ಜಿಲ್ಲಾ ಸರ್ಜನ್ ಅಶೋಕ್ ಅವರನ್ನು ಕೂಡಲೇ ಅಮಾನತು ಮಾಡಿ : ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಆಗ್ರಹ

Picture of RB NEWS

RB NEWS

Bureau Report

           ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ರಕ್ತ ವ್ಯಾಪಾರ... ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಧ್ಧಿ ಹರಿದಾಡುತ್ತಿದೆ.... ಈ ಕುರಿತು ದೂರು ಕೂಡಾ ದಾಖಲಾಗಿದೆ..... ಆದರೆ ಈ ಪ್ರಕರಣ ನೋಡುವಾಗ ಸ್ವತಃ ಜಿಲ್ಲಾ ಸರ್ಜನ್ ಅಶೋಕ್ ರವರೇ ಹಣ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು , ಈಗ ತನಿಖೆ ತನ್ನ ಕಾಲಬುಡಕ್ಕೇ ಬರುತ್ತೆ ಅನ್ನುವಾಗ ರಿವರ್ಸ್ ಹೊಡೆದು ತಾನೇ ಸ್ಪಷ್ಟೀಕರಣ ನೀಡಿದ್ದು ಹಾಸ್ಯಸ್ಪದ ಅನಿಸುತ್ತದೆ.

ಬಡವರ , ದಲಿತರ, ಮಹಿಳೆಯರ ಪರ ಎಂದು ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಪಕ್ಷದವರೇ ಇಂತಹ ನಾಲಾಯಕ್ ಜಿಲ್ಲಾ ಸರ್ಜನ್ ಪರ ನಿಂತಿರುವುದು ಉಡುಪಿ ಜಿಲ್ಲೆಯಲ್ಲಿ ಮಹಿಳಾ ವಿರೋಧಿ , ದಲಿತ ವಿರೋಧಿಯಾದ ಒಬ್ಬ ವಂಚಕ ಜಿಲ್ಲಾ ಸರ್ಜನ್ ಅವರನ್ನು ರಕ್ಷಿಸುತ್ತಿರುವುದು ಅಕ್ಷಮ್ಯ. ಮಂಗಳೂರಿನಲ್ಲಿ ಸೇವೆಯಲ್ಲಿದ್ದ ಸಂಧರ್ಭದಲ್ಲಿ ತನ್ನ ಸಹ ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ನೀಡಿ ಅದು ತನಿಖೆಯಲ್ಲಿ ಸಾಬೀತಾಗಿ ಈ ಜಿಲ್ಲಾ ಸರ್ಜನ್ ಡಾ. ಅಶೋಕ್ ರವರ ಹಲವು ಇಂಕ್ರಿಮೆಂಟ್ ಗಳನ್ನು ಕಡಿತಗೊಳಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲಾ ಈ ಅಶೋಕ್ ಗೆ ಉಡುಪಿ ಜಿಲ್ಲಾ ಸರ್ಜನ್ ಆಗುವ ಯಾವ ಅರ್ಹತೆಯು ಇಲ್ಲಾ. ಈ ಅಶೋಕ್ ಕೇವಲ ಎಂಬಿಬಿಎಸ್ ಪದವಿದರರಾಗಿದ್ದು ಜಿಲ್ಲಾ ಸರ್ಜನ್ ಆಗಲು ಸ್ನಾತಕೋತ್ತರ ಪದವಿಯ ಅರ್ಹತೆ ಬೇಕಾಗಿರುತ್ತದೆ. ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಡಾ. ಅಶೋಕ್ ಅವರಿಗಿಂತ ಸೀನಿಯರ್ಸ್ ಮತ್ತು ಉನ್ನತ ಪದವಿ ಹೊಂದಿದವರು ಇದ್ದರೂ ಸಹ ರಾಜಕೀಯ ಪಿತೂರಿ ಮಾಡಿ, ತನ್ನ ಸಹ ಸಿಬ್ಬಂದಿಗಳ ಮೇಲೆ ಅನಗತ್ಯ ಕೇಸುಗಳನ್ನು ದಾಖಲಿಸಿ , ಕಿರುಕುಳ ನೀಡಿ , ಕೆಎಟಿ ಯಲ್ಲಿ ತಡೆಯಾಜ್ಞೆ ತಂದು ತಾನು ಈ ಹುದ್ದೆಯಲ್ಲಿ ಮುಂದುವರೆಯುತ್ತಿರುವುದು ನಮಗೆ ಕಂಡುಬಂದಿರುವ ವಿಷಯ.
ಈ ಅಶೋಕ್ ಉಡುಪಿ ಜಿಲ್ಲಾ ಆಸ್ಪತ್ರೆಯಿಂದ ವರ್ಗಾವಣೆಗೊಂಡಿದ್ದರೂ ಸಹ ಜಿಲ್ಲಾಧಿಕಾರಿಗಳು ವರ್ಗಾವಣೆ ಆದೇಶ ನೀಡಿದರು ಸಹ ಜಿಲ್ಲಾಧಿಕಾರಿಯವರ ಆದೇಶವನ್ನು ಧಿಕ್ಕರಿಸಿ ತಾನು ಬೇರೆ ಕಡೆಗೆ ವರ್ಗಾವಣೆ ಆದಾಗಲೂ ರಾತ್ರಿ ಪಾಳಿಯಲ್ಲಿ ಜಿಲ್ಲಾ ಆಸ್ಪತ್ರೆಗೆ ಬಂದು ತನ್ನ ರೌಂಡ್ಸ್ ಹಾಕುತ್ತಿರುವುದು ಜಿಲ್ಲಾಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಅಷ್ಟೇ ಅಲ್ಲ ಕೆಲವೊಂದು ಹಣದ ಆಮಿಷಕ್ಕೆ ಒಳಗಾಗುವ ಸಂಘಟನೆಯ ನಾಯಕರನ್ನು ಭೇಟಿಯಾಗಿ ಅವರಿಗೆ ಹಣಕೊಟ್ಟು ತಳ್ಳಿ ಅರ್ಜಿ ದೂರು ದಾಖಲಿಸಿ, ತನ್ನ ಸಹ ಮಹಿಳಾ ಸಿಬ್ಬಂದಿಗಳ ವಿರುದ್ಧ ಕಿರುಕುಳ ಕೊಟ್ಟಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ ಆ ನಕಲಿ ಲೆಟರ್ ಹೆಡ್ ಪ್ರತಿ ನಮಗೆ ಸಿಕ್ಕಿರುತ್ತದೆ.
ತಾನೇ ಹಣ ನೀಡಿ ಸನ್ಮಾನ ಮಾಡಿಕೊಂಡು ಉಡುಪಿ ಜಿಲ್ಲೆಯಲ್ಲಿ ತಾನೊಬ್ಬ ಸಾಚಾ ಎನ್ನುವ ಪೋಸ್ ಕೊಡುತ್ತಿರುವ ಹಾಗೂ ಇಲ್ಲಿಯ ಪ್ರಬಲ ರಾಜಕಾರಣಿಗಳೊಂದಿಗೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡು ಉಡುಪಿ ಜಿಲ್ಲೆಯ ಬಡವರು ಶೋಷಿತರು ಮಹಿಳೆಯರು ಮತ್ತು ದಲಿತರ ಪಾಲಿಗೆ ಒಬ್ಬ ಕಂಠಕನಾಗಿ ಈ ಜಿಲ್ಲಾ ಸರ್ಜನ್ ಅಶೋಕ್ ಹೊರಹೊಮ್ಮಿದ್ದಾರೆ.
ಇಷ್ಟೆಲ್ಲಾ ಆರೋಪ ಹೊತ್ತಿರುವ ಹಾಗೂ ಇಷ್ಟೆಲ್ಲಾ ಕಿರುಕುಳ ಕೊಡುತ್ತಿರುವ ಮಹಿಳಾ ಪೀಡಕನಾದಂತ,ಜಿಲ್ಲಾ ಸರ್ಜನ್ ಆಗಲು ಅರ್ಹತೆಯೇ ಇಲ್ಲದಂತಹ ಡಾ.ಅಶೋಕ್ ಅವರನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಲಕರಾದ ಸುಂದರ ಮಾಸ್ಟರ್ ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಒಂದುವೇಳೆ ಇತನನ್ನು ಅಮಾನತು ಮಾಡುವಲ್ಲಿ ವಿಳಂಬ ಧೋರಣೆ ತೋರಿದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತನ್ನ ತೀವ್ರ ಪ್ರತಿಭಟನೆಯ ಹಾದಿಯನ್ನು ಹಿಡಿಯುವುದು ಅನಿವಾರ್ಯವಾಗುತ್ತದೆ.ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಎಚ್ಚರಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top