ವಿಶೇಷ ದಿನಗಳು :
- 09.04.2024 ಮೀನ ವಕ್ರೀ ಬುಧ ,ಚಾಂದ್ರ ಯುಗಾದಿ
- 13.04.2024 ಮೇಷ ಸಂಕ್ರಮಣ
ಮೇಷ :ಜನ್ಮ ರಾಶಿಯಲ್ಲಿ ಗುರು ಮತ್ತು ರವಿ ಯುತಿಯಾಗಿ ಸ್ಥಿತರಾಗಿದ್ದುಸಭೆ ಸಮಾರಂಭಗಳಲ್ಲಿ
ಅತಿಥಿಗಳಾಗಿ ಭಾಗವಹಿಸುವ ಅವಕಾಶ ಒದಗಿ ಬರಲಿದೆ .ನಿಮ್ಮ ವಯಕ್ತಿಕ ಬುದ್ಧಿವಂತಿಕೆಯಿಂದ ಬಂದಿರುವ
ಅವಕಾಶವನ್ನು ನಿಮ್ಮದಾಗಿಸಿಕೊಳ್ಳುವಿರಿ . ನಿಮ್ಮ ಮಾತಿಗೆ ಸಮಾಜದಲ್ಲಿ ಮನ್ನಣೆ ದೊರೆಯಲಿದೆ .
ಸಂಗಾತಿಯ ಜೊತೆಗಿನ ವೈಮನಸ್ಸು ಕೊನೆಯಾಗಲಿದೆ .ಆತ್ಮೀಯರೊಬ್ಬರು ಸಕಾಲದಲ್ಲಿ ಬಂದು ಹಣದ
ಸಹಾಯ ಮಾಡಲಿದ್ದಾರೆ . ಬರುವ ಆದಾಯದಲ್ಲಿ ಹೆಚ್ಚಳ ಕಂಡು ಬರಲಿದೆ .ಮಹಿಳಾ ಉದ್ಯೋಗಿಗಳಿಗೆ
ಶುಭ ವಾರವಾಗಲಿದೆ .ರಾಹುವಿನ ವ್ಯಯ ಸ್ಥಿತಿ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಲೇ ಇರುತ್ತದೆ .
ನಾಗ ದೇವರ ಪ್ರಾರ್ಥನೆ ಅತೀ ಅಗತ್ಯವಾಗಿದೆ .
ವೃಷಭ :ನಿಮ್ಮ ತಾಯಿಯವರ /ನಿಮ್ಮ ಆರೋಗ್ಯ ಸ್ಟಿತಿಯಲ್ಲಿ ಸ್ವಲ್ಪ ಏರುಪೇರು ಕಂಡುಬರುತ್ತದೆ .ಮನೆ
ಬದಲಾವಣೆ ಮಾಡುವ ಬಗ್ಗೆ ಯೋಚನೆ ಮಾಡುವ ಸಾಧ್ಯತೆ ಇದೆ . ಆಸ್ತಿಯ ಬಗ್ಗೆ ಸಮಸ್ಯೆಯೊಂದು
ಬರಲಿದೆ. ಸಂಕ್ರಾಂತಿಯಿಂದ ಒಂದು ತಿಂಗಳ ಕಾಲ ರವಿ ಮೇಷ ರಾಶಿಯಲ್ಲಿ ಇರುವ ವೇಳೆಯಲ್ಲಿ ನೀವು
ಎಚ್ಚರವಿರಬೇಕು. ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವ ವಿಷಯದಲ್ಲಿ ತಮ್ಮನ್ನು ತೊಡಗಿಸಿ
ಕೊಳ್ಳುವಿರಿ .ತೋಟಗಾರಿಕೆಯಲ್ಲಿ ತೊಡಗಿಸಿ ಕೊಂಡವರಿಗೆ ಉತ್ತಮ ಲಾಭ ಬರಲಿದೆ .ಹಿರಿಯರ ಹೆಸರಿನ
ಭೂಮಿ ಚರ್ಚೆಯ ವಿಷಯಗಲಿದೆ . ದೈವಾನುಗ್ರಹದ ಕೊರತೆಯ ಕಾರಣ ದುಡುಕಿನ ನಿರ್ಧಾರಕ್ಕೆ ಬರಬೇಡಿರಿ
.
ಮಿಥುನ : ರವಿ ಮತ್ತು ಗುರು ಜೊತೆಯಾಗಿ ಲಾಭ ಕ್ಷೇತ್ರದಲ್ಲಿ ಇರುವ ಶುಭ ಸಮಯ ,ಬರುತ್ತಿರುವ
ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಖರ್ಚಿನಲ್ಲಿ ಹಿಡಿತವನ್ನು ಸಾಧಿಸಿರುವ ನೀವು ಹಣದ
ಕೊರತೆಯನ್ನು ಎದುರಿಸುವುದಿಲ್ಲ. ಸುಖ ಸ್ಥಾನದಲ್ಲಿ ಕೇತು ಇರುವುದರಿಂದ ಮನಸ್ಸಿನ ಮೇಲೆ
ಯಾವುದೋ ಬೇಸರವೊಂದು ಇರುತ್ತದೆ .ಕುಟುಂಬದ ಸದಸ್ಯರ ಮನದಾಳವನ್ನು ಅರಿತು ನಡೆಯುವ
ಅನಿವಾರ್ಯತೆ ನಿಮಗಿದೆ .ವೈವಾಹಿಕ ಜೀವನದ ಸುಖ ನಿಮಗಿರುತ್ತದೆ ಆದರ್ಶ ದಾಂಪತ್ಯ
ನಿಮ್ಮದಾಗಿರುತ್ತದೆ . ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿ ಯಶಸ್ಸನ್ನು ಗಳಿಸಲಿದ್ದಾರೆ .
ಕರ್ಕಾಟಕ : ಬರುವ ದಿನಾಂಕ 23.04.2024 ರಂದು ಕುಜ ಮುಂದಿನ ಮನೆಗೆ ಸಂಚಾರ ಮಾಡುವ
ದಿನವಾಗಿದೆ .ಅಲ್ಲಿಯವರೆಗೆ ನಿಮ್ಮ ಪ್ರತಿಯೊಂದು ವ್ಯವಹಾರದಲ್ಲಿ ಉದ್ಯೋಗದಲ್ಲಿ ಎಚ್ಚರಿಕೆಯನ್ನು
ವಹಿಸಬೇಕಾಗಿದೆ . ವೈವಾಹಿಕ ಜೀವನದಲ್ಲಿ ತಗ್ಗಿ ಬಗ್ಗಿ ನಡೆಯ ಬೇಕಾಗಿದೆ . ಉದ್ಯೋಗದಲ್ಲಿ ಏರು
ಪೇರು ಬದಲಾವಣೆ ಆಗುವ ಸೂಚನೆ ಇರುತ್ತದೆ . ನಿಮ್ಮ ಸಹೋದರಿಯ ಜೀವನದಲ್ಲಿ ಅನಿರೀಕ್ಷಿತ
ಘಟನೆಯೊಂದು ನಡೆಯುವ ಸಾಧ್ಯತೆ ಇದೆ. ಅನಿವಾರ್ಯವಾಗಿ ಬೇರೆಯವರಿಂದ ಹಣದ ಸಹಾಯ ಪಡೆಯುವಿರಿ . ವಾದ-ವಿವಾದಗಳಿಂದ ದೂರ ಇರುವುದು ಅತೀ ಅವಶ್ಯಕವಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವಾಗ ನಿಮ್ಮ ಮಾತಿನ ಶೈಲಿ ಮೃಧುವಾಗಿರಲಿ.
ಸಿಂಹ :ಕುಜ ಮತ್ತು ಶನಿ ಸಪ್ತಮದಲ್ಲಿ ,ಅಷ್ಟಮದಲ್ಲಿ ಬುಧ ,ಶುಕ್ರ, ರಾಹು ಇರುವುದು ನಿಮ್ಮ
ಗಮನದಲ್ಲಿ ಇರಬೇಕು . ಆತುರದ ನಿರ್ಧಾರ ಆಪತ್ತಿಗೆ ನಾಂದಿ ಆಗಲಿದೆ . ಹಣಕಾಸಿನ ವಿಷಯದಲ್ಲಿ
,ಯಾವುದೇ ವ್ಯವಹಾರದಲ್ಲಿ ತಮ್ಮ ಸಂಗಾತಿಯೊಂದಿಗೆ ಸಮಾಲೋಚನೆ ನಡೆಸಿ ಜೊತೆಯಾಗಿಯೇ
ಮುoದುವರಿಯುವುದು /ಹಿರಿಯರ ಸಲಹೆ ಪಡೆಯುವುದು ಅತೀ ಅವಶ್ಯವಾಗಿದೆ . ಬಹಳ ಉತ್ತಮವಾದ
ದೈವಾನುಗ್ರಹವಿರುವ ಸಮಯವಾಗಿದೆ . ಪಾಲುಗಾರಿಕೆ ವ್ಯವಹಾರ ನಿಮ್ಮ ಸಿಟ್ಟಿಗೆ ಹೊಂದಾಣಿಕೆ
ಆಗುವುದಿಲ್ಲ. ಮಕ್ಕಳೊಂದಿಗೆ ಹೊಂದಾಣಿಕೆಯಿಂದಲೇ ಮುಂದೆ ಸಾಗಿರಿ . ಗೋಸೇವೆ ನಿಮಗೆ ಅಗತ್ಯವಿದೆ
ಸಂಗಾತಿಯೊಂದಿಗೆ ಜಟಾಪಟಿ ಬೇಡವೇ ಬೇಡ . “ಕೆಳಗಿನ ಗದ್ದೆಗೆ ಉತ್ತಮ ಬೆಳೆ “
ಕನ್ಯಾ : ರವಿ ಮತ್ತು ಗುರು ಅಷ್ಟಮದಲ್ಲಿ ಕುಜನ ಮನೆಯಲ್ಲಿ ,ಹಾಗೆಯೇ ಕುಜ ಶನಿಯ ಜೊತೆಯಲ್ಲಿ
ಇರುವುದು ಹಲವಾರು ವಿಷಯಗಳಲ್ಲಿ ,ವ್ಯವಹಾರದಲ್ಲಿ ದುಡುಕಿ ನಿರ್ಧಾರ ತೆಗೆದು ಕೊಳ್ಳುವ
ಕಾಲವಾಗಿರುತ್ತದೆ . ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಇರುತ್ತದೆ .ದೇಹದ ತೂಕ ,ಮನಸ್ಸಿನ
ಒತ್ತಡ ಕಡಿಮೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ . ನಿತ್ಯವೂ ಮೃತ್ಯುಂಜಯ ಜಪವನ್ನು 1008
ಬಾರಿ ಮಾಡಲೇ ಬೇಕು .ವೈದ್ಯರಲ್ಲಿ ನಿಮ್ಮ ಪ್ರಾಯಕ್ಕೆ ಅನುಗುಣವಾಗಿಯೇ ಈಸಿಜಿ ,ಎಕೋ ,ಟ್ರೆಡ್
ಮಿಲ್ ಪರೀಕ್ಷೆಗಳನ್ನು ಮಾಡಿಸುವುದು ಅವಶ್ಯವಾಗಲಿದೆ . ಸಹೋದರ ವರ್ಗದವರೊಂದಿಗೆ ವೈಮನಸ್ಸು
ಬರಲಿದೆ .ಎಚ್ಚರವಿರಲಿ .
ತುಲಾ :ಉತ್ತಮವಾದ ದೈವಾನುಗ್ರಹವಿರುವ ಸಮಯವಿದು .ಮೇ ಒಂದರ ನಂತರ ಗುರು ಅಷ್ಟಮಕ್ಕೆ
ಹೋಗುತ್ತಾನೆ .ಈಗದಿಂದಲೇ ಮೃತ್ಯುಂಜಯ ಜಪವನ್ನು ಆರಂಭಿಸಿರಿ. ಪ್ರಸ್ತುತ ನೀವು ಮಾಡುತ್ತಿರುವ
ಉದ್ಯೋಗವನ್ನು ಬದಲಾಯಿಸುವ ,ಬಿಡುವ ಸಾಧ್ಯತೆ ಕಂಡುಬರುತ್ತಿದೆ. ಒಳ್ಳೆಯ ಮನಸ್ಸಿನಿಂದ ನೀವು
ಸದಾ ಇರುವ ಕಾರಣ ಎಲ್ಲರ ಸಹಕಾರ ಪಡೆಯುವಿರಿ . ಕುಜ ಶನಿ ಜೊತೆಯಲ್ಲಿ ಇರುವ ಕಾರಣ ಮಕ್ಕಳ
ಬಗ್ಗೆ ಮೃಧುತ್ವ ನಿಮ್ಮಲ್ಲಿ ಇರಲಿ . “ಹೊಡಿ ಬಡಿ ಹೋಗಿದೆ “ನೆನಪಿರಲಿ .ಬರುವ ಆದಾಯಕ್ಕೆ ಯಾವುದೇ
ಕೊರತೆ ಇರಲಾರದು . ವ್ಯಯದಲ್ಲಿ ಇರುವ ಕೇತುವಿಗೆ ಗಣಪತಿ ದೇವರ ಪ್ರಾರ್ಥನೆ ಅಗತ್ಯವಿದೆ ನೆನಪಿರಲಿ
.ಕೆಂಪು ಕಡಲೆಯನ್ನು ಪ್ರತಿದಿನ ಗಣಪತಿ ದೇವರಿಗೆ ಅರ್ಪಿಸಿರಿ . ಹಿಂದಿನ ದಿನ ನೀರಲ್ಲಿ ಹಾಕಿಟ್ಟು ಮರುದಿನ
ಅರ್ಪಿಸಬೇಕು .
ವೃಶ್ಚಿಕ : ಲಾಭ ಕ್ಷೇತ್ರದಲ್ಲಿ ಇರುವ ಕೇತು ಮತ್ತು 6 ನೇ ಮನೆಯಲ್ಲಿ ಇರುವ ರವಿಯನ್ನು ಹೊರತು
ಪಡಿಸಿದರೆ ಉಳಿದವರೆಲ್ಲರೂ ಪ್ರತಿಕೂಲ ಫಲವನ್ನು ನೀಡುವವರೇ ಆಗಿರುತ್ತಾರೆ .ಮೇ ಒಂದರ ವರೆಗೆ
ಕಾಯಲೇ ಬೇಕು . ವಿದ್ಯಾರ್ಥಿಗಳು ಏಕಾಗ್ರ ಚಿತ್ತದಿಂದ ಓದಲೇ ಬೇಕು .ದಿನಾಂಕ 13.04.2024 ರ ನಂತರ
ರಾಜಕೀಯದಲ್ಲಿ ಇರುವವರಿಗೆ ,ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಶುಭ ಸಮಯ
.ಚುನಾವಣೆಯಲ್ಲಿ ಭಾಗವಹಿಸುವವರಿಗೆ ಶುಭೋದಯದ ಕಾಲ . ಉದ್ಯೋಗದಲ್ಲಿ ಭಡ್ತಿ ಸಿಗಲಿದೆ .ವಿದೇಶಕ್ಕೆ ಹೋಗುವ ಭಾಗ್ಯವಿದೆ . ಕುಜ ಶನಿ ಇವರಿಗೆ ಪರಿಹಾರ ಮಾಡಿಕೊಳ್ಳಬೇಕು .ನೀವೇ ಮನೆಯಲ್ಲಿ
ಮಹಾ ಸುದರ್ಶನ ಮಾಲಾ ಮಂತ್ರವನ್ನು ಪ್ರತಿನಿತ್ಯ ಹೇಳಬೇಕು .ಜಾಗ್ರತೆಯಿಂದ ಇರಬೇಕು .
ಧನು: ಮೇ ಒಂದರ ವರೆಗೆ ದೈವಾನುಗ್ರಹ ಇರುವ ಸಮಯ ನಿಮ್ಮದಾಗಿದೆ ,ಮೃತ್ಯುಂಜಯ ಮಂತ್ರವನ್ನು
ಆರಂಭಿಸಿರಿ. ಉದ್ಯೋಗದಲ್ಲಿ ಬದಲಾವಣೆ ಆಗಲಿರುವ ಸಮಯ ಬರುತ್ತಿದೆ .ಸರಿಯಾದ ಸಹಕಾರವಿಲ್ಲದೆ
ನಿಮ್ಮ ಹಲವಾರು ಕೆಲಸಗಳು ಅಪೂರ್ಣ ಸ್ಟಿತಿಯಲ್ಲಿ ನಿಂತು ಹೋಗಲಿದೆ . ವಿದ್ಯಾರ್ಥಿಗಳು
ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು .ಹಣಕಾಸಿನ ವಿಚಾರದಲ್ಲಿ ಉತ್ತಮ ಸಮಯವಾಗಿದೆ . ಕೈ ಕಾಲು
ನೋವು ಆರಂಭವಾಗುವ ಸಮಯ [60+]ಯೋಗ ಪ್ರಾಣಾಯಾಮ ಆರಂಭಿಸಿರಿ ವಿಷ್ಣು ಸಹಸ್ರನಾಮ
ಪಾರಾಯಣ ಆರಂಭಿಸಿರಿ ಕುಜ ದಿನಾಂಕ 23 ರಂದು ಮೀನ ರಾಶಿಗೆ ಅಂದರೆ 4 ನೇ ಮನೆಗೆ ರಾಹುವಿನ ಬಳಿಗೆ
ಬರುತ್ತಾನೆ .ನರಸಿಂಹ ಮಂತ್ರದ ಪಾರಾಯಣ ಆರಂಭಿಸಿರಿ .
ಮಕರ: ಸಾಡೇ ಸಾತ್ ಶನಿಯ ಪ್ರಭಾವ ನಿಮಗೆ 29.03.2025 ರ ವರೆಗೆ ಇದೆ ಕುಜನೂ ಪ್ರಸ್ತುತ
ಶನಿಯೊಂದಿಗೆ ಇದ್ದಾನೆ . ನೀವೇ ಶುದ್ಧಾಚಾರದಿಂದ ಪ್ರತಿನಿತ್ಯ ಮನೆಯ ದೇವರಿಗೆ ಎಳ್ಳೆಣ್ಣೆ ದೀಪವನ್ನು
ಹಚ್ಚಿರಿ ,ಮೃತ್ಯುಂಜಯ ಮಂತ್ರ [ತ್ರ್ಯಂಬಕಮ್ ………] ವನ್ನು ಪ್ರತಿನಿತ್ಯ ಪಾರಾಯಣ ಮಾಡಿರಿ
.ಯಾವುದೇ ದೇವಾಲಯದಲ್ಲಿ ಅರ್ಧ ಗಂಟೆಯಲ್ಲಿ ಮಾಡಿ ಮುಗಿಸುವ ಹೋಮದಿಂದ ಒಂದು ವರ್ಷಗಳ
ಕಾಲದ ದೋಷ ಪರಿಹಾರವಾದೀತೇ …. ಖಂಡಿತಾ ಇಲ್ಲ ಮಾತಿನಲ್ಲಿ ಹಿಡಿತವಿರಲಿ ,ಹಣದಲ್ಲಿ
ಹಿಡಿತವಿರಲಿ . ಬರುತ್ತಿರುವ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯನ್ನು ಕಾಣುವಿರಿ . ತಂದೆಯವರ
ಅನಾರೋಗ್ಯದ ಬಗ್ಗೆ ನಿಮ್ಮ ಗಮನ ಅಗತ್ಯವಿದೆ . ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕಿರಿ ಕಿರಿ ದಿನಾಂಕ 13 ರಿಂದ
ಆರಂಭವಾಗಲಿದೆ . ಕೋರ್ಟ್ ಮೆಟ್ಟಲೇರುವ ಸಾಧ್ಯತೆ ಇದೆ .
ಕುಂಭ : ಸಾಡೇ ಸಾತ್ ಶನಿಯ ಪ್ರಭಾವ ಚಾಲ್ತಿಯಲ್ಲಿದೆ .ಶನಿಯ ಜೊತೆಗಿರುವ ಕುಜ ದೋಷದ
ಪ್ರಮಾಣವನ್ನು ಹೆಚ್ಚಿಸುತ್ತಾನೆ. ಯಾವ ಗ್ರಹರೂ ಸಹಕಾರ ಕೊಡದೆ ಇದ್ದಾಗ ನೀವು ಶುದ್ಧಾಚಾರದಿಂದ
ಮಾಡುವ ಆಚರಣೆಯೇ ನಿಮಗೆ ಸಹಕಾರವಾಗಿ ಬರಲಿದೆ . ನಿಮ್ಮ ಮನಸ್ಸಿನಲ್ಲಿರುವ ನೋವನ್ನು
,ಸಮಸ್ಯೆಯನ್ನು ಯಾರಿಗೂ ಹೇಳಿಕೊಳ್ಳದೆ ನಿಮ್ಮಲ್ಲಿಯೇ ಕೊರಗುತ್ತೀರಿ . ರವಿಯ ಪ್ರಭಾವ ಮೇಷ
ಸಂಕ್ರಾಂತಿಯ ನಂತರ ನಿಮ್ಮ ಸಮಸ್ಯೆಯನ್ನು ಗಮನಾರ್ಹವಾಗಿ ಇಳಿತ ಮಾಡಲಿದೆ . ಸಂಗಾತಿಯ ಸಹಕಾರ
ನಿಮಗೆ ಸಿಗಲಿದೆ. ತೋರ್ಪಡಿಕೆಗಾಗಿ ಖರ್ಚು ಮಾಡಲು ಹೋಗಬೇಡಿರಿ .ಕುಲ ದೇವರ ದರ್ಶನ ಅಗತ್ಯವಿದೆ .
ರಾಜಕೀಯದಲ್ಲಿ ಇರುವವರಿಗೆ ಉತ್ತಮ ಕಾಲ ಬರುತ್ತಿದೆ . ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .
ಮೀನ : ಸಾಡೇ ಸಾತ್ ಶನಿ ತನ್ನ ವೈರಿ ಕುಜನ ಜೊತೆಗೆ ವ್ಯಯದಲ್ಲಿ ಇದ್ದಾನೆ . ಧನ ವ್ಯಯವಾಗುವ
ಸೂಚನೆ ಇದೆ . ಯಾವುದೇ ವ್ಯವಹಾರ ಉದ್ಯೋಗದಲ್ಲಿ ಹಣ ಕಳೆದುಕೊಳ್ಳುವ ಅವಕಾಶಗಳೇ
ಅಧಿಕವಾಗಿದೆ. ಜಾಮೀನು ಸಹಿ ಹಾಕಲು ಹೋಗಬೇಡಿರಿ . ಕುಟುಂಬದಲ್ಲಿ ಮನಸ್ತಾಪಗಳು ಉಂಟಾಗುವ
ಸಮಯ . ತಂಪು ಪಾನೀಯ ಸೇವನೆಯಿಂದ ಗಂಟಲು ಕಿರಿಕಿರಿ ಉಂಟಾಗಲಿದೆ ,ವೃತ್ತಿ ಕ್ಷೇತ್ರದಲ್ಲಿ ವೈರಿಗಳ
ಕಾರಣದಿಂದ ತೊಂದರೆಯಾಗುವ ಸಾಧ್ಯತೆ ಇರುವ ಕಾರಣ ಬಹಳ ಎಚ್ಚರವಿರಬೇಕು . ಎಲ್ಲರಲ್ಲಿಯೂ
ನಿಮಗೆ ಅನುಮಾನ ಕಾಡಲಿದೆ . ಇನ್ನೊಬ್ಬರಲ್ಲಿ ಅವರಾಡುವ ಮಾತಿನ ಶೈಲಿಯಲ್ಲಿ ನಂಬಿಕೆ ಬೇಡ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು . ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ ಕಾರ್ಯಕ್ರಮಗಳಿಗೆ
ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು . ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು
ಮಾಡಿಕೊಡಲಾಗುವುದು .





































