಖೆಯೂ ಈ ಕುರಿತು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಇರುವುದರನ್ನು ದೃಢಪಡಿಸಿತ್ತು.
ಇದಾದ ಕೆಲವೇ ದಿನಗಳೊಳಗಾಗಿ ಧರ್ಮಸ್ಥಳ ಪರಿಸರದಲ್ಲಿ ಶಂಕಿತ ನಕ್ಸಲೀಯರನ್ನು ವಶಕ್ಕೆ ತೆಗೆದು ಹೆಚ್ಚಿನ ವಿಚಾರಣೆಗಾಗಿ ಶೃಂಗೇರಿ ಗೆ ಕರೆದೊಯ್ದರು. ಆ ಸಂದರ್ಭದಲ್ಲಿ ಮನೆಯೊಂದರಲ್ಲಿ ಇದ್ದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಇದ್ದ ಮುಂಡಗೋಡು ಲತಾ ಹಾಗೂ ಇತರರು ಪರಾರಿಯಾಗಿದ್ದರು. ಅವರಲ್ಲಿ ಇದ್ದ ಶಸ್ತ್ರಾಸ್ತ್ರ ಗಳನ್ನು ಪೊಲೀಸರು ವಶಪಡಿಸಿದ್ದರು.
ಕಾರ್ಯಚರಣೆ ಚುರುಕುಗೊಳಿಸಿದ ಪೊಲೀಸರು ನಕ್ಸಲ್ ವಿರುದ್ಧ ಕಾರ್ಯಚರಣೆಗಾಗಿ ಬೆಂಗಳೂರಿನಿಂದ 75, ಶಿವಮೊಗ್ಗದಿಂದ 25 ಮಂದಿ ವಿಶೇಷ ತರಬೇತಿ ಪಡೆದ ಪೊಲೀಸರ ತಂಡವೇ ಕಾರ್ಕಳಕ್ಕೆ ಅಗಮಿಸಿತು.
ಆ ತಂಡ ಹೆಬ್ರಿ ಕಬ್ಬಿನಾಲೆಗೆ ಭೇಟಿ ನೀಡಿದೆ. ಅದೇ ಸಂದರ್ಭದಲ್ಲಿ ವಿಕ್ರಂ ಗೌಡ ಹಾಗೂ ಇತರರು ಆ ಪ್ರದೇಶದಲ್ಲಿ ಇರುವುದನ್ನು ದೃಢಪಡಿಸಿಸದ್ದಾರೆ. ಖಚಿತ ಮಾಹಿತಿಯನ್ವಯ ಪೀತುಬೈಲು ಮನೆಯೊಂದಕ್ಕೆ ದಿನಬಳಕೆ ಆಹಾರ ಸಂಗ್ರಹಿಸಲು ಬಂದಿದ್ದರು. ಮುಂಚೂಣಿಯಲ್ಲಿ ಇದ್ದ ವಿಕ್ರಂ ಗೌಡನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಇತ್ತ ನಕ್ಸಲೀಯರು ಫೈರಿಂಗ್ ನಡೆದಿದೆ. ಇತ್ತಂಡಗಳ ನಡುವೆ ಗುಂಡಿನ ಚಕಮುಕಿಯಾಗಿತ್ತಿದ್ದಂತೆ ನೆಲಕ್ಕೆ ಉರುಳಿ ಬಿದ್ದ ವಿಕ್ರಂ ಗೌಡನ ಪ್ರಾಣಪಕ್ಷಿ ಹಾರಿ ಹೋಗಿದೆ. ಆತನೊಂದಿಗೆ ಇದ್ದ ಇತರ ನಕ್ಸಲೀಯರು ಓಡಿ ಪರಾರಿಯಾಗಿದ್ದಾರೆ.
ವಿಕ್ರಂ ನ ಮೇಲೆಷ್ಟು ಕೇಸುಗಳು?
ಪೊಲೀಸ್ ಹಿಟ್ ಲಿಸ್ಟ್ ಲಿಸ್ಟ್ ನಲ್ಲಿ ಇದ್ದ ವಿಕ್ರಂ ಗೌಡನ ವಿರುದ್ಧ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ 61 ಕೇಸು ಇದೆ. 15 ಕೇಸುಗಳು ಕೇರಳದಲ್ಲಿ ಇದೆ. ನವಂಬರ್ 10ರಿಂದ ಕೂಂಬಿಂಗ್ ಕಾರ್ಯಚರಣೆ ಆರಂಭಿಸಲಾಗಿದೆ. ಕಾರ್ಕಳದಲ್ಲಿ ನಕ್ಸಲ್ ನಿಗ್ರಹ ದಳ ಕಾರ್ಯಚರಿಸುತ್ತಿದ್ದರೂ ಎನ್ಕೌಂಟರ್ ಕಾರ್ಯಚರಣೆಯ ಸಂದರ್ಭದಲ್ಲಿ ಬೆಂಗಳೂರು ಹಾಗೂ ಶಿವಮೊಗ್ಗದಿಂದ ವಿಶೇಷ ಪರಿಣಿತ ಪೊಲೀಸರು ಅಗಮಿಸಿರುವುದು ಗಮನಾರ್ಹವಾಗಿದೆ.
ಹೆಬ್ರಿ ಮೂಲದ ವಿಕ್ರಂ ಗೌಡ 21ರ ಹರೆಯದಲ್ಲಿಯೇ ನಕ್ಸಲೀಯರ ತಂಡಕ್ಕೆ ಸೇರ್ಪಡೆಗೊಂಡಿದ್ದನು. ಆ ವೇಳೆಗೆ ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ತಲತಲಾಂತರ ವರ್ಷಗಳಿಂದ ಜೀವನ ಸಾಗಿಸುತ್ತಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನದಲ್ಲಿ ಸರಕಾರದ ಮುಂದಾಗಿತ್ತು. ಅದನ್ನು ವಿರೋಧಿಸಿ ನಡೆಯುತ್ತಿದ್ದ ಹೋರಾಟದಲ್ಲಿ ವಿಕ್ರಂ ಗೌಡ ಸಕ್ರಿಯಾನಾಗಿದ್ದನು. ಆ ದಿನಗಳಲ್ಲಿ ಈದು ಗ್ರಾಮದ ಬೊಲ್ಯೋಟ್ಟು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ 2003 ನವಂಬರ್ 17ರಂದು ಅಂದಿನ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ಹಾಗೂ ಇನ್ಸ್ಪೆಕ್ಟರ್ ಅಶೋಕನ್ ನಡೆಸಿದ ಎನ್ಕೌಂಟರ್ ಗೆ ಹಾಜಿಮ್ಮ ಹಾಗೂ ಪಾರ್ವತಿ ಬಲಿಯಾದರೆ ಯಶೋಧ ಕೂದಲೆಳೆಯ ಅಂತರದಲ್ಲಿ ಬದುಕಿ ಉಳಿದಿದ್ದಳು.
ಕಬಿನಿ ದಳಂ 2ನೇ ತಂಡಕ್ಕೆ ವಿಕ್ರಂ ನಾಯಕ

ನಾಲ್ಕನೇ ತರಗತಿ ವಿದ್ಯಾಭ್ಯಾಸ ಪೊರೈಸಿದ ವಿಕ್ರಂ ಕಬಿನಿ ದಳಂ 2 ನೇ ತಂಡದ ನಾಯಕನಾಗಿ ಹೊರಹೊಮ್ಮಿರಿವುದು ಸಾಂಕೇತ್ ರಾಜು ಹಾಗೂ ನೀಲಗುಳಿ ಪದ್ಮನಾಭ ಎನ್ಕೌಂಟರ್ ಹಾಗೂ ಕೃಷ್ಣಮೂರ್ತಿ ಸೇರಿದಂತೆ ಪ್ರಮುಖ ನಕ್ಸಲೀಯರು ಶರಣಾಗತಿಯ ಬಳಿಕ. ನಕ್ಸಲೀಯರನ್ನು ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನವನ್ನು ಅಂದು ಪತ್ರಕರ್ತೆ ಗೌರಿ ಲಂಕೇಶ್ ಸಹಿತ ಸಮಾಜಿಕ ಹೋರಾಟಗಾರರು ಮಾಡಿದ್ದರು. ಅದರ ಫಲವಾಗಿ ಅಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಮ್ಮುಖದಲ್ಲಿ ಹಲವು ಹಿರಿಯ ನಕ್ಸಲ್ ವಾದಿಗಳು ಶರಣಾಗತಿಯಾಗುವ ಮೂಲಕ ಮುಖ್ಯ ವಾಹಿನಿ ಸೇರ್ಪಡೆಗೊಂಡಿದ್ದರು.
ಆ ಸಂದರ್ಭದಲ್ಲಿ ಶರಣಾಗತಿಗೆ ಒಲವು ತೋರದ ವಿಕ್ರಂ ಗೌಡ ಕಬಿನಿ ದಳಂ 2ನೇ ತಂಡದ ನಾಯಕನಾಗಿ ಕೇರಳದ ವಯನಾಡು ದಟ್ಟರಣ್ಯ ಪ್ರದೇಶದಲ್ಲಿ ಕಾರ್ಯಚರಣೆ ನಡೆಸಿಕೊಂಡಿದ್ದನು. ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳ ಸಂಪರ್ಕಕ್ಕೆ ತೀರಾ ಸಮೀಪವಾದ ಜಿಲ್ಲೆ ವಯನಾಡು ಆಗಿದೆ.
ಕೇರಳ ಸರಕಾರವು ನಕ್ಸಲೀಯರ ವಿರುದ್ಧ ಭಾರೀ ಕಾರ್ಯಚರಣೆ ನಡೆಸಿ ಹಲವು ಭಾರೀ ಎನ್ಕೌಂಟರ್ ನಡೆಸಿತು. ಮತ್ತೊಂದೆಡೆಯಲ್ಲಿ ವಯನಾಡು ಲೋಕಸಭಾ ಉಪ ಚುನಾವಣೆ ಭದ್ರತಾ ವ್ಯವಸ್ಥೆ ಮತ್ತಷ್ಟು ಬಿಗುಗೊಳಿಸಿದ ಹಿನ್ನಲ್ಲೆಯಲ್ಲಿ ವಿಕ್ರಂ ಗೌಡ ಹಾಗೂ ಆತನ ಸಹಚರರು ಮತ್ತೆ ಕಾರ್ಕಳ ಕಡೆಗೆ ಮುಖ ಮಾಡಿದ್ದರು.
ಹತ ನಕ್ಸಲ್ ನಾಯಕ ನಾಡ್ಪಾಲಿನ ಕೂಡ್ಲು ನಿವಾಸಿ :
ನಕ್ಸಲ್ ನಿಗ್ರಹ ಪಡೆಯ ಯೋಧರ ಗುಂಡಿಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೊಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ಆಗಿದ್ದನು
……………………………………
ನಕ್ಸಲರ ಹೆಜ್ಜೆ ಗುರುತುಗಳು
ಪಶ್ಚಿಮ ಘಟ್ಟದ ದಟ್ಟ ಹಸಿರಿನ ಕಾನನದ ನಡುವೆ ಕೆಂಪು ನೆತ್ತರಿನ ಕಲೆಗಳು ಕಾಣಿಸಿಕೊಳ್ಳಲಾರಂಭಿಸಿ ಈಗಾಗಲೇ ೨೨ ವರ್ಷಗಳು ಸಂದಿವೆ.
೨೦೦೨ರಲ್ಲಿ ಕೊಪ್ಪ ತಾಲೂಕಿನ ಮೆಣಸಿನಹಾಡ್ಯದಲ್ಲಿ ನಕ್ಸಲರ ಮೊದಲ ಹೆಜ್ಜೆ ಗುರುತುಗಳು ಕಾಣಿಸಿಕೊಂಡ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯೂ ನಕ್ಸಲ್ ಬಾಧಿತ ಪ್ರದೇಶಗಳ ಪ್ರದೇಶಗಳಲ್ಲಿ ಒಂದಾಗಿ ರಾಜ್ಯ ಭೂಪಟದಲ್ಲಿ ಗುರುತಿಸಿಕೊಂಡಿದೆ.
ಇದುವರೆಗೆ ಜಿಲ್ಲೆಯಲ್ಲಿ ಹಾಗೂ ಪಶ್ಚಿಮಘಟ್ಟ ಪಸರಿಸಿರುವ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಕ್ಸಲರು ಮತ್ತು ಪೊಲೀಸರು-ಎಎನ್ಎಫ್ ಮುಖಾಮುಖಿಯಲ್ಲಿ ಒಟ್ಟು ೨೪ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ೧೨ ಮಂದಿ ನಕ್ಸಲರು, ೯ ಮಂದಿ ನಾಗರಿಕರು ಹಾಗೂ ಮೂವರು ಪೊಲೀಸರು ಸೇರಿದ್ದಾರೆ.
೨೦೦೨ ನವೆಂಬರ್ ೬:- ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ದಟ್ಟಅರಣ್ಯ ಪ್ರದೇಶದಲ್ಲಿ ತರಬೇತಿ ನಿರತರಾಗಿದ್ದ ನಕ್ಸಲರ ಬಂದೂಕಿನಿಂದ ಸಿಡಿದ ಗುಂಡು ಕಾಡಿಗೆ ಬಂದಿದ್ದ ಅದೇ ಗ್ರಾಮದ ವೃದ್ಧೆ ಚೀರಮ್ಮನ ಕಾಲಿಗೆ ತಾಗಿ ಆಕೆ ಗಾಯಗೊಂಡಿದ್ದರು. ಆಗ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ನಕ್ಸಲೀಯರ ಚಟುವಟಿಕೆಗಳು ಮೊದಲ ಬಾರಿ ಹೊರಜಗತ್ತಿಗೆ ಗೊತ್ತಾಯಿತು.
೨೦೦೩ ಆ.೬:- ಕುದುರೆಮುಖ ಸಮೀಪದ ಸಿಂಗ್ಲಾರ ಎಂಬಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ಮೊದಲ ಬಾರಿ ಗುಂಡಿನ ಚಕಮಕಿ ನಡೆದಿತ್ತು.
೨೦೦೩ ನವೆಂಬರ್ ೧೭ರಂದು ಮುಂಜಾನೆ ಕಾರ್ಕಳ ತಾಲೂಕು ಈದುವಿನ ಬಲ್ಯೊಟ್ಟುನಲ್ಲಿ ರಾಮಪ್ಪ ಪೂಜಾರಿ ಮನೆಯಲ್ಲಿ ಮೊದಲ ಬಾರಿ ಪೊಲೀಸ್ ಮತ್ತು ನಕ್ಸಲರ ನಡುವಿನ ಮುಖಾಮುಖಿಯಲ್ಲಿ ಹಾಜಿಮ್ಮ ಹಾಗೂ ಪಾರ್ವತಿ ಪೊಲೀಸರ ಗುಂಡಿಗೆ ಬಲಿಯಾದರು. ಯಶೋಧಾ ಕೂದಲೆಳೆಯ ಅಂತರದಲ್ಲಿ ಬದುಕಿ ಉಳಿದಿದ್ದು, ಈಗಾಗಲೇ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾಳೆ.

ಈದು ಎನ್ ಕೌಂಟರ್ ಇದೇ ಮನೆಯಲ್ಲಿ ನಡೆದಿರುವುದು. ಮನೆ ಬಹುತೇಕ ಹಾನಿಗೊಳಗಾಗಿದ್ದರೂ ಇದುವರೆಗೆ ಪರಿಹಾರ ದೊರೆತ್ತಿಲ್ಲ. ಸರಕಾರದ ಭರವಸೆ ಗಗನ ಕುಸುಮವಾಗಿ ಉಳಿದಿದೆ.
೨೦೦೩ ಡಿಸೆಂಬರ್ ೨೯:- ಶೃಂಗೇರಿ ತಾಲೂಕಿನ ನೆಮಾರು ಅರಣ್ಯ ಪ್ರವಾಸಿ ಮಂದಿರಕ್ಕೆ ನಕ್ಸಲರು ಬೆಂಕಿ ಹಚ್ಚಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿದರು. ೨೦೦೪ರ ಅಕ್ಟೋಬರ್ ೭ರಂದು ಶೃಂಗೇರಿ ತಾಲೂಕು ಕಿಗ್ಗ ಬಳಿಯ ಮಗಬೈಲು ಎಂಬಲ್ಲಿ ಚಂದ್ರಶೇಖರ ಮನೆಯಲ್ಲಿ ಕಾವಲಿಗಿದ್ದ ಪೊಲೀಸ್ ಕಾನ್ಸ್ಟೇಬಲ್ ಮುದ್ದಪ್ಪರನ್ನು ಅಪಹರಿಸಿ, ಅವರ ಎಸ್ಎಲ್ಆರ್ ಬಂದೂಕು ಕಸಿದುಕೊಂಡು ಬಿಡುಗಡೆ ಮಾಡಿದರು. ೨೦೦೪ರ ಅಕ್ಟೋಬರ್ ೨೧ ರಾದು ಪೊಲೀಸರ ಮಾಹಿತಿದಾರನೆಂಬ ಸಂಶಯದ ಮೇಲೆ ನಕ್ಸಲರು ಬುಕಡಿಬೈಲಿನ ಸಮೀಪದ ಹೆಮ್ಮಿಗೆಯ ಕೃಷಿಕ ಚಂದ್ರಕಾಂತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎಚ್ಚರಿಕೆ ನೀಡಿದ್ದರು.
೨೦೦೫ ಜನವರಿ ೨೯:- ಶೃಂಗೇರಿ ತಾಲೂಕಿನ ಕಿಗ್ಗ ಸಮೀಪದ ಅರಣ್ಯ ಇಲಾಖೆ ಶಿಕಾರಿ ನಿಗ್ರಹ ದಳ ಬಿಡಾರದ ಮೇಲೆ ನಕ್ಸಲರಿಂದ ದಾಳಿ, ಬಿಡಾರ ದ್ವಂಸ ಮಾಡಿದ್ದರು. ೨೦೦೫ ಫೆ.೬ರಂದು ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಬಲಿಗೆಗುಡ್ಡದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಪೊಲೀಸರ ಗುಂಡಿಗೆ ನಕ್ಸಲ್ ಮುಖಂಡ ಸಾಕೇತರಾಜನ್ ಹಾಗೂ ಆತನ ಸಹಚರ ಶಿವಲಿಂಗು ಬಲಿಯಾಗಿದ್ದರು.
೨೦೦೫ ಮೇ ೧೭:- ಪೊಲೀಸರ ಮಾಹಿತಿದಾರನಾಗಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ನಕ್ಸಲರಿಂದ ಮೆಣಸಿನಹಾಡ್ಯದ ಗಿರಿಜನ ಮುಖಂಡ ಶೇಷಯ್ಯರ ಅಮಾನುಷ ಹತ್ಯೆ ಮಾಡಿದ್ದರು. ೨೦೦೫ರ ಜೂನ್ ೨೩ ರಂದು ಕುಂದಾಪುರ ತಾಲೂಕು ಹಳ್ಳಿಹೊಳೆ ಸಮೀಪದ ದೇವರಬಾಳು ಎಂಬಲ್ಲಿ ನಡೆದ ಎನ್ಕೌಂಟರ್ ನಲ್ಲಿ ಪೊಲೀಸರ ಗುಂಡಿಗೆ ಬೆಳಗಾವಿಯ ಅಜಿತ್ ಕುಸುಬಿ ಮತ್ತು ಉಮೇಶ್ ಬಣಕಲ್ ಎಂಬ ನಕ್ಸಲ್ ಯುವಕರು ಬಲಿಯಾಗಿದ್ದರು. ಇದಕ್ಕೆ ಪ್ರತಿಯಾಗಿ ನಕ್ಸಲರು ಹೆಬ್ರಿ ಬಳಿಯ ಮತ್ತಾವು ಎಂಬಲ್ಲಿ ಪೊಲೀಸರ ಜೀಪಿನ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಿ ೭ ಮಂದಿ ಪೊಲೀಸರನ್ನು ಗಾಯಗೊಳಿಸಿದರು.
೨೦೦೬ ಆ.೨೩:- ಶೃಂಗೇರಿಯ ಕೆರೆಕಟ್ಟೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಚೇರಿ ಮೇಲೆ ನಕ್ಸಲ್ ದಾಳಿ. ಕೆಲದಿನದ ಬಳಿಕ ರ್ಕಳ ಮುನಿಯಾಲು ಮುಟ್ಲುಪಾಡಿಯಲ್ಲಿ ಸದಾನಂದ ಶೆಟ್ಟಿ ಅವರ ಬೈಕ್ ಗೆ ಬೆಂಕಿ ಇಟ್ಟು ನಕ್ಸಲರು ಬೆದರಿಕೆ ಹಾಕಿದ್ದರು. ೨೦೦೬ರ ಡಿಸೆಂಬರ್ ೨೫ ರಂದು ಶೃಂಗೇರಿ ಬಳಿಯ ಕಿಗ್ಗದಲ್ಲಿ ನಕ್ಸಲ್ ದಿನಕರ ಎನ್ಕೌಂಟರ್ ಗೆ ಬಲಿಯಾಗಿದ್ದನು. ೨೦೦೭ರ ಮಾ.೧೩ರಂದು ಶಂಕಿತ ನಕ್ಸಲ್ ಯುವತಿ ಚನ್ನಮ್ಮ ಅಮಾಸೆಬೈಲಿನಲ್ಲಿ ಸೆರೆಯಾಗಿದ್ದಳು. ೨೦೦೭ರಂದ ಜೂ.೩ರಂದು ಶೃಂಗೇರಿ ಕಿಗ್ಗ ಸಮೀಪ ಗುಂಡಘಟ್ಟದಲ್ಲಿ ನಕ್ಸಲರು ಅಂಗಡಿ ಮಾಲೀಕ ವೆಂಕಟೇಶ ಹತ್ಯೆ ಮಾಡಿದ್ದರು. ಜೂ.೭ರಂದು ಆಗುಂಬೆ ತಲ್ಲೂರಂಗಡಿ ಬಳಿ ಕೆಎಸ್ರ್ಟಿಸಿ ಬಸ್ ಗೆ ಬೆಂಕಿ ಹಾಕಿದ್ದರು.
೨೦೦೭ ಜು.೧೦:- ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಒಡೆಯರಮಠದಲ್ಲಿ ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ಯುವಕ ಸಿಂಧನೂರಿನ ಗೌತಮ್, ರಾ.ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ರ್ಯರ್ಶಿ ಪರಮೇಶ್ವರ, ರ್ಮಿಕ ಸುಂದರೇಶ್, ಮನೆಯ ಯಜಮಾನರಾದ ರಾಮೇಗೌಡ್ಲು, ಕಾವೇರಿ ಬಲಿಯಾಗಿದ್ದರು. ೨೦೦೭ರ ಜು.೧೭ರಂದು ಆಗುಂಬೆ ಸಮೀಪದ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿಯಲ್ಲಿ ಎಸ್ಐ ವೆಂಕಟೇಶ ಹತ್ಯೆಯಾಗಿದ್ದರು. ೨೦೦೮ರ ಮೇ೧೫ರಂದು ಹೆಬ್ರಿ ಸಮೀಪದ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಬಲಿಯಾಗಿದ್ದರು.
೨೦೦೮ ಜು.೭:- ಬೆಳ್ತಂಗಡಿ ತಾಲೂಕಿನ ಕುತ್ಲೂರು ಹಾಗೂ ತಿಂಗಳಮಕ್ಕಿಯಲ್ಲಿ ನಕ್ಸಲರ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ. ೨೦೦೮ರ ನವೆಂಬರ್೧೩ ರಂದು ಶಿವಮೊಗ್ಗದಲ್ಲಿ ಶಂಕಿತ ನಕ್ಸಲ್ ಜರ್ದನ ಬಂಧನ, ನಕ್ಸಲರು ಬಚ್ಚಿಟ್ಟ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕ ವಶಪಡಿಸಿಕೊಳ್ಳಲಾಗಿತ್ತು. ೨೦೦೮ರ ನವೆಂಬರ ೨೦ ರಂದು ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್ಕೌಂಟರ್ ನಲ್ಲಿ ನಕ್ಸಲರಾದ ಸೊರಬದ ಮನೋಹರ್, ಸಹಚರರಾದ ನವೀನ್, ಅಭಿಲಾಷ್ ಹತ್ಯೆಯಾಗಿದ್ದರು. ಪೇದೆ ಗುರುಪ್ರಸಾದ್ ಮೃತಪಟ್ಟಿದ್ದರು. ೨೦೦೮ರ ಡಿ.೭ರಂದು ಹಳ್ಳಿಹೊಳೆ ಸಮೀಪದ ಕೃಷಿಕ ಜಮೀನ್ದಾರ ಕೇಶವ ಯಡಿಯಾಳರನ್ನು ಪೊಲೀಸರ ಮಾಹಿತಿದಾರನೆಂಬ ಆರೋಪದಲ್ಲಿ ಮನೆಗೆ ನುಗ್ಗಿ ನಕ್ಸಲರು ಹತ್ಯೆಗೈದರು.

೨೦೦೯ ಆ.೨೨:- ಕಿಗ್ಗ ಎನ್ಕೌಂಟರ್ ಆಗಿದ್ದನು. ಎರಡು ದಿನಗಳ ಬಳಿಕ ಶೃಂಗೇರಿಯ ನೆಮ್ಮಾರಿನ ದಿಂಡೋಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ೨೦೧೦ರ ಮಾ.೧ರಂದು ರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿ ಎಂಬಲ್ಲಿ ಪೊಲೀಸರ ಎನ್ಕೌಂಟರ್ ಗೆ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಯಾನೆ ಆನಂದ ಹತ್ಯೆಯಾಗಿದ್ದನು. ೨೦೧೧ರ ಅ.೯ರಂದು ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ನಾವೂರ ಗ್ರಾಮದ ಮಂಜಲದಲ್ಲಿ ಬೆಳಗಿನ ಜಾವ ನಕ್ಸಲ್ ನಿಗ್ರಹದಳದ ಪೊಲೀಸರ ಗನ್ ಮಿಸ್ ಫೈರ್ ಆಗಿ ಎಎನ್ಎಫ್ ಸಿಬ್ಬಂದಿ ಮಹಾದೇವ ಮಾನೆ ಮೃತಪತ್ತಿದ್ದರು.
೨೦೧೧ ಡಿ.೧೯:- ಹೆಬ್ರಿ ಕಬ್ಬಿನಾಲೆ ಸಮೀಪದ ತಿಂಗಳ ಮಕ್ಕಿಯ ಸದಾಶಿವ ಗೌಡ (೪೯) ತೆಂಗಿನಮಾರು ಮನೆಯಿಂದ ನಾಪತ್ತೆ, ೨೨ರಂದು ವಿಷಯ ಬಹಿರಂಗ. ಶಂಕಿತ ನಕ್ಸಲ್ ವಿಶ್ವನಿಂದ ಪತ್ರ್ತರಿಗೆ ಮಾಹಿತಿ. ೨೦೧೧ ಡಿ.೨೮ರಾರು ತೆಂಗಿನಮಾರುವಿನಿಂದ ಎರಡು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ಸದಾಶಿವ ಗೌಡನ ಶವ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಗೋಳಿಮರದಡಿ ಪತ್ತೆಯಾಗಿತ್ತು. ನಕ್ಸಲರ ಬರಹವೂ ಸಮೀಪದಲ್ಲಿ ದೊರಕಿತ್ತು. ೨೦೨೪ರ ನ.೧೮: ಹೆಬ್ರಿಯ ಪೀತಬೈಲುವಿನಲ್ಲಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದು, ನಕ್ಸಲ್ ನಿಗ್ರಹದ ಇತಿಹಾಸ ಬೆಳೆಯುತ್ತಲೇ ಸಾಗಿದೆ.

































