ವಾರಭವಿಷ್ಯ
ದಿನಾಂಕ 26.04.2026 ರಿಂದ 02.05.2026ರ ವರೆಗೆ
ಮೇಷ : ನಿಮ್ಮ ಕಷ್ಟ ಕಾಲದಲ್ಲಿ ಅನೇಕರ ಸಹಾಯ ನಿಮಗೆ ಒದಗಿ ಬರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಪಿತೃ ಸಂಬಂಧಿಗಳಿಂದ ಆರ್ಥಿಕವಾಗಿ ಲಾಭ ಒದಗಿ ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಜೀವನದಲ್ಲಿ ಅನೇಕ ಒಳ್ಳೆಯ ಬದಲಾವಣೆಯನ್ನು ಕಾಣಲಿದ್ದೀರಿ.
ವೃಷಭ : ಕಾಲ ಚಕ್ರ ಬದಲಾವಣೆ ಆಗುತ್ತಿದೆ, ಬಂದ ಆದಾಯ ಕರಗಿ ಹೋಗುತ್ತಿದೆ. ದೈವಾನುಗ್ರಹ ಉತ್ತಮವಾಗಿದೆ. ಗುರು ಶುಕ್ರರ ಸಂಯೋಗ ಉತ್ತಮವಲ್ಲ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮನಸ್ಸಿಗೆ ಗೊಂದಲ ಮೂದಲಿದೆ. ದಾಂಪತ್ಯದಲ್ಲಿ ಕುಜನ ಪ್ರವೇಶ ಆಗುತ್ತಿದೆ.
ಮಿಥುನ : ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಕಾಣುವಿರಿ. ಅತಿಯಾದ ಸಿಟ್ಟು ನಿಮ್ಮ ಹೆಸರಿಗೆ ಕಳಂಕ ತರಬಹುದು. ಗುರು ಶುಕ್ರರ ಸಂಯೋಗ ಸಂಗಾತಿಯೊಂದಿಗೆ, ಮಕ್ಕಳೊಂದಿಗೆ ಕಿರಿಕಿರಿಯನ್ನು ತರಲಿದೆ.
ಕರ್ಕಾಟಕ : ರಾಹು ಶನಿಯರು ಸೂಚಿಸುವಂತೆ ನಿಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ಹೊಂದಲಿದ್ದೀರಿ. ವಾಹನ ಚಲಾವಣೆಯಲ್ಲಿ ಜಾಗ್ರತೆವಹಿಸುವುದು ಅಗತ್ಯ. ನಿದ್ದೆಯ ಸಮಯವನ್ನು ನಿಗದಿ ಪಡಿಸಿಕೊಳ್ಳುವುದು ಅಗತ್ಯವಾಗಿದೆ. ನಾಗ ದೇವರ ಪ್ರಾರ್ಥನೆ ಅಗತ್ಯವಾಗಿದೆ.
ಸಿಂಹ : ಮೇಷ ರಾಶಿಯಲ್ಲಿ ಕುಜ ಪ್ರವೇಶ ಮಾಡುವ ಸಮಯ ಬರುತ್ತಿದೆ. ನಿಮ್ಮ ತಂದೆ ತಾಯಿಯವರ ಜೊತೆಗೆ ವೈಮನಸ್ಸು ಬರುವ ಸಮಯ ಬರುತ್ತಿದೆ. ಸಂಗಾತಿಯೊಂದಿಗೆ ವೈಮನಸ್ಸು ಮುಂದುವರಿಯಲಿದೆ. ಮಾಡಿದ ತಪ್ಪಿಗೆ ಬೇಸರ ಅನುಭವಿಸುವಿರಿ, ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಕನ್ಯಾ : ಅಪವಾದಗಳು ನಿಮ್ಮ ಸುತ್ತಲೂ ಬರುವ ಕಾಲವಾಗಿದೆ. ಮೃತ್ಯುಂಜಯ ಜಪ ಅತೀ ಅಗತ್ಯವಾಗಿದೆ. ಶನಿ ಕುಜ ಕೇತುವಿಗೆ ಪರಿಹಾರ ಅಗತ್ಯವಿದೆ. ಸಂಗಾತಿಯೊಂದಿಗೆ ದೇವಿಯ ಆರಾಧನೆ ಮಾಡುವುದು ಅಗತ್ಯವಾಗಿದೆ. ಆಹಾರದ ಬಗ್ಗೆ ಎಚ್ಚರವಿರಲಿ, ಬೆಂಕಿಯ ಬದಿಯಲ್ಲಿ ಕೆಲಸ ಮಾಡುವವರು ಎಚ್ಚರವಹಿಸಿರಿ.
ತುಲಾ : ಭಾಗ್ಯದಲ್ಲಿರುವ ಗುರು ಶುಕ್ರ ಹಿರಿಯರಲ್ಲಿ ವೈಮನಸ್ಸನ್ನು ತರುವ ಸಾಧ್ಯತೆ ಇದೆ. ಅವರ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳನ್ನು ಮಾಡುವುದರಿಂದ ಲಾಭ ಗಳಿಸಳಿದ್ದೀರಿ. ದಾಂಪತ್ಯದ ಬಿನ್ನಾಭಿಪ್ರಾಯಗಳು ಮಕ್ಕಳ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿರಿ.
ವೃಶ್ಚಿಕ : ಕಾಲಚಕ್ರ ಉರುಳುತ್ತಿದೆ. ಈ ವರೆಗೆ ಅನುಭವಿಸಿದ ಕಷ್ಟಗಳು ಮತ್ತೆ ಬರಲಾರವು. ಮಕ್ಕಳೊಂದಿಗೆ ಇದ್ದ ವೈಮನಸ್ಸು ದೂರವಾಗಲಿದೆ. ಮನೆಯ ನವೀಕರಣದ ಬಗ್ಗೆ ಯೋಚನೆ ಮಾಡುವಿರಿ. ರಾಜಕೀಯದವರಿಗೆ ಶುಭ ಕಾಲ ಬರುತ್ತಿದೆ.
ಧನು : ನೀವು ಕೈಗೊಳ್ಳುವ ಯಾವುದೇ ನಿರ್ಧಾರಗಳ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ. ಹೊಸ ವ್ಯವಹಾರಗಳ ಬಗ್ಗೆ ಕೈ ಹಾಕಲು ಶನಿ ತಿಳಿಸುವಂತೆ ಒಳ್ಳೆಯ ಕಾಲವಲ್ಲ. ಮಕ್ಕಳ ಜೊತೆಗೆ ಕಲಹ ಬರುವ ಸೂಚನೆಯನ್ನು ಕುಜ ತಿಳಿಸುತ್ತಿದ್ದಾನೆ. ಪ್ರಾಯಕ್ಕೆ ಬಂದಿರುವ ಮಕ್ಕಳ ಜೊತೆಗೆ ಮಿತ್ರರಂತೆ ವರ್ತಿಸುವುದು ಒಳ್ಳೆಯದು.
ಮಕರ : ವಿದ್ಯಾರ್ಥಿಗಳಿಗೆ ಶ್ರಮ ಪಟ್ಟರೆ ಒಳ್ಳೆಯ ಅವಕಾಶಗಳು ಜೂನ್ ತಿಂಗಳ ನಂತರ ಒದಗಿ ಬರಲಿದೆ. ಯಾವುದೇ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಮೊದಲು ಸರಿಯಾದ ಯೋಜನೆ ಸಿದ್ದ ಪಡಿಸಿಕೊಳ್ಳಿರಿ. ಹಿರಿಯರ ಸಲಹೆಗಳಿಗೆ ಮಾನ್ಯತೆ ಕೊಡಿರಿ.
ಕುಂಭ : ಸಾಡೇ ಸಾತ್ ಶನಿಯ ಪ್ರಭಾವದಿಂದ ನೀವು ಮಾಡುವ ಉತ್ತಮ ಕೆಲಸಗಳಿಂದ ಶತ್ರುಗಳು ಹೆಚ್ಚಾಗಲಿದ್ದಾರೆ. ಅವಿವಾಹಿತರಿಗೆ ಕಂಕಣ ಬಲ, ಕೆಲವು ಕಲಹಗಳೊಂದಿಗೆ ನಡೆಯಲಿದೆ. ಮಕ್ಕಳೊಂದಿಗೆ ಮೃಧು ಧೋರಣೆ ಇರಲಿ, ಯೋಗ ಪ್ರಾಣಾಯಾಮ ಅಗತ್ಯವಾಗಿದೆ.
ಮೀನಾ : ಕ್ರಿಯಾ ಶೀಲ ನಡವಳಿಕೆಯಿಂದ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಸಾಡೇ ಸಾತ್ ಶನಿಯ ಪ್ರಭಾವ ನಿಮ್ಮ ಮಾತಿನಲ್ಲಿ ಬರುತ್ತಿರುವ ಆದಾಯದಲ್ಲಿ ನಿಮಗೆ ಗೊತ್ತಾಗಲಿದೆ. ಹಿರಿಯ ಮಹಿಳೆಗೆ ಆರೋಗ್ಯದ ಸಮಸ್ಯೆ ಕಾಡಲಿದೆ. ಅದು ತಾಯಿ ಅಥವಾ ಅತ್ತೆಯವರು ಆಗಿರಬಹುದು.
ಕಂಪ್ಯೂಟರ್ ಜಾತಕ, ವಾಸ್ತು ವಿವಾಹ ಹೊಂದಾಣಿಕೆ, ಶುಭ ಮುಹೂರ್ತ, ಕವಡೆ ಪ್ರಶ್ನೆ, ಸಲಹೆಗಳಿಗೆ ಸಂಪರ್ಕಿಸಿರಿ.
.































