[t4b-ticker]

ವಾರಭವಿಷ್ಯ 28.06.2026 ರಿಂದ 04.07.2026ರ ತನಕ

Picture of RB NEWS

RB NEWS

Bureau Report

ಮೇಷ : ಆರ್ಥಿಕವಾಗಿ ಹಣ ಕಾಸಿನ ಬಗ್ಗೆ ಜಾಗ್ರತೆಯಿರಲಿ, ಹಿರಿಯರ ಆರೋಗ್ಯದ ಬಗ್ಗೆ ಆಗಾಗ ತಪಾಸಣೆ ಅಗತ್ಯವಿದೆ. ವೃತ್ತಿ ರಂಗದಲ್ಲಿ ಹೊಂದಾಣಿಕೆ ಹಾಗೂ ಉತ್ತಮ ಚಿಂತನೆಗಳು ಫಲಕಾರಿಯಾಗಲಿದೆ. ಅವಿವಾಹಿತರಿಗೆ ಅನಿರೀಕ್ಷಿತ ಬೆಳವಣಿಗೆಗಳು ಕಂಡು ಬರಲಿವೆ.

ವೃಷಭ : ವೃತ್ತಿರಮಗದಲ್ಲಿ ಅಧಿಕಾರಿ ವರ್ಗದವರ ವಿರೋಧ ಹಿರಿಯರ ಅಪಸ್ವರ ಇದ್ದರೂ ಸಂಗಾತಿಯ ಸಹಕಾರ, ಪ್ರೀತಿ ವಿಶ್ವಾಸ ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸ್ವತಂತ್ರ ವ್ಯವಹಾರಗಳಿಗೆ ಸಕಾಲವಾಗಿದೆ. ಮನೆಯಲ್ಲಿ ಶುಭ ಮಂಗಳ ಕೆಲಸಗಳು ನಡೆಯಲಿವೆ.

ಮಿಥುನ : ಅವಿವಾಹಿತರಿಗೆ ವಿವಾಹ ಯೋಗ ಭಾಗ್ಯವಿದೆ. ನಿಮ್ಮ ಕರ್ತವ್ಯದ ಬಗ್ಗೆ ಗಮನವಿಟ್ಟುಕೊಂಡು ಮುಂಡುವರಿಯಿರಿ, ವಿದ್ಯಾರ್ಥಿಗಳು ತಮ್ಮ ಓದಿನಕಡೆಗೆ ಗಮನ ಹರಿಸುವುದು ಮುಖ್ಯವಾಗಿದೆ. ದೇವತಾ ಕಾರ್ಯಗಳಿಗಾಗಿ ದೂರ ಸಂಚಾರ ಮಾಡುವಿರಿ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಪ್ರಾಪ್ತಿಯಾಗಲಿದೆ.

ಕರ್ಕಾಟಕ : ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬರಲಿವೆ. ಶನಿ ರಾಹು ಗ್ರಹರಿಗೆ ಯಥಾ ಶಕ್ತಿ ಆರಾಧನೆ ಅಗತ್ಯವಿದೆ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ಮುನ್ನೆಲೆಗೆ ಬರಲಿವೆ. ವೃತ್ತಿರಂಗದಲ್ಲಿ ಹಿತಶತ್ರುಗಳ ಕಾಟ ಇರಲಿದೆ. ವಾಹನ ಖರೀಧಿ ಮಾಡುವಾಗ ಎಚ್ಚರವಿರಲಿ,ಕೌಟುಂಬಿಕವಾಗಿ ಖರ್ಚು ವೆಚ್ಚಗಳು ಬರಲಿವೆ.

ಸಿಂಹ : ಸ್ವಪ್ರಯತ್ನವಿದ್ದರೂ ನಿರೀಕ್ಷಿತ ರೀತಿಯಲ್ಲಿ ಫಾ ದೊರೆಯದು. ಆರ್ಥಿಕವಾಗಿ ಆಗಾಗ ಧನಾಗಮನವಿರುವುದರಿಂದ ಕೊಂಚ ಸಮಾಧಾನ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಇರುವ ಹಲವು ವೈರುಧ್ಯಗಳು ಮನಸ್ಸಿಗೆ ಬೇಸರವನ್ನು ತರಲಿವೆ. ಅವಿವಾಹಿತರು ಹೆಚ್ಚಿನ ಪ್ರಯತ್ನ ನಡೆಸಬೇಕಾದೀತು.

ಕನ್ಯಾ : ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮತೋಲನವನ್ನು ಕಾಯ್ದು ಕೊಳ್ಳಿರಿ. ಕುಟುಂಬದ ಸಂಬಂಧಗಳನ್ನು ಗಟ್ಟಿಯಾಗಿಸಲು ಮನಸ್ಸು ಮಾಡಿರಿ. ಕುಟುಂಬದ ಸದಸ್ಯರಿಗೆ ಸೂಕ್ತ ಗೌರವ ಕೊಡಲು ಮರೆಯದಿರಿ. ಹಣಕಾಸಿನ ಮಟ್ಟಿಗೆ ಏನೂ ಸಮಸ್ಯೆ ಇರಲಾರದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸುವುದು ಒಳ್ಳೆಯದು .

ತುಲಾ : ಕೌಟುಂಬಿಕವಾಗಿ ಎಲ್ಲಾ ಜಂಜಾಟಗಳಿಂದ ಮುಕ್ತರಾಗಬೇಕೆಂದು ಬಯಸುವಿರಿ, ಕಾರ್ಯ ಕ್ಷೇತ್ರದಲ್ಲಿ ಯಾವುದೇ ರೀತಿಯ ಮನಸ್ತಾಪಕ್ಕೆ ಅವಕಾಶ ನೀಡದಿರಿ, ಭವಿಷ್ಯದತ್ತ ಹೆಚ್ಚಿನ ಗಮನವೀರಲಿ. ಕೇತುವಿನ ಅನುಗ್ರಹವಿರುವುದರಿಂದ ಬಂದ ಕಷ್ಟ ನಷ್ಟಗಳನ್ನು ಎದುರಿಸುವಿರಿ.

ವೃಶ್ಚಿಕ : ಕೆಲವೊಮ್ಮೆ ನಿಮ್ಮ ಆತ್ಮ ವಿಶ್ವಾಸದ ಬಗ್ಗೆ ನಿಮಗೆ ಆಶ್ಚರ್ಯ ಎಣಿಸಲಿದೆ.ದೈವಾನುಗ್ರಹ ಉತ್ತಮವಾಗಿರುವುದರಿಂದ ನೀವು ಕೈ ಹಾಕಿದ ಕೆಲಸಗಳು ಯಶಸ್ವಿಯಾಗಿ ನಡೆಯಲಿವೆ. ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಿಗಲಿದೆ. ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿ ನಡೆಯಲಿದೆ. ರಾಜಕೀಯ ಗಣ್ಯರಿಗೆ ಉತ್ತಮ ಗೌರವ ಸಿಗಲಿದೆ.

ಧನು : ಉತ್ತಮ ಸಂತೋಷದ ದಿನಗಳನ್ನು ಕಾಣುವಿರಿ. ಶನಿ ಮತ್ತು ಗುರುವಿನ ಬಗ್ಗೆ ಯಥಾ ಶಕ್ತಿ ಆರಾಧನೆ ಅಗತ್ಯವಿದೆ. ಆರ್ಥಿಕವಾಗಿ ಸಮಸ್ಯೆಗಳು ಇಲ್ಲವಾದರೂ ಖರ್ಚು ವೆಚ್ಚಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯವಿದೆ. ಪರಿಶ್ರಮವಿರಲಿ, ಆತ್ಮವಿಶ್ವಾಸವಿರಲಿ.

ಮಕರ : ನೀವು ಬಯಸದಿದ್ದರೂ ಬಡಲಾವಣೆಗಳಾಗಳಿವೆ ಕಾರ್ಯ ರಂಗದ ಕಠಿಣ ಸವಾಲುಗಳನ್ನು ಎದುರಿಸಲೇ ಬೇಕಾಗಿದೆ. ಯಶಸ್ಸು ಅದೃಷ್ಟ ನಿಮ್ಮದಾಗಲಿದೆ. ಹಿರಿಯರ ಆಶೀರ್ವಾದ, ಸಂಗಾತಿಯ ಸಹಕಾರ ನಿಮಗೆ ಸಿಗಲಿದೆ. ಶುಭ ಮಂಗಳ ಕೆಲಸಗಳು ನಡೆಯಲಿವೆ. ಆಧ್ಯಾತ್ಮ ಚಿಂತನೆಗೆ ಇದು ಸಕಾಲವಾಗಿದೆ.

ಕುಂಭ : ಆರ್ಥಿಕ ಋಣ ಭಾರದ ಚಿಂತೆ ನಿಮ್ಮನ್ನು ಕಾಡಲಿದೆ. ಶ್ರೀ ದೇವರ ಅನುಗ್ರಹಕ್ಕಾಗಿ ದೇವತಾ ಕಾರ್ಯ ತೀರ್ಥಯಾತ್ರೆಗಳನ್ನು ನಡೆಸುವಿರಿ, ಅವಿರತ ಕಾರ್ಯದಒತ್ತಡದಿಂದ ಆಗಾಗ ದೇಹಾಯಾಸ ನೂತನ ಮಿತ್ರಾಗಮನದಿಂದ ಕಾರ್ಯ ಸಾಧನೆಗೆ ಅನುಕೂಲತೆ ಒದಗಿ ಬರಲಿದೆ ಅವಿವಾಹಿತರು ಸ್ವಲ್ಪ ಸಮಯ ಕಾಯುವುದು ಒಳಿತು.

ಮೀನಾ :ವೃತ್ತಿ ರಂಗದಲ್ಲಿ ನಿಮ್ಮ ಕಾರ್ಯ ಸಾಧನೆಗೆ ಸಾಮಾಜಿಕವಾಗಿ ಪ್ರಶಂಸೆ ಕೇಳಿಬಂದೀತು. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಮಾತುಕತೆಗಳಿಂದ ಕಂಕಣಬಲ ಪ್ರಾಪ್ತಿಯಾಗಲಿದೆ ಸರಕಾರಿ ಕೆಲಸಕಾರ್ಯಗಳು ಅಡೆತಡೆಗಳಿಂದಲೇ ಮುಕ್ತಾಯಕಾಣಲಿದೆ. ಉದ್ಯೋಗಿಗಳಿಗೆ ಭಡ್ತಿ ಯೋಗವಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top