

ವಾರಭವಿಷ್ಯ 05.07.2026 ರಿಂದ 11.07.2026ರ ತನಕ
ವಿಶೇಷ ದಿನಗಳು :ದಿನಾಂಕ 07.07.2026… ಮಿಥುನ ರಾಶಿಗೆ ವಕ್ರೀ ಬುಧನ ಪ್ರವೇಶ
ಮೇಷ : ವ್ಯಾಪಾರ ವಿಸ್ತರಣೆಗೆ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸೂಕ್ತ ಸಮಯವಿದು. ಅನ್ಯ ವ್ಯಕ್ತಿಗಳನ್ನು ಅವಶ್ಯಕತೆಗಿಂತಲೂ ಹೆಚ್ಚು ನಂಬ ಬೇಡಿರಿ. ಹಳೆ ಸಾಲ ಪಾವತಿಸಲು ಹೊಸ ಸಾಲ ಮಾಡಬೇಕಾಗುತ್ತದೆ. ಕೆಲವೊಂದು ರಹಸ್ಯ ವಿಷಯಗಳ್ಳಿ ನಿಮ್ಮನ್ನು ನೀವೇ ಬಂಧಿಸಿಕೊಳ್ಳುವಿರಿ.
ವೃಷಭ : ಬಾಲ್ಯದ ಗೆಳೆಯರ ಭೇಟಿಯಿಂದ ಮನಸ್ಸಿಗೆ ಖುಷಿಯಾಗಲಿದೆ. ಇಷ್ಟವಾದ ವಸ್ತುಗಳನ್ನು ಖರೀದಿಸಲು ದುಂದು ವೆಚ್ಚ ಮಾಡಬೇಡಿರಿ, ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಪರಿಶ್ರಮ ಪಡಬೇಕಾಗುತ್ತದೆ. ನೀವಾಡುವ ಮಾತುಗಳೇ ಅಪಾಯಕ್ಕೆ ಕೆಲವೊಮ್ಮೆ ಕಾರಣವಾಗಲಿದೆ. ದೈವಾನುಗ್ರಹಕ್ಕಾಗಿ ದೇವರ ದರ್ಶನ ಅಗತ್ಯವಿದೆ.
ಮಿಥುನ : ಗೃಹ ನಿರ್ಮಾಣದಂತಹ ಶುಭ ಕೆಲಸಗಳಿಗೆ ಉತ್ತಮ ಸಂದರ್ಭವಿದು. ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಯೋಗ ಪ್ರಾಣಾಯಾಮ ಅಗತ್ಯವಿದೆ. ಅನ್ಯರ ಕಾರಣದಿಂದ ಪ್ರೀತಿ ಪಾತ್ರರೊಂದಿಗೆ ವಿರಸಗಳು ಬರಬಹುದು. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸುವಿರಿ. ಭಡ್ತಿ ಯೋಗವಿದೆ.
ಕರ್ಕಾಟಕ : ಪಾಲುದಾರಿಕೆ ವ್ಯವಹಾರಗಳಿಂದ ಉತ್ತಮ ಲಾಭವಿದೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಮಾನಸಿಕ ಒತ್ತಡದಿಂದ ಬಳಲುವಿರಿ. ನಾಗದೇವರ ಯಥಾ ಶಕ್ತಿ ಶಕ್ತಿ ಸೇವೆ ಅಗತ್ಯವಿದೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸಂತೋಷದ ಸುದ್ದಿ ಇದೆ, ತಾಳ್ಮೆ ಸಂಯಮ ಅಗತ್ಯವಿದೆ.
ಸಿಂಹ : ಹೊಸ ವ್ಯವಹಾರಗಳನ್ನು ಆರಂಭಿಸುವಾಗ ಅನುಭವಿಗಳಿಂದ ಮಾರ್ಗದರ್ಶನ ಪಡೆದುಕೊಳ್ಳಿರಿ. ನಿಮಗೆ 60+ ಆಗಿದ್ದರೆ ದೇಹಕ್ಕೆ ವಿಶ್ರಾಂತಿ ಅಗತ್ಯವಿದೆ. ಇದು ನೆನಪಿರಲಿ. ತಾಳ್ಮೆ ಕಡಿಮೆಯಾದರೆ ಆತ್ಮೀಯರೊಂದಿಗೆ ಮುನಿಸು ಬರಬಹುದು, ದೈವ ದೇವರ ನಿಯಮಕ್ಕೆ ವಿರುದ್ಧ ಹೋಗುವುದು ಉತ್ತಮ ಲಕ್ಷಣವಲ್ಲ, ಉದ್ಯಮಿಗಳು ಲೆಕ್ಕಾಚಾರಗಳನ್ನು ಸರಿಯಾಗಿ ಇಟ್ಟುಕೊಳ್ಳಿರಿ.
ಕನ್ಯಾ : ಹೊಸ ಮನೆ ಅಥವಾ ವಾಹನ ಖರೀದಿಯ ಯೋಗವಿದೆ, ಅಪವಾದ ಬಾರದಂತೆ ಎಚ್ಚರವಹಿಸಿರಿ, ಉದ್ಯೋಗ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಯಾಗಲಿದೆ. ತಾಯಿಯವರ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡುವುದು ಅಗತ್ಯವಿದೆ. ಬಹಳ ಕಾಲದಿಂದ ಬರಬೇಕಾಗಿದ್ದ ಹಣ ಕೈ ಸೇರಲಿದೆ.
ತುಲಾ : ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಕೇಳುವಿರಿ, ಚಂಚಲ ಮನಸ್ಸು ನಿಮ್ಮ ಸಾಧನೆಗೆ ಅಡ್ಡಿಯಾಗಲಿದೆ. ಮಕ್ಕಳಿಗೆ ದುಶ್ಚಟ ಬಾರದಂತೆ ಜಾಗರೂಕರಾಗಿರಿ. ನಿಮ್ಮ ಅಕ್ರಮ ಆಸ್ತಿಗಳನ್ನು ಸಕ್ರಮ ಮಾಡಿಕೊಳ್ಳಲು ಪ್ರಯತ್ನಿಸಿರಿ. ಕೆಲವೊಮ್ಮೆ ನಿಮಗೆ ಶತ್ರುಗಳಾಗಬಹುದು.
ವೃಶ್ಚಿಕ : ಕುಟುಂಬದವರೊಂದಿಗೆ ಇನ್ನೂ ಮೂರು ತಿಂಗಳ ಕಾಲ ಮೌನದಿಂದ ಇರುವುದು ಒಳ್ಳೆಯದು. ಇದು ಕುಜನ ಸೂಚನೆಯಾಗಿದೆ. ಮಕ್ಕಳೂ ವಿರುದ್ಧವಾಗಿ ನಡೆದುಕೊಳ್ಳಲಿದ್ದಾರೆ. ಇದು ಶನಿಯ ಸೂಚನೆಯಾಗಿದೆ. ದೈವಿಕ ಕಾರ್ಯಗಳಿಗೆ ಖರ್ಚು ಮಾಡಲು ಹಿಂಜರಿಯಬೇಡಿರಿ.
ಧನು : ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ ನಿಮ್ಮದಾಗಲಿದೆ. ಶನಿ ಗುರು ಬುಧರ ಬಗ್ಗೆ ಆರಾಧನೆ ಅಗತ್ಯವಿದೆ, .ತಾಯಯವರ ತಾಯಯ ಆರೋಗ್ಯ ನಿಮ್ಮ ಮನಸ್ಸನ್ನು ಹಾಳು ಮಾಡಲಿದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಹೊಸ ಹೂಡಿಕೆ ಸದ್ಯಕ್ಕೆ ಬೇಡ. ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳ ಪರಿಶ್ರಮ ಅಗತ್ಯವಿದೆ. ಸಂಗಾತಿಯೊಂದಿಗೆ ಮೌನವಾಗಿದ್ದರೆ ಒಳ್ಳೆಯದು.
ಮಕರ : ಹೊಸ ಉದ್ಯೋಗದ ನಿರೀಕ್ಷೆ ಫಲ ಕೊಡಲಿದೆ ಮಾಡದ ತಪ್ಪನ್ನು ಒಪ್ಪಿಕೊಳ್ಳುವ ಸೂಚನೆ ಇರುತ್ತದೆ. ಶುಭ ಸಮಾರಂಭಗಳು ನಡೆಯಲಿವೆ. ರಾಜಕೀಯ ವ್ಯಕ್ತಿಗಳಿಗೆ ರವಿ ಉತ್ತಮ ಅವಕಾಶಗಳನ್ನು ನೀಡಲಿದ್ದಾನೆ. ಭೂಮಿ ಖರೀದಿ ಮಾಡುವಾಗ ದಾಖಲೆ ಪರಿಶೀಲನೆ ಅಗತ್ಯವಿದೆ. ದಾಂಪತ್ಯ ವಿಷಯದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಮಾತಿನಲ್ಲಿ ಜಾಗ್ರತೆಯಿರಲಿ.
ಕುಂಭ : ಅನಿರೀಕ್ಷಿತ ಧನ ಲಾಭದಿಂದ ಅನೇಕ ಸಮಸ್ಯೆಗಳು ಪರಿಹಾರವಾಗಲಿದೆ. ಕ್ರಿಯಾಶೀಲಾ ಚಟುವಟಿಕೆಗಳಿಂದ ಯಶಸ್ಸು ಸಿಗಲಿದೆ. ದೈವಾನುಗ್ರಹ ಇಲ್ಲದ ಕಾರಣ ದುರ್ಗಾ ಪ್ರಾರ್ಥನೆ ಅಗತ್ಯವಿದೆ, ಅನಗತ್ಯ ವಿಷಯಗಳ ಚರ್ಚೆ ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಲಿದೆ ಹಿರಿಯರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ.
ಮೀನಾ : ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿ ಸಿಗಲಿದೆ. ನಿಮ್ಮದೇ ಸರಿ ಎನ್ನುವ ಅಹಂಭಾವದಿಂದ ದೂರವಿರುವುದು ಒಳ್ಳೆಯದು. ಆರ್ಥಿಕ ಲಾಭಗಳಿದ್ದರೂ ಖರ್ಚಿನ ಬಗ್ಗೆ ನಿಯಂತ್ರಣವಿರಲಿ, ನೀವಾಡುವ ಪ್ರತಿಯೊಂದು ಮಾತು ಇತರರಿಗೆ ಪ್ರೇರಣೆಯಾಗಿರಲಿ, ಉತ್ತಮ ದೈವಾನುಗ್ರಹ ಇರುವ ಸಮಯವಾಗಿದೆ.



























