ಕಾರ್ಕಳ: ಕಾರ್ಕಳ ನಗರದ ಹಿಮ್ಮಂಜೆಯ ಕಜೆ ಎಂಬಲ್ಲಿ ಗರ್ನಲ್ ತಯಾರಿಕಾ ಘಟಕ ಸಿಡಿದು ಇಬ್ಬರು ಮಹಿಳೆಯರಿಗೆ ಗಾಯಗೊಂಡಿದ್ದು, ಓರ್ವ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.








ಗೃಹ ಪ್ರದೇಶ ಹೊಂದಿರುವ ಕಜೆ ಪರಿಸರದಲ್ಲಿ ಕಳೆದ ಕೆಲ ವರ್ಷಗಳಿಂದ ಗರ್ನಲ್ ತಯಾರಿಸುತ್ತಿದ್ದ ಘಟಕ ಕಾರ್ಯಾಚರಿಸುತ್ತಿದ್ದು ಬುಧವಾರ ಬೆಳಿಗ್ಗೆ ಘಟಕದಲ್ಲಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದ್ದು, ಘಟಕದ ಮೇಲ್ಚಾವಣೆ ಹೊತ್ತಿ ಉರಿದಿದೆ.
ಸ್ಫೋಟಗೊಂಡ ಗರ್ನಲ್ ತಯಾರಿಕಾ ಘಟಕದಲ್ಲಿ ದುಡಿಯುತ್ತಿದ್ದ ಮೂವರು ಕಾರ್ಮಿಕ ಮಹಿಳೆ ಗಾಯಗೊಂಡಿದ್ದು, ಸುಷ್ಮಾ ಎಂಬವರಿಗೆ ಗಂಭೀರ ಸುಟ್ಟ ಗಾಯವಾಗಿದೆ.
ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಾರ್ಕಳ ನಗರ ಠಾಣಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಡಿವೈಎಸ್ಪಿ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.








































