ನೆಟ್ಲಾ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ

Picture of RB NEWS

RB NEWS

Bureau Report

ಗ್ರಾಮ ಸುಭಿಕ್ಷ ಕಾರ್ಯಕ್ರಮದ ಅಂಗವಾಗಿ ನೆಟ್ಲಾ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ

ಬಂಟ್ವಾಳ : ಗ್ರಾಮ ಸುಭಿಕ್ಷ ಕಾರ್ಯಕ್ರಮದ ಅಂಗವಾಗಿ ನೆಟ್ಲಾ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ ನಡೆಯಲಿದೆ.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ ) ಕಲ್ಲಡ್ಕ ವಲಯದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಒಕ್ಕೂಟ,   ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ, ಶೌರ್ಯ ವಿಪತು ನಿರ್ವಹಣಾ ಘಟಕ ಕಲ್ಲಡ್ಕ ಇವುಗಳ ಜಂಟಿ ಆಶ್ರಯ ವಹಿಸಲಿದೆ. 

ಗ್ರಾಮ ಸುಭಿಕ್ಷ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲಾ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಮೇ 7ರಂದು ಮಂಗಳವಾರ “ಸೀಯಾಳ ಅಭಿಷೇಕ” ನಡೆಯಲಿರುವುದು.

ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೀಯಾಳ ದೊಂದಿಗೆ ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top