45 ಅಡಿ ಎತ್ತರದ ಶ್ರೀ ಗುರುಮಹಾಕಾಲೇಶ್ವರ ದೇವರ ಪ್ರತಿಮೆ : ಕಲಶಾಭಿಷೇಕ ಮಾಡುವ ಸುಯೋಗ ಪ್ರತಿಯೊಬ್ಬರ ಪಾಲಿಗೆ -ನಿಕಟಪೂರ್ವ ಸಂಸದ ನಳಿನ್‌ಕುಮಾರ್ ಕಟೀಲ್

Picture of RB NEWS

RB NEWS

Bureau Report

ಉಡುಪಿ : ಶ್ರೀ ಗುರುಮಹಾಕಾಲೇಶ್ವರ ದೇವರ 45 ಅಡಿ ಎತ್ತರದ ಪೀಠ ಒಳಗೊಂಡಂತೆ ಏಕಶಿಲಾ ಮೂರ್ತಿ ಪ್ರತಿಷ್ಠೆ ಮತ್ತು ಪಂಚಕಲ್ಯಾಣಯುಕ್ತವಾದ ಬ್ರಹ್ಮಕಲಶ ಮಹೋತ್ಸವವು ಮಂಗಳೂರು ಸಮೀಪದ ಗುರುಪುರದ ಸುಕ್ಷೇತ್ರದಲ್ಲಿ ಮೇ 15, 16, 17ರಂದು ಜರಗಲಿದ್ದು, ಇದು ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿದೆ ಎಂದು ನಿಕಟಪೂರ್ವ ಸಂಸದ, ಬ್ರಹ್ಮಕಲಶ ಸಂಭ್ರಮ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಗಿದ್ದ ಉಡುಪಿಯ ಮಂದಿಗೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳಲು ಸಲುವಾಗಿ ಕರೆಯೋಲೆ ಇದಾಗಿದೆ.


ಗುರುಪುರ ಎಂಬ ಹೆಸರೇಳುವಂತೆ ಆಧ್ಯಾತ್ಮಿಕ ಸಾಧಕರು ನೆಲೆಸಿ ಲೋಕಮುಖಿಯಾಗಿ ತಪ್ಪಸನ್ನಾಚರಿಸಿದ ತಪೋಭೂಮಿ. ಈ ಪ್ರದೇಶದ ಮೂಲಕವಾಗಿ ಫಲ್ಗುಣಿ ನದಿಯು ಪಶ್ಚಿಮ ಹರಿಯುತ್ತಾಳೆ. ಇದರ ಸನ್ನಿಹದಲ್ಲಿ ಇದೀಗ ಸುಕ್ಷೇತ್ರ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿ ಸ್ಥಾಪನೆಗೊಂಡಿದೆ. ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ವೇದಕೃಷಿಕ ಬ್ರಹ್ಮಋಷಿ ಕೆ.ಎಸ್ .ನಿತ್ಯಾನಂದ ಅವರು ಸಾನಿಧ್ಯದ ಇರುವಿಕೆಯನ್ನು ಗುರಿತಿಸಿ ಫಲವಾಗಿ ಧಾರ್ಮಿಕ ಸತ್ಕಾರ್ಯಗಳು ಜರುಗುತ್ತಾ ಬಂದಿದೆ. ಚೈತನ್ಯ ಶಕ್ತಿಯ ಸ್ಥಾಪನೆಗೊಂಡಿರುವ ಶ್ರೀ ಗುರುಮಹಾಕಾಲೇಶ್ವರ ದೇವರಿಗೆ ಪೂರ್ಣ ಕಲಶಭಿಷೇಕಾ ಮಾಡುವ ಸೌಭಾಗ್ಯ ಪ್ರತಿಯೊಬ್ಬ ಭಕ್ತಾದಿಗಳ ಪಾಲಿಗೆ ದೊರಕಲಿದೆ. ಮಾನವತಾವಾದ, ಭಾರತೀಯ ಸಂಸ್ಕಾರ,ಸಂಸ್ಕೃತಿಯೊಂದಿಗೆ ಸ್ವತ: ಕೈಯಾರೆ ಕಲಶಾಭಿಷೇಕ ಮಾಡುವ ಸೌಭಾಗ್ಯಯು ದೊರಕಲಿದೆ.


ಮೇ 15,16,17ರ ನಂತರದ ದಿನಗಳಲ್ಲಿ ಪ್ರತಿದಿನ ಪೂಜಾಕೈಂಕರ್ಯಗಳು ನಡೆಯಲಿದೆ. ಗುರುಪುರ ಸುಕ್ಷೇತ್ರವು ಇಡೀ ದೇಶದಲ್ಲಿ ಗುರುತಿಸುವಂತಾಗಲಿದೆ ಎಂದು ಇದೇ ಸಂದರ್ಭದಲ್ಲಿ ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಸುಕ್ಷೇತ್ರಾಧ್ಯಕ್ಷರು,ಆಡಳಿತಗಾರರು, ಗುರುಪುರ ಗೋಳಿದಡಿ ಗುತ್ತಿನ ಗಡಿಕಾರರಾಗಿರುವ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಮಾತನಾಡಿ, ಬ್ರಹ್ಮಋಷಿ ಕೆ.ಎಸ್.ನಿತ್ಯಾನಂದರ ಪ್ರೇರಣೆಯಿಂದಾಗಿ ಶತಶತಮಾನಗಳಿಂದ ಭೂಗರ್ಭದಲ್ಲಿ ಉದುಗಿಹೋಗಿದ್ದ ಮಹಾನ್ ಚೈತನ್ಯವು ಪ್ರಸಕ್ತ ಕಾಲಘಟ್ಟದಲ್ಲಿ ಪುನರುತ್ಥಾನಗೊಳ್ಳಲಿದೆ. ಉತ್ತರಭಾರತ ಹೊರತು ಪಡಿಸಿದರೆ ದಕ್ಷಿಣ ಭಾರತದಲ್ಲಿ ಗುರುಪುರ ಸುಕ್ಷೇತ್ರ ಧಾರ್ಮಿಕ ನೆಲೆಯಲ್ಲಿ ತನ್ನದೇ ಆದ ಪ್ರಸಿದ್ಧಿ ಪಡೆಯಲಿದೆ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ, ಅಂತರಾಷ್ಟ್ರೀಯ ಕ್ರೀಡಾಪಟು, ಚಲನಚಿತ್ರ ನಾಯಕ ನಟ ರೋಹಿತ್ ಕುಮಾರ್ ಕಟೀಲು, ಕಾರ್ಯದರ್ಶಿ ದಿವಾಕರ ಸಾಮಾನಿ, ಗುರುಪುರ ಪ್ರಖಂಡ ಸಮಿತಿಯ ಅಧ್ಯಕ್ಷ ಚಂದ್ರಹಾಸ ಟಿ.ಅಮೀನ್, ಸುಜಾತ ಸದಾನಂದ ಗಾಂಭೀರ್, ನವೀನ್ ಶೆಟ್ಟಿ ಪೆರ್ಮರಗುತ್ತು ಮೊದಲಾದವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top