ಲೋಕಸಭಾ ಚುನಾವಣೆ – ಮನೆ-ಮನೆ
ಮತದಾನಕ್ಕೆ ಚಾಲನೆ
ಕಾರ್ಕಳ : ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ 85 ವರ್ಷಕ್ಕಿಂತ
ಮೇಲ್ಪಟ್ಟ ಮತದಾರರು ಹಾಗೂ ಅಂಗವಿಕಲ ಮತದಾರರಿಗೆ
ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅದರನ್ವಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮತದಾರ ಪಟ್ಟಿಯ ಭಾಗದ ಸಂಖ್ಯೆ 150 ಕ್ರಮ ಸಂಖ್ಯೆ ಸಾಣೂರಿನಲ್ಲಿ ಮನೆ ಮನೆ ಮತದಾನಕ್ಕೆ ಚಾಲನೆ ನೀಡಲಾಯಿತು.
ಸಾಣೂರು ನಿವಾಸಿ ಮೋಹನ್ ದಾಸ್ ನಾಯಕ್ (87) ಅವರು ತನ್ನ ಮನೆಯಲ್ಲಿ ಮತದಾನ ಮಾಡಿದರು.
ಈ ಸಂಧರ್ಭ ಚುನಾವಣೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮನೆಯಿಂದ ಮತದಾನ ಮಾಡಲು ಕಾರ್ಕಳ ತಾಲೂಕಿನಲ್ಲಿ 1,139 ಮಂದಿ ಈಗಾಗಲೇ
ನೋಂದಾಯಿಸಿದ್ದಾರೆ.
ಶನಿವಾರ 585 ಮಂದಿ ಮತವನ್ನು ಚಲಾಯಿಸಿದರು. ನೋಂದಣಿ ಮಾಡಿಸಿದವರಿಗೆ ಮಾತ್ರ ಅವಕಾಶ
ನೀಡಲಾಗಿದೆ. ಚುನಾವಣಾ ಸಿಬ್ಬಂದಿ ಮನೆಗಳಿಗೆ ತೆರಳಿ
ಬ್ಯಾಲೆಟ್ ಪೇಪರ್ ಮೂಲಕ ಗೌಪ್ಯ ಮತದಾನ ಮಾಡಿಸಿದ್ದಾರೆ.









































